ಪುಣಚ: ಕಳೆದ 28 ವರ್ಷಗಳಿಂದ ವ್ಯವಹಾರ ನಿರತವಾಗಿರುವ ಪುಣಚ ಮಣಿಲ ಜಲಗಂಗಾ ಇರಿಗೇಶನ್ಸ್ ನಲ್ಲಿ ಸೆ.25ರಂದು ಆಯುಧ ಪೂಜಾ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ಬೊಳ್ಳೆಚ್ಚಾರು ನವೀನ್ ಭಟ್’ರವರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ, ಲಕ್ಷ್ಮೀ ಪೂಜೆ, ಆಯುಧ ಪೂಜೆ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಭೋಜನ ನಡೆಯಿತು. ಕಾರ್ಯಕ್ರಮದಲ್ಲಿ ಧಾರ್ಮಿಕ, ರಾಜಕೀಯ ಕ್ಷೇತ್ರದ ಪ್ರಮುಖರು, ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಗ್ರಾಹಕರು, ಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.
ಬಳಿಕ ಸುಸ್ವರ ಮೆಲೋಡೀಸ್ ಉಪ್ಪಿನಂಗಡಿ ಇವರಿಂದ ‘ಭಕ್ತಿ ಭಾವ ಗಾನ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಇದೇ ವೇಳೆಯಲ್ಲಿ ಗಯಾಪದ ಕಲಾವಿದೆರ್ ಉಬಾರ್ ಇವರ ಈ ವರ್ಷದ ನೂತನ ಕಲಾ ಕಾಣಿಕೆ ‘ಓಲು ತತ್ತ್ಂಡ್’ ತುಳು ನಾಟಕದ ಶಿರ್ಷಿಕೆಯ ಹಾಡನ್ನು ಟೈಟಲ್ ಸಾಂಗ್ ಹಾಡಿರುವ ಕಬಕದ ಮಿಥುನ್’ರಾಜ್ ವಿದ್ಯಾಪುರ ಬಿಡುಗಡೆ ಮಾಡಿದರು. ಜಲಗಂಗಾ ಇರಿಗೇಶನ್ಸ್ ನ ಮಾಲಕರಾದ ರವಿಶಂಕರ ಶಾಸ್ತ್ರಿ ಮಣಿಲ, ವಿ.ಕೆ.ಎಸ್ ಪಾಲಿಮಾರು ಉತ್ಪನ್ನಗಳ ಮಾಲಕರಾದ ಕಾರ್ತಿಕ್ ಶಾಸ್ತ್ರಿ ಮಣಿಲ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.