ಪುತ್ತೂರು: ಮಂಗಳೂರಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಬಿಜಿಎಸ್ ಪದವಿ ಪೂರ್ವ ಕಾಲೇಜಿನ 2025ರ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಸಂಪನ್ಮೂಲ ಕಾರ್ಯಕ್ರಮವು ದ.ಕ.ಜಿ.ಪಂ.ಸ.ಹಿ.ಪ್ರಾ ಶಾಲೆ ರೆಂಜಿಲಾಡಿಯಲ್ಲಿ ಸೆ.25ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ತ್ರಿಮೂರ್ತಿ ಅವರು ಮಾತನಾಡಿ, ಮನುಷ್ಯನ ರೋಗಗಳು ಹಾಗೂ ಅದನ್ನು ತಡೆಗಟ್ಟುವ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾರದಾ ಕೇಶವ ಪುತ್ತಿಲ ನಿವೃತ್ತ ಗುರುಗಳು ವಿದ್ಯಾರ್ಥಿಗಳು ತಂದೆ ತಾಯಿಯನ್ನು ಗೌರವಿಸುವ ಮೂಲಕ ಈ ಪರಂಪರೆಯ ಸತ್ವಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ಸಮಾರಂಭದಲ್ಲಿ ವಿಜಯಲಕ್ಷ್ಮಿ, ರಾಧಾಕೃಷ್ಣ ಗೌಡ, ಯುವರಾಜೇಗೌಡ, ಉದಯಚಂದ್ರ ರೈ, ವಿನಯ ಬಳಕ್ಕ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಬಿ ಜಿ ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಮಣ್ಯ ಸಿ ಕುಂದೂರು ವಹಿಸಿದ್ದರು. ಯೋಜನಾಧಿಕಾರಿಗಳಾದ ಮುಖೇಶ್ ಕುಮಾರ್, ದೈಹಿಕ ಶಿಕ್ಷಕರಾದ ಯಶವಂತ್ ಹಾಗೂ ಶಿಬಿರಾರ್ಥಿಗಳು ಮತ್ತು ಊರಿನ ಗಣ್ಯರು ಸಭೆಯಲ್ಲಿದ್ದರು. ಕಾರ್ಯಕ್ರಮವನ್ನು ತ್ರಿಶ ನಿರೂಪಿಸಿ, ವರ್ಷ ಸ್ವಾಗತಿಸಿ, ಮನೀಶ್ ವಂದಿಸಿದರು.