ಮದುವೆಯಾಗುವುದಾಗಿ ವಂಚನೆ ಪ್ರಕರಣ : ಶ್ರೀಕೃಷ್ಣನೇ ಅಪ್ಪ ಎಂದು ʼಡಿ ಎನ್ ಎ ವರದಿಯಲ್ಲಿ ಬಂದಿದೆʼ – ಕೆ ಪಿ ನಂಜುಂಡಿ ಪತ್ರಿಕಾಗೋಷ್ಠಿ

0

ಪುತ್ತೂರು: ಮದುವೆಯಾಗುವುದಾಗಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಡಿ ಎನ್ ಎ ಪರೀಕ್ಷೆ ವರದಿ ಬಂದಿದೆ. ಶ್ರೀಕೃಷ್ಣ ಜೆ ರಾವ್ ಮಗುವಿನ ಅಪ್ಪ ಎಂದು ಸಂತ್ರಸ್ತೆಯ ಮನೆಯವರಿಗೆ ಮಾಹಿತಿಯನ್ನು ತಿಳಿಸಲಾಗಿದೆ ಎಂದು ವಿಶ್ವಕರ್ಮ ಮಹಾ ಮಂಡಲದ ರಾಜ್ಯ ಅಧ್ಯಕ್ಷ ಕೆ ಪಿ ನಂಜುಂಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಸಮಾಜದ ಬಡ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ಹಿಂದೆ ಸೀತಾಮಾತೆಗೆ ಅಗ್ನಿ ಪರೀಕ್ಷೆ ನಡೆಯಿತು. ಇವತ್ತಿನ ಕಾಲದಲ್ಲಿ ಡಿ ಎನ್ ಎ ಪರೀಕ್ಷೆಯೇ ಅಂತಿಮವಾಗಿದೆ. ಹಾಗಾಗಿ ಎಲ್ಲಾ ವಿಚಾರಕ್ಕೂ ಡಿ ಎನ್ ಎ ಪರೀಕ್ಷೆ ಅಂತಿಮವಾಗಿದೆ. ಡಿ ಎನ್ ಎ ಪರೀಕ್ಷೆ ವರದಿ ಬಂದಿದೆ. ಈಗಾಗಲೇ ಕೋರ್ಟ್ ಗೆ ಹೋಗಿದೆ ಎಂದವರು ಹೇಳಿದರು‌.

ಮುಂದೆ ಪಿ ಜಿ ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ ರಾವ್ ಸಂತ್ರಸ್ತೆಯನ್ನು ವಿವಾಹ ಆಗಬೇಕೆಂದು ನಮ್ಮ‌ ಕೋರಿಕೆ. ಯಾಕೆಂದರೆ ಹುಡುಗ ಇನ್ನು ಬಾಳಿ ಬದುಕಬೇಕಾದವ. ಅವರು ಮದುವೆ ಆದರೆ ಉತ್ತಮ. ನಮಗೂ ಕೋರ್ಟ್ ಗೆ ಹೋಗಲು ಇಷ್ಟವಿಲ್ಲ. ಆದರೂ ಕೋರ್ಟ್ ನಲ್ಲಿ ಅದರ ರೀತಿಯಲ್ಲಿ ನಡೆಯುತ್ತದೆ ಎಂದವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಸಂತ್ರಸ್ತೆ, ಆಕೆಯ ತಾಯಿ ನಮಿತಾ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here