ಪುತ್ತೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ವೆಂಕಟರಮಣ ಎನ್ ಇವರು ಎನ್.ಎಸ್.ಎಸ್ ದಿನಾಚರಣೆಯು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ನಮ್ಮ ಚಟುವಟಿಕೆಗಳ ಅರಂಭದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿ ಸಾಕಷ್ಟು ಎನ್.ಎಸ್.ಎಸ್ ಕ್ಯಾಂಪುಗಳ ಮೆಲುಕು ಹಾಕಿದರು. ಎನ್.ಎಸ್.ಎಸ್ ರಾಷ್ಟ್ರದ ನಿರ್ಮಾಣ ಮಾಡಿದರೆ ಎನ್.ಸಿ.ಸಿ ರಾಷ್ಟ್ರದ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜಲಕ್ಷ್ಮಿ ಎಸ್.ರೈ ವಹಿಸಿದ್ದು, ನೀನು ನಿನ್ನ ದಾರಿಯಲ್ಲಿ ಸಾಗು ಆಗ ಜಗತ್ತು ಅದನ್ನು ಹಿಂಬಾಲಿಸುತ್ತದೆ ಎಂದು ಜೆ.ಪಿ ರಾಜರತ್ನ ರವರ ಮಾತುಗಳನ್ನು ಹೇಳುತ್ತಾ ನಿಮ್ಮಲ್ಲಿ ಶಿಸ್ತು, ಸ್ವಚ್ಚತೆ, ಅರಿವು ಮೂಡಿದರೆ ನಿಮ್ಮಲ್ಲಿ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಿ ಬದುಕಿನ ಸವಾಲುಗಳನ್ನು ಎದುರಿಸುವ ನೈತಿಕತೆ ಎನ್.ಎಸ್.ಎಸ್ ಮೂಲಕ ದೊರಕುತ್ತದೆ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಹಾಗೂ ಕಾರ್ಯಚಟುವಟಿಕೆಗಳ ಉದ್ಘಾಟನೆಯನ್ನು ನಮ್ಮ ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ.ಹರಿಪ್ರಸಾದ್ ಎಸ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಎನ್.ಎಸ್.ಎಸ್ ಎಂಬುದು ಕೇವಲ ವಿದ್ಯಾರ್ಥಿಗಳಿಗಷ್ಟೆ ಸೀಮಿತವಲ್ಲ. ಇಲ್ಲಿ ಎಲ್ಲರೂ ಎನ್.ಎಸ್.ಎಸ್ ಸ್ವಯಂಸೇವಕರೇ ರಾಷ್ತ್ರ ಭಕ್ತಿ, ರಾಷ್ಟ್ರ ಸೇವೆಯು ಎನ್, ಎಸ್.ಎಸ್ ಮೂಲಕ ಹೆಚ್ಚು ಜಾಗೃತಿಯಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಗುರಿ,ಶಿಸ್ತು,ಸಮಯದ ಪರಿಪಾಲನೆ ಅಗತ್ಯ ಬೇಡಿಕೆಗೆ ತಕ್ಕ ಶಿಕ್ಷಣಗಳು ಲಭಿಸುತ್ತಿದ್ದರು. ಅವಕಾಶಗಳ ಕೊರತೆಯಿಂದ ವಿದ್ಯಾರ್ಥಿಗಳು ಸೊರಗುತ್ತಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳು ತಮ್ಮ ವೃತ್ತಿ ಬದ್ದತೆಯನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಪ್ರಾಂಶುಪಾಲರಾದ ಶ್ರೀ.ಶೇಷಗಿರಿ ಎಂ, ಐ.ಕ್ಯೂ.ಎ.ಸಿ ಘಟಕದ ಮುಖ್ಯಸ್ಥರಾದ ಕೌಶಲ್ಯ, ಎನ್.ಎಸ್.ಎಸ್ ಘಟಕದ ನಾಯಕರಾದ ರಿಷಿಕ್ ದ್ವಿತೀಯ ಬಿ.ಕಾಂ ಹಾಗು ಪುಣ್ಯ ದ್ವಿತೀಯ ಬಿ.ಕಾಂ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕುಶಿತ ತೃತೀಯ ಬಿ.ಸಿ.ಎ ವಂದಿಸಿ, ಕಲ್ಪನಾ ತೃತೀತ ಬಿ.ಎ ನಿರ್ವಹಿಸಿದರು.