ಉಪ್ಪಿನಂಗಡಿ ಡಾ.ಅಶ್ವಿನ್ ಕಣ್ಣಿನ ಚಿಕಿತ್ಸಾಲಯ, ಆಪ್ಟಿಕಲ್ಸ್ ಶುಭಾರಂಭ

0

ಪುತ್ತೂರು: ನೇತ್ರ ತಜ್ಞ ಡಾ.ಅಶ್ವಿನ್ ಸಾಗರ್ ಅವರ ಕಣ್ಣಿನ ಚಿಕಿತ್ಸಾಲಯ ಮತ್ತು ಆಪ್ಟಿಕಲ್ಸ್ ಉಪ್ಪಿನಂಗಡಿ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್‌ನಲ್ಲಿ ಸೆ.24ರಂದು ಶುಭಾರಂಭಗೊಂಡಿತು.


ಉಪ್ಪಿನಂಗಡಿಯ ಗಿರಿಜಾ ಡೆಂಟಲ್ ಕ್ಲಿನಿಕ್, ದಂತ ತಜ್ಞರಾದ ಡಾ.ರಾಜರಾಂರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕಣ್ಣಿನ ಚಿಕಿತ್ಸೆಯ ವೈದ್ಯರು ಎಂದರೆ ಬಾಳು ಕತ್ತಲಾದವರಿಗೆ ಬೆಳಕು ಕೊಡುವುದು. ಅಂಧಕಾರದಲ್ಲಿದ್ದವರಿಗೆ ಕಣ್ಣು ತೆರೆಸುವ ಕೆಲಸ ಮಾಡುವುದು ಆಗಿದೆ. ಇಂತಹ ಕಣ್ಣಿನ ಚಿಕಿತ್ಸಾಲಯ ಉಪ್ಪಿನಂಗಡಿಯಲ್ಲಿ ಆರಂಭಗೊಂಡಿರುವುದು ಸಂತೋಷವಾಗಿದೆ. ಇದೊಂದು ಕುಟುಂಬದ ಚಿಕಿತ್ಸಾಲಯವಾಗಿದೆ. ವಯೋಸಹಜವಾಗಿ ಕಣ್ಣಿನ ಸಮಸ್ಯೆ ಬರುತ್ತದೆ. ನಮ್ಮ ದೃಷ್ಟಿಕೋನ, ದೃಷ್ಟಿ ಸಾಮಾಜಿಕವಾಗಿ, ವೈದ್ಯಕೀಯವಾಗಿ ಸರಿ ಇರಬೇಕು. ಎಂದ ಅವರು ನಮ್ಮ ಜೀವನದಲ್ಲಿ ಸಮಾಜಮುಖಿ ಕೆಲಸ ಮಾಡಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ಮಾಡೋಣ ಎಂದರು.

ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಕೃಷ್ಣಾನಂದ ಮಾತನಾಡಿ ಗ್ರಾಮೀಣ ಭಾಗಕ್ಕೆ ತಜ್ಞ ವೈದ್ಯರ ಸೇವೆ ಸಿಗುವುದು ವಿರಳ ಇಂತಹ ಸಂದರ್ಭದಲ್ಲಿ ಉಪ್ಪಿನಂಗಡಿ ಗ್ರಾಮೀಣ ಪ್ರದೇಶದಲ್ಲಿ ಹಲವು ಜನರಿಗೆ ಕಣ್ಣಿನ ಸೇವೆ ಸಿಗಲಿ ಎಂದು ಹೇಳಿ ಶುಭಹಾರೈಸಿದರು. ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಮಧುಮೇಹ ತಜ್ಞ ಡಾ.ಮುರಳೀಧರ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕಣ್ಣಿನ ಚಿಕಿತ್ಸಾಲಯ ಮಾಡಿದ್ದಾರೆ ಇದಕ್ಕೆ ಅವರ ಆತ್ಮವಿಶ್ವಾಸವೇ ಮುಖ್ಯ. ತನ್ನ ಸ್ವಂತ ಛಾಪನ್ನು ಮೂಡಿಸಬೇಕೆಂಬ ಉದ್ದೇಶದಿಂದ ಕ್ಲಿನಿಕ್ ಆರಂಭಿಸಿದ್ದು ಶ್ಲಾಘನೀಯ ಎಂದರು. ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಾನ್ ಕ್ಯಾನ್ಯೂಟ್ ಮಾತನಾಡಿ ಆರೋಗ್ಯವೇ ಭಾಗ್ಯ. ಕಣ್ಣನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಈ ಚಿಕಿತ್ಸಾಲಯ ಈ ಬಾಗದ ಜನರಿಗೆ ಬೆಳಕಾಗಲಿ ಎಂದು ಹೇಳಿ ಹಾರೈಸಿದರು.

ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಎಲುಬು ತಜ್ಞ ಡಾ.ಶಮಂತ್ ಮಾತನಾಡಿ, ನಾನು ಮತ್ತು ಡಾ.ಅಶ್ವಿನ್‌ರವರು ಸ್ನೇಹಿತರಾಗಿದ್ದೇವೆ. ಅವರ ಕಣ್ಣಿನ ಚಿಕಿತ್ಸಾಲಯ ಉತ್ತಮ ಸೇವೆ ನೀಡಿ ಯಶಸ್ಸು ಹೊಂದಲಿ ಎಂದು ಹಾರೈಸಿದರು. ಪುತ್ತೂರು ಭೂನ್ಯಾಯ ಮಂಡಳಿ ಸದಸ್ಯ ಅಬ್ದುಲ್ ರಹಿಮಾನ್ ಯುನಿಕ್ ಮಾತನಾಡಿ, ಉಪ್ಪಿನಂಗಡಿ ನಾಲ್ಕು ತಾಲೂಕುಗಳ ಮುಖ್ಯ ಪಟ್ಟಣವಾಗಿದೆ. ಈ ಚಿಕಿತ್ಸಾಲಯ ಇಲ್ಲಿಗೆ ಅಗತ್ಯವಾಗಿ ಬೇಕಾಗಿತ್ತು. ಇಲ್ಲಿನ ಜನರ ಕಣ್ಣಿನ ಸಮಸ್ಯೆಯ ಬವಣೆಯನ್ನು ನೀಗಿಸುವಲ್ಲಿ ಕಾರ್ಯನಿರ್ವಹಿಸಲಿ ಎಂದು ಹೇಳಿ ಹಾರೈಸಿದರು. ಬೆಳ್ತಂಗಡಿ ಉದ್ಯಮಿ ಜಯರಾಮ್, ಲಿಯೋ ಎಂಟರ್‌ಪ್ರೈಸಸ್‌ನ ಸಜನ್, ಅಶ್ವಿನ್ ಆಪ್ಟಿಕಲ್ಸ್‌ನ ಆಡಳಿತ ನಿರ್ದೇಶಕಿ ಬಿ.ಎಲ್.ಮಂಜುಳಾ, ಆಡಳಿತಾಧಿಕಾರಿ ಡಾ.ಎಸ್.ಎಂ.ವಿಕಾಸ್ ಉಪಸ್ಥಿತರಿದ್ದರು. ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮತ್ತು ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಆಗಮಿಸಿ ಶುಭಹಾರೈಸಿದರು. ನಿವೃತ್ತ ನೇತ್ರಧಿಕಾರಿ ಶಾಂತರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ.ಎಸ್.ಎಂ.ಅಶ್ವಿನ್ ಸಾಗರ್ ವಂದಿಸಿದರು.

ಶುಭಾರಂಭ ಪ್ರಯುಕ್ತ ಒಂದು ಕನ್ನಡಕ ಕೊಂಡರೆ ಒಂದು ಉಚಿತ
ಅಶ್ವಿನ್ ಆಪ್ಟಿಕಲ್ಸ್ ಮತ್ತು ಚಿಕಿತ್ಸಾಲಯ ಕಳೆದ ಮೂವತ್ತು ವರ್ಷಗಳಿಂದ ದ.ಕ.ಜಿಲ್ಲೆಯ ಅನೇಕ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾವಿರಾರು ಶಿಬಿರಗಳನ್ನು ನಡೆಸಿ ಜನರ ಕಣ್ಣಿನ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡಲಾಗಿದೆ. ಡಾ.ಅಶ್ವಿನ್‌ರವರು ಕಣ್ಣಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸಾ ವಿಆಭಗದಲ್ಲಿ ಉನ್ನತ ಮಟ್ಟದ ಅಧ್ಯಯನ ಮಾಡಿ ಪ್ರತೀದಿನ ಉಪ್ಪಿನಂಗಡಿ ಹಾಗೂ ಪುತ್ತೂರಿನಲ್ಲಿ ಸೇವೆಗೆ ಲಭ್ಯವಿರಲಿದ್ದಾರೆ. ಶುಭಾರಂಭದ ಪ್ರಯುಕ್ತ ಕ್ಲಿನಿಕ್‌ನಲ್ಲಿ ಒಂದು ಕನ್ನಡಕ ಕೊಂಡಲ್ಲಿ ಇನ್ನೊಂದು ಕನ್ನಡಕ ಉಚಿತ ಅಥವಾ ಒಂದು ಕನ್ನಡಕ ಖರೀದಿ ಮೇಲೆ ಶೇ.೩೦ರಷ್ಟು ರಿಯಾಯಿತಿ ಪಡೆಯುವ ಆಫರ್ ಲಭ್ಯವಿದೆ. ಹೆಸರು ನೋಂದಾವಣೆಗಾಗಿ 9448502292 ಸಂಪರ್ಕಿಸಬಹುದು.
ಎಸ್. ಶಾಂತರಾಜ್
ನಿವೃತ್ತ ನೇತ್ರಾಧಿಕಾರಿ

LEAVE A REPLY

Please enter your comment!
Please enter your name here