ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸೆ.23 ರಂದು ರಾತ್ರಿ ಮಹಿಳಾ ಸಭಾ ಕಾರ್ಯಕ್ರಮ ದೇವಸ್ಥಾನದ ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಸುಮಾ ಅಶೋಕ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಕ್ಕಳ ತಜ್ಞೆ ಡಾ. ಶ್ರೀದೇವಿ ವಿಕ್ರಂ ಸೇಡಿಯಾಪು, ಪುತ್ತೂರಿನ ಪ್ರಗತಿ ಪ್ಯಾರ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಪ್ರೀತಾ ಹೆಗ್ಡೆ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ., ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಿಬ್ಬಂದಿ ಮಾಲತಿ ಪದ್ಮಪ್ಪ ಪೂಜಾರಿ ಪರನೀರು, ಉಳ್ಳಾಲ ಮೊಂಟೆಪದವಿನಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕಿ ಚಂಚಲಾಕ್ಷಿ ಕೆ., ಉಪ್ಪಿನಂಗಡಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಗಾಯತ್ರಿ ರಘು ಕುಮಾರ್ ಮತ್ತು ಕೋಡಿಂಬಾಡಿಯ ಆಶಾ ಕಾರ್ಯಕರ್ತೆ ಪವಿತ್ರಾ ಸುರೇಶ್ ಶೆಟ್ಟಿ ಬರಮೇಲು ಶುಭ ಹಾರೈಸಿದರು.
ಧಾರ್ಮಿಕ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ ಬಿಜಂದಾಡಿಗುತ್ತು ಅವರನ್ನು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಡಾ. ರಮ್ಯ ರಾಜಾರಾಮ್ ಸನ್ಮಾನಿಸಿ ಗೌರವಿಸಿದರು.

ಹೂವು ಹಾರ ಕಟ್ಟುವ ಸ್ಪರ್ಧೆಯಲ್ಲಿ ವಿಜೇತರಾದ ಅನುಪಮಾ ಮರ್ದನಳಿಕೆ ಹಾಗೂ ಮಮತಾ ಸಂತೋಷ್ ಕಾಪು ಅವರಿಗೆ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಸಭೆಯ ಬಳಿಕ ಪುತ್ತೂರಿನ ಮುರಳಿ ಬ್ರದರ್ಸ್ ತಂಡದಿಂದ ಡ್ಯಾನ್ಸ್ ಝಲಕ್ ನೆರವೇರಿತು. ಬಳಿಕ ಶ್ರೀದೇವಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನಡೆದು ಅನ್ನಸಂತರ್ಪಣೆ ನೆರವೇರಿತು.
ಶಿಲ್ಪಾ ರಾಮಕೃಷ್ಣ ಭಟ್, ವಿದ್ಯಾ ಬಾಬು ಆಚಾರ್ಯ ಕೊಂಬಕೋಡಿ ಮತ್ತು ಅಮಿತಾ ಗೌತಮ್ ಕುಕ್ಯಾನ್ ಪ್ರಾರ್ಥಿಸಿದರು. ಮಹಿಷಮರ್ದಿನಿ ದೇವಸ್ಥಾನದ ಮಹಿಳಾ ಸಮಿತಿ ಅಧ್ಯಕ್ಷೆ ರಶ್ಮಿ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿ, ಸ್ಪೂರ್ತಿ ರಾಜಮಣಿ ರೈ ಮಠಂತಬೆಟ್ಟು ವಂದಿಸಿದರು. ಮಮತಾ ಗಂಗಾಧರ ಶೆಟ್ಟಿ ಮಠಂತಬೆಟ್ಟು ಪ್ರಾಸ್ತಾವಿಕ ಭಾಷಣ ಮಾಡಿದರು. ಅಕ್ಷತಾ ಪ್ರಭಾಕರ್ ಸಾಮಾನಿ ಮಠಂತಬೆಟ್ಟು ಸನ್ಮಾನ ಪತ್ರ ವಾಚಿಸಿದರು. ಪವಿತ್ರಾ ಕೈಪಾ ಮತ್ತು ಚಂದ್ರಿಕಾ ಎಸ್.ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.