ಪುತ್ತೂರು: ಆಯುಧ ಪೂಜಾ ಸೇವಾ ಸಮಿತಿ ಅಶ್ವತ್ಥಕಟ್ಟೆ ಪರಿಸರದಲ್ಲಿ ನಡೆಯಲಿದೆ.
ಬೆಳಗ್ಗೆ 7ರಿಂದ ಗಣಪತಿ ಹೋಮ, 8ಕ್ಕೆ ದೀಪಪ್ರಜ್ವಲನೆ ಮೂಲಕ ಆಯುಧಪೂಜಾ ಕಾರ್ಯಕ್ರಮ ಉದ್ಘಾಟನೆ, 8.30ರಿಂದ ಅಶ್ವತ್ಥ ವೃಕ್ಷಪೂಜೆ ಹಾಗೂ ವಾಹನಪೂಜೆಗೆ ಚಾಲನೆ, 9 ರಿಂದ ಭಜನೆ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಸಂಜೆ 5ರಿಂದ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ವೈಭವ, 6.30ಕ್ಕೆ ಬಿ.ಎಂ.ಸಿ ಪಾಣಾಜೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ಸ್ನೇಹಾ ಟೆಕ್ಸ್ ಟೈಲ್ಸ್ ಮಾಲಕ ವರದರಾಜ ನಾಯಕ್ ಉದ್ಘಾಟಿಸುವರು. ಪೂಜಾ ಸಮಿತಿ ಗೌರವಾಧ್ಯಕ್ಷ ಶ್ರೀಕೃಷ್ಣ ಭಟ್ ಬಟ್ಯಮೂಲೆ ಉಪಸ್ಥಿತರಿರುವರು. ರಾತ್ರಿ 8.30ರಿಂದ ಅನ್ನಸಂತರ್ಪಣೆ, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ 10.30ಕ್ಕೆ ಲಕ್ಕಿಡಿಪ್ ಡ್ರಾ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.