ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನವರಾತ್ರಿ ಉತ್ಸವದ ಮೊದಲ ದಿನದಂದು ಸಂಜೆ ಗಂಟೆ 5ರಿಂದ ಶ್ರೀ ದುರ್ಗಾ ವಾಹಿನಿ ಮಹಿಳಾ ಭಜನಾ ಮಂಡಳಿ ಮಾಣಿಯಡ್ಕ,ಕಾವು ಹಾಗೂ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಮಯ್ಯಾಳ ಇವರಿಂದ ಭಜನಾ ಸೇವೆ ಹಾಗೂ 7ರಿಂದ ರಂಗ ಪೂಜೆ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಮ ಪಿ, ಶಿವರಾಂ ಶರ್ಮ, ನಾರಾಯಣಿ ಅಮ್ಮ, ಶ್ರೀ ಕೃಷ್ಣ ಭಟ್ ಮುಂಡ್ಯ, ನಾಗಪ್ಪ ಗೌಡ ಬೊಮ್ಮಟ್ಟಿ, ಆನಂದ ರೈ ಸಾಂತ್ಯ, ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.