ಅ.02: ದೀನ್ ದಯಾಳ್ ಫೌಂಡೇಶನ್ ಅರ್ಪಿಸುವ ಸಂಪ್ಯ ‘ಪಿಲಿನಲಿಕೆ ಸೀಸನ್-04’

0

ಪುತ್ತೂರು: ದೀನ್ ದಯಾಳ್ ಫೌಂಡೇಶನ್ ಅರ್ಪಿಸುವ ಸಂಪ್ಯ ಪಿಲಿನಲಿಕೆ ಸೀಸನ್-04 ಅ.02ರಂದು ಸಂಪ್ಯದ ಶ್ರೀರಾಮನಗರದಲ್ಲಿ ನಡೆಯಲಿದೆ.

ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಮಂತ್ರಣಪತ್ರ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಅವರಿಗೆ ಆಮಂತ್ರಣ ಪತ್ರ ನೀಡಿದರು.

ದೀನ್ ದಯಾಳ್ ಫೌಂಡೇಶನ್ ಅರ್ಪಿಸುವ ನವರಾತ್ರಿಯ ವಿಜಯದಶಮಿಯಂದು ಶ್ರೀ ಕುಂಜೂರುಪಂಜ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಹಾಗೂ ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜ ರಾಜೇಶ್ವರಿ ದೇವಿಗೆ ವಿಶೇಷ ಮಹಾಪೂಜೆ ಹಾಗೂ ಸಂಜೆ 6.00ರಿಂದ ಶ್ರೀರಾಮನಗರ ಸಂಪ್ಯದಲ್ಲಿ ‘ಸಂಪ್ಯ ಪಿಲಿನಲಿಕೆ’ ಸೀಸನ್-04 ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 8.00ಕ್ಕೆ ಗಣಪತಿ ಹೋಮ, ಮರಾಟಿ ಯುವ ವೇದಿಕೆ ವತಿಯಿಂದ ಭಜನಾ ಕಾರ್ಯಕ್ರಮ. ಸಂಜೆ ಗಂಟೆ 5.00ರಿಂದ ಕೈರಾಲಿ ಸಿಂಗಾರಿ ಮೇಳಂ ವತಿಯಿಂದ ಚೆಂಡೆ ವಯಲಿನ್ ವಾದನ ವರ್ಣಂ ಡ್ಯಾನ್ಸ್ ಗ್ರೂಪ್ ಈಶ್ವರಮಂಗಲ ಹಾಗೂ ರಾತ್ರಿ 9ರಿಂದ ಪುತ್ತೂರಿನ ಪ್ರತಿಷ್ಠಿತ ದಿ. ಪಿಲಿರಾಧಣ್ಣ ಮತ್ತು ಬಳಗದಿಂದ ಸಂಪ್ಯ ಪಿಲಿ ನಲಿಕೆ ನಡೆಯಲಿದೆ.

ಕಾರ್ಯಕ್ರಮವನ್ನು ಉದಯಗಿರಿ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಕುಕ್ಕಾಡಿ ತಂತ್ರಿ ಶ್ರೀ ಪ್ರೀತಂ ಪುತ್ತೂರಾಯ ಉದ್ಘಾಟಿಸಲಿದ್ದಾರೆ. ಹಲವು ರಾಜಕೀಯ, ಧಾರ್ಮಿಕ ಮುಖಂಡರು ಹಾಗೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here