ಪುತ್ತೂರು: ಶ್ರೀ ಕ್ಷೇತ್ರ ಧ.ಗ್ರಾ.ಯೋ ಕೆಮ್ಮಿಂಜೆ ವಲಯದ ವೀರಮಂಗಲ ಕಾರ್ಯಕ್ಷೇತ್ರದ ಶುಭೋದಯ ಜ್ಞಾನವಿಕಾಸ ಕೇಂದ್ರದಲ್ಲಿ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮ ನಡೆಯಿತು.

ಒಕ್ಕೂಟದ ಅಧ್ಯಕ್ಷ ಉಮೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ಸುಂದರ ಬಲ್ಯಾಯ ಉದ್ಘಾಟಿಸಿದರು. ಉಜಿರೆ ಸಿದ್ದಾವನ ರುಡ್‌ಸೆಟ್ ಸಂಸ್ಥೆ ಇಲ್ಲಿನ ಹಿರಿಯ ಉಪನ್ಯಾಸಕ ಕೆ ಕರುಣಾಕರ್ ಜೈನ್ ಅವರು ರುಡ್‌ಸೆಟ್ ಸಂಸ್ಥೆಯ ಹುಟ್ಟು, ಕಾರ್ಯನಿರ್ವಹಣೆ, ಸಂಸ್ಥೆಯಲ್ಲಿ ನೀಡುವ ವಿವಿಧ ರೀತಿಯ ತರಬೇತಿಗಳು, ಸೌಲಭ್ಯಗಳು, ಶಿಕ್ಷಣದೊಂದಿಗೆ ಕೌಶಲ್ಯ ಭರಿತ ವಿದ್ಯೆಯನ್ನು ಮಕ್ಕಳಿಗೆ ನೀಡುವ ಬಗ್ಗೆ, ನಿರುದ್ಯೋಗ ನಿವಾರಣೆ ಬಗ್ಗೆ, ಬ್ಯಾಂಕಿಂಗ್ ಸಾಲ ಸೌಲಭ್ಯಗಳ ಬಗ್ಗೆ, ಸಬ್ಸಿಡಿಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಪುಷ್ಪಲತಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಒಕ್ಕೂಟದ ಉಪಾಧ್ಯಕ್ಷ ಧರ್ಣಪ್ಪ, ಸೇವಾ ಪ್ರತಿನಿಧಿ ಯಮುನಾ, ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು.