ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ ನಿಯಮಿತ ಕಬಕ ಶಾಖೆಯಲ್ಲಿ ನಬಾರ್ಡ್ ನಿರ್ದೇಶನದಂತೆ ಗ್ರಾಹಕರಿಗೆ ಆರ್ಥಿಕ ವ್ಯವಹಾರಗಳ/ ಸವಲತ್ತು ಹಾಗೂ ಹೊಸ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಸೆ.26ರಂದು ಕಬಕ ಶಾಖೆಯಲ್ಲಿ ನಡೆಯಿತು.
ಕಾರ್ಯಕ್ರಮದ ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿವೃತ್ತ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾದ ಗೋಪಾಲಕೃಷ್ಣ ಭಟ್ ಎಂ., ಬ್ಯಾಂಕ್ ನಲ್ಲಿ ನೀಡುವ ಠೇವಣಿ, ಸಾಲಗಳು, ಸಾಮಾಜಿಕ ಭದ್ರತೆ ಹಾಗೂ ವಿಮಾ ಆಧಾರಿತ ಇನ್ಶೂರೆನ್ಸ್ ನ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾದ ರವೀಂದ್ರನಾಥ ಮೇಲಾಂಟ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಶ್ರೀ ಮಹಾದೇವಿ ಧರ್ಮಸೇವಾ ವಿಶ್ವಸ್ಥ ಮಂಡಳಿ ಕಬಕ ಇದರ ಅಧ್ಯಕ್ಷರಾದ ವಿ. ಚಂದ್ರಶೇಖರ ನಾೖಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಬಕ ಶಾಖೆಯ ಶಾಖಾ ವ್ಯವಸ್ಥಾಪಕರಾದ ಸೀತಾರಾಮ ಎ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ನವೋದಯ ಪ್ರೇರಕಿ ಮಾಲತಿ ಪ್ರಾರ್ಥಿಸಿದರು.
ಶಾಖೆಯ ಸಿಬ್ಬಂದಿಗಳಾದ ಅಕ್ಷತಾ ಆರ್ ಕಾರ್ಯಕ್ರಮವನ್ನು ನಿರೂಪಿಸಿ, ಸತೀಶ್ ಧನ್ಯವಾದ ತಿಳಿಸಿದರು. ಕಿರಣ್ ಕುಮಾರ್ ಎ ಸಹಕರಿಸಿದರು. ಶಾಖೆಯ ಸರಾಫರಾದ ರವೀಂದ್ರ ಹಾಗೂ ಲಕ್ಷ್ಮಿ ಸಹಕರಿಸಿದರು.