ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಮಜ್ದೂರು ಸಂಘದ ವತಿಯಿಂದ ವಿಶ್ವಕರ್ಮ ಜಯಂತಿ ಅಂಗವಾಗಿ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.

ಜಿಲ್ಲಾ ಕಾರ್ಯಾಲಯ, ತಾಲೂಕು ಯೂನಿಯನ್ ಕೇಂದ್ರ ಮತ್ತು ಕಾರ್ಯಕರ್ತರ–ಕಾರ್ಮಿಕರ–ಹಿತೈಷಿಗಳ ಮನೆಗಳಲ್ಲಿ ಕಾರ್ಮಿಕ ದಿನಾಚರಣೆ ಏರ್ಪಡಿಸಲಾಗಿತ್ತು. ಜಿಲ್ಲಾ ಕೇಂದ್ರ ಕಾರ್ಯಾಲಯದಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಉಪನ್ಯಾಸಕ ಡಾ. ಮಾಧವ್ ಎಂ.ಕೆ. ಮುಖ್ಯ ಭಾಷಣ ಮಾಡಿದರು. ಬಿ.ಎಂ.ಎಸ್. ಸಂಸ್ಥಾಪಕರಾದ ದತ್ತೋಪಂತ್ ಥೆಂಗಡಿಯವರ ಸಂಘಟನಾ ದೃಷ್ಟಿಕೋನ ಹಾಗೂ ಅವರ ದಾರ್ಶನಿಕತೆಯನ್ನು ಅವರು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿಎಂಎಸ್ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಯು. ಅನಿಲ್ ಕುಮಾರ್ ಉಪ್ಪಿನಂಗಡಿ ಮಾತನಾಡಿ ಜಿಲ್ಲೆಯಲ್ಲಿ ಸಂಘಟನೆಯ ಬೆಳವಣಿಗೆಗೆ ಸಂಘಟನೆಯ ಹಿರಿಯರ ಮಾರ್ಗದರ್ಶನ, ಸಂಘ ಪರಿವಾರದ ಹಿರಿಯರ ಸಲಹೆ, ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಸಹಕಾರ ಹಾಗೂ ಕಾರ್ಯಕರ್ತರ ಶ್ರಮವೇ ಕಾರಣವಾಗಿದೆ. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರ, ಅಧಿಕಾರಿಗಳ, ಇಲಾಖೆಯ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಮನವಿ, ಮಾತುಕತೆ, ಹೋರಾಟ ಮತ್ತು ಸಂವಾದಗಳನ್ನು ನಿರಂತರವಾಗಿ ನಡೆಸುತ್ತಿದ್ದೇವೆ. ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು, ತೊಂದರೆಗೊಳಗಾದ ಕಾರ್ಮಿಕರಿಗೆ ಆರ್ಥಿಕ ನೆರವು ಒದಗಿಸುವುದು ಹಾಗೂ ಆತ್ಮವಿಶ್ವಾಸ ತುಂಬುವ ಕೆಲಸಗಳನ್ನು ಮಾಡಲಾಗಿದೆ. ಮುಂದೆಯೂ ಇದೇ ರೀತಿಯಾಗಿ ಕಾರ್ಮಿಕರ ಸೇವೆಯೇ ರಾಷ್ಟ್ರಸೇವೆ ಎಂಬ ಭಾವನೆಯೊಂದಿಗೆ ಸಂಘಟನೆ ಕಾರ್ಯ ನಿರ್ವಹಿಸಲಿದೆ ಎಂದರು.
ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಿರಿಯರಿಗೆ ಕೃತಜ್ಞತೆ ಸಲ್ಲಿಸಿದ ಅವರು ವಿಶ್ವಕರ್ಮ ದೇವರ ಅನುಗ್ರಹದಿಂದ ಸಂಘಟನೆಯ ಧ್ವಜ ಜಿಲ್ಲೆಯಲ್ಲಿ ಬಾನೆತ್ತರಕ್ಕೆ ಏರಲಿ ಎಂದು ಆಶಿಸಿದರು.
ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ರೋಹಿತಾಶ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಸೇರಿದಂತೆ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸತೀಶ್ ಶೆಟ್ಟಿ ಸ್ವಾಗತಿಸಿದರು, ರೋಹಿತಾಶ್ವ ವಂದಿಸಿದರು. ಗೋಪಾಲಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು.
ಸಂಘಟನೆಯ ಹಿರಿಯರಾದ ವಿಶ್ವನಾಥ್ ಶೆಟ್ಟಿ ಹಾಗೂ ರಾಜ್ಯ ಪದಾಧಿಕಾರಿಗಳಾದ ಜಯರಾಜ್ ಸಾಲ್ಯಾನ್, ರೇವತಿ ರತ್ನಾಕರ, ಪ್ರಜಿತ್ ಕಾಸರಗೋಡು, ಭಗವಾನ್ ದಾಸ್ ಉಳ್ಳಾಲ ಜೊತೆಗೆ ಜಿಲ್ಲಾ ಪದಾಧಿಕಾರಿಗಳಾದ ಉದಯ ಕುಮಾರ್, ವಿಘ್ನೇಶ್, ವಸಂತ ಕುಮಾರ್ ಬಂಟ್ವಾಳ, ಕುಮಾರನಾಥ್ ಉಜಿರೆ, ನಾರಾಯಣ ಪೂಜಾರಿ ಬಂಟ್ವಾಳ, ಪ್ರಕಾಶ್ ಸುಳ್ಯ, ಮಧುಸೂಧನ್ ಸುಳ್ಯ, ಶಶಿ ಕುಮಾರ್ ಸುಳ್ಯ, ಚಂದ್ರಶೇಖರ ಕಡಬ, ಪುರಂದರ ರೈ ಕುಂಬ್ರ, ರಾಜೇಶ್ ಮರೀಲ್, ಗಿರೀಶ್ ಮಲ್ಲಿ ಪುತ್ತೂರು, ಉದಯ ಬೆಳ್ತಂಗಡಿ, ನಾಗರಾಜ್ ಬೆಳ್ತಂಗಡಿ, ರಘುಪತಿ ಬೆಳ್ತಂಗಡಿ, ಶ್ರೀಕಾಂತ್ ಬಂಟ್ವಾಳ, ರಾಜೇಶ್ ಸುವರ್ಣ ಮೂಡಬಿದ್ರೆ ಪ್ರಮೋದ್ ಪೆರಾಡಿ, ನಾಗೇಶ್ ವಿಟ್ಲ, ಪ್ರಶಾಂತ್, ಕಿರಣ್ ಕುಮಾರ್, ಶಶಿಧರ್ ಮಂಗಳೂರು, ಶಶಿಕಲಾ ಬೆಳ್ತಂಗಡಿ, ನಳಿನಿ ಬಂಟ್ವಾಳ, ಸಾಮೂವೆಲ್ ಮಂಗಳೂರು ಮೊದಲಾದವರು ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.