ಬೆಳಂದೂರು ಕಾಲೇಜಿನಲ್ಲಿ ಮಾದಕ ವ್ಯಸನ ಮುಕ್ತ ಕರ್ನಾಟಕ ಪರಿವರ್ತನೆ- ಜಾಗೃತಿ ಕಾರ್ಯಕ್ರಮ

0

ಕಾಣಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಹಾಗೂ ಪ್ರಗತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಬೆಳಂದೂರು ಇದರ ವತಿಯಿಂದ ಮಾದಕ ವ್ಯಸನ ಮುಕ್ತ ಕರ್ನಾಟಕ ಪರಿವರ್ತನೆ ಅಭಿಯಾನದಡಿ ಜಾಗೃತಿ ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಶಂಕರ್ ಭಟ್ ಪಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಬಕಾರಿ ಇಲಾಖೆಯ ನಿರೀಕ್ಷಕರಾದ ಸುಜಾತ ಇವರು ಮಾದಕ ವ್ಯಸನದ ಬಗ್ಗೆ ಹಾಗೂ ಈ ಚಟಕ್ಕೆ ವಿದ್ಯಾರ್ಥಿಗಳು ಹೇಗೆ ಬಲಿಯಾಗುತ್ತಾರೆ. ಭವಿಷ್ಯದಲ್ಲಿ ಇದರ ದುಷ್ಪರಿಣಾಮ ಏನು ವಿದ್ಯಾರ್ಥಿಗಳು ಯಾವ ರೀತಿ ತಮ್ಮ ಗುರಿಯನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಪುತ್ತೂರಿನ ಪೆನಾಲ್ ವಕೀಲರಾದ ರಾಜೇಶ್ವರಿ ಇವರು ಲಿಂಗತ್ವ ವೇದಿಕೆ ಅಡಿ ಲಿಂಗ ತಾರತಮ್ಯದ ಬಗ್ಗೆ ಸವಿವಾರವಾಗಿ ಮಾಹಿತಿ ನೀಡಿದರು. ಕಡಬ ತಾಲೂಕು ಸಂಪನ್ಮೂಲ ವ್ಯಕ್ತಿಯ ವ್ಯಕ್ತಿಯಾದ ಧನ್ಯಶ್ರೀರವರು ಮಾದಕ ಮುಕ್ತ ಅಭಿಯಾನದ ಬಗ್ಗೆ ಪ್ರತಿಜ್ಞಾವಿಧಿ ನಿರೂಪಿಸಿದರು.

ಬೆಳಂದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಮಾಹಿತಿ ನೀಡುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು ಹಾಗೂ ಇದಕ್ಕೆ ಸಂಬಂಧಪಟ್ಟ ಅಪರಾಧಗಳನ್ನು ಗಮನಿಸಿ ಸಂಬಂಧಪಟ್ಟ ಇಲಾಖೆ ಅಥವಾ ಪಂಚಾಯತಿಗೆ ಮಾಹಿತಿ ನೀಡು ಒದಗಿಸುವಂತೆ ತಿಳಿಸಿದರು. ಸಂದರ್ಭದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಬಿ ಕೊಡಂಗೆ, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ವಿನುತ ಎ, ಪುತ್ತೂರು ಅಬಕಾರಿ ಇಲಾಖೆಯ ಶರತ್ ಕುಮಾರ್ ಕೆ ಬಿ, ಪ್ರಗತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಮಲರವರು ಉಪಸ್ಥಿತರಿದ್ದರು. ಪ್ರಗತಿ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳಾದ ಗೌರಿ, ಪಾರ್ವತಿ ಬೊಮ್ಮೊಡಿ, ಸವಿತಾ ಅಮೈ, ಸುಧಾ, ಪಂಚಾಯತ್ ಸಿಬ್ಬಂದಿ ಹರ್ಷಿತ್ ಉಪಸ್ಥಿತರಿದ್ದರು ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಕು ಪೃಥ್ವಿ ಕಾರ್ಯಕ್ರಮ ನಿರೂಪಿಸಿದರು. ಕು ಲಿಖಿತ ಸ್ವಾಗತಿಸಿ, ಕು ಜಸ್ಮಿತ ವಂದಿಸಿದರು.

LEAVE A REPLY

Please enter your comment!
Please enter your name here