ಪುತ್ತೂರು: ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಹನುಮಗಿರಿ ಇಲ್ಲಿ ಶಾರದಾ ಪೂಜೆಯನ್ನು ಸೆ.22ರಂದು ಆಚರಿಸಲಾಯಿತು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್, ಉಪಾಧ್ಯಕ್ಷರಾದ ನಿರ್ಮಲ, ಆಡಳಿತ ಮಂಡಳಿಯ ಸದಸ್ಯರಾದ ಡಾ. ಸೌಮ್ಯ ಜೋಶಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲಾ ಮುಖ್ಯ ಕಚೇರಿಯಲ್ಲಿ ಗಣಹೋಮ ಕಾರ್ಯಕ್ರಮವನ್ನು ಹನುಮಗಿರಿ ಆಂಜನೇಯ ಕ್ಷೇತ್ರದ ಅರ್ಚಕರು ನೆರವೇರಿಸಿಕೊಟ್ಟರು. ವಿದ್ಯಾರ್ಥಿಗಳು ಭಜನೆ ಮತ್ತು ಕುಣಿತ ಭಜನೆಯ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಚೆಂಡೆ ವಾದ್ಯದೊಂದಿಗೆ ಶಾರದಾಮಾತೆಗೆ ಪೂಜೆಯನ್ನು ಸಲ್ಲಿಸಿ, ಮಂಗಳಾರತಿಯನ್ನು ಬೆಳಗಿದರು. ನಂತರ ಪ್ರಸಾದ ವಿತರಣೆ ಮಾಡಲಾಯಿತು.