





ಬಡಗನ್ನೂರು: ಬಡಗನ್ನೂರು ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಶಾರದಾಪೂಜೆ ಹಾಗೂ “ಅಕ್ಷರಾಭ್ಯಾಸ” ಕಾರ್ಯಕ್ರಮ ಸೆ.22ರಂದು ನಡೆಯಿತು.


ಪ್ರಾರಂಭದಲ್ಲಿ ಶಾಲಾ ಮಕ್ಕಳು, ಪೋಷಕರು, ಶಿಕ್ಷಕ ವೃಂದದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಮಹಾಮಂಗಳಾರತಿ ನಡೆದು ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯ ನಡೆಯಿತು.






ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್ ಗೌಡ ಕನ್ನಯ, ಉಪಾಧ್ಯಕ್ಷೆ ಸುಲೋಚನಾ ಎಸ್ ನಾಯ್ಕ ನೇರ್ಲಂಪ್ಪಾಡಿ, ಮಾಜಿ ಅಧ್ಯಕ್ಷರುಗಳಾದ ಮಹಾಲಿಂಗ ಪಾಟಾಳಿ ಕುದ್ಕಾಡಿ, ಬಾಬು ಮೂಲ್ಯ ಮೖೆಂದನಡ್ಕ, ಮಾಜಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ, ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾದ ರಾಮಣ್ಣ ಗೌಡ ಬಸವಹಿತ್ತಿಲು, ಎಸ್.ಡಿಯಂಸಿ ಮಾಜಿ ಸದಸ್ಯ ಶ್ರೀಕೃಷ್ಣ ಗೌಡ, ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಶಿಕ್ಷಕ ವೃಂದದವರು, ಶಿಕ್ಷಣಾಭಿಮಾನಿಗಳು ಮತ್ತು ಊರಿನವರು ಭಾಗವಹಿಸಿದ್ದರು.










