
ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ವರ್ಷಂಪ್ರತಿಯಂತೆ 5ನೇ ದಿನವಾದ ಸೆ.26ರಂದು ದಲ್ಕಾಜೆಗುತ್ತು ಕುಟುಂಬಸ್ಥರು ಮತ್ತು ಬಂಧುಗಳಿಂದ ಮಧ್ಯಾಹ್ನ ಅನ್ನದಾನ ಸೇವೆ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಬೆಳಗ್ಗೆ 10ರಿಂದ ಮಾನಸ ಕಲಾ ವೃಂದ ಗುಂಡ್ಯಡ್ಕ,ಪುಣಚ ಇವರಿಂದ ‘ಗಮಕ ವಾಚನ’ ಹಾಗೂ ಶ್ರೀ ಮಹಿಷಮರ್ದಿನಿ ಮಹಿಳಾ ಭಜನಾ ಮಂಡಳಿ ಮೂಡಂಬೈಲು ತಂಡದವರಿಂದ ಭಜನಾ ಸೇವೆ ನಡೆಯಿತು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು, ದಲ್ಕಾಜೆಗುತ್ತು ಕುಟುಂಬಸ್ಥರು, ಬಂಧುಗಳು, ಮಿತ್ರರು, ಗ್ರಾಮಸ್ಥರು ಹಾಗೂ ಅನೇಕ ಭಕ್ತಾಧಿಗಳು ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿದರು.
ರಾತ್ರಿ ಭಜನಾ ಕಾರ್ಯಕ್ರಮ,ರಂಗಪೂಜೆ ಪ್ರಸಾದ ವಿತರಣೆ ನಡೆಯಲಿದೆ.