ಸಿನಿಮಾ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿಯವರನ್ನು ಸನ್ಮಾನಿಸಿದ ಚಿತ್ರತಂಡ
ಪುತ್ತೂರು: ಚೇತನ್ ಜೋಡಿದಾರ್ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಚಲನ ಚಿತ್ರ ‘ಟೈಮ್ ಪಾಸ್’ ಅ.17ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.7ರಂದು ಟ್ರೈಲರ್ ಬಿಡುಗಡೆಯಾಗಲಿದೆ. ಟ್ರೇಸರ್ ಮತ್ತು ಹಾಡು ಈಗಾಗಲೇ ಬಿಡುಗಡೆಯಾಗಿದ್ದು ಪ್ರೇಕ್ಷರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಧುನಿಕ ಎಐ ತಂತ್ರಜ್ಞಾನ ಬಳಸಿಕೊಂಡು ಈ ಚಿತ್ರದ ನಿರ್ಮಾಣವಾಗಿದೆ. ನುರಿತ ತಂತ್ರಜ್ಞರನ್ನು ಬಳಸಿಕೊಂಡು ಗುಣಮಟ್ಟದ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರವು ಹಾಸ್ಯ ಭರಿತವಾಗಿದ್ದು ಕುಟುಂಬದವರೆಲ್ಲರೂ ಸೇರಿಕೊಂಡು ವೀಕ್ಷಣೆ ಮಾಡಬಹುದಾದ ಚಿತ್ರವಾಗಿದೆ. ಎರಡೂವರೆ ತಾಸುಗಳ ಈ ಚಿತ್ರವು ವೀಕ್ಷಕರಿಗೆ ಸಂಪೂರ್ಣ ಟೈಮ್ಪಾಸ್ ಆಗಲಿದೆ. ನೈಜ ಜೀವನದ ನಡೆದ ಕಥೆಗಳನ್ನು ಆಧರಿಸಿ ನಿರ್ಮಾಣಗೊಂಡಿದೆ. ಸಿನಿಮಾ ಇಂಡಸ್ಟ್ರೀಯಲ್ಲಿ ನಿರ್ದೇಶಕರು, ತಂತ್ರಜ್ಞರು ಯಾವ ರೀತಿ ಕಷ್ಟ ಪಡುತ್ತಿದ್ದಾರೆ ಎಂದು ಚಿತ್ರದಲ್ಲಿ ನೀಡಲಾಗಿದೆ. ಹೊಟ್ಟೆ ಹುನ್ನಾಗಿಸುವ ನಗುವ ಹಾಸ್ಯಗಳಿಂದ ಕೂಡಿದೆ. ಈ ಚಿತ್ರವು ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಿನಿಮಾ ವಿತರಕರಾಗಿರುವ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಅವರನ್ನು ಚಿತ್ರತಂಡದವರು ಸನ್ಮಾನಿಸಿದರು. ಸಹ ನಿರ್ದೇಶಕಿ ವೈಷ್ಣವಿ ಸತ್ಯನಾರಾಯಣ್, ರಕ್ಷಾರಾಮ್, ಹಾಸ್ಯ ಕಲಾವಿದ ಓಂ ಶ್ರೀ ಯಕ್ಷಶಿಫ್, ಚಿತ್ರ ತಂಡದ ಜಿಲ್ಲಾ ಮಾಧ್ಯಮ ಸಲಹೆಗಾರ ಸೂರಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.