ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ ನೈತಾಡಿ ಹಾಗೂ ಮೊಟ್ಟೆತಡ್ಕ ರಸ್ತೆಯ ಮಧ್ಯೆ ‘ಸ್ವಚ್ಛತಾ ಹಿ ಸೇವಾ’ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಸೆ.26ರಂದು ನಡೆಯಿತು. ಮುಂಡೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಸದಸ್ಯ ಬಾಬು ಕಲ್ಲಗುಡ್ಡೆ, ಸಿಬ್ಬಂದಿ ವರ್ಗದವರು, ಎನ್‌ಆರ್‌ಎಲ್‌ಎಂ ಸಂಜೀವಿನಿ ಒಕ್ಕೂಟದ ಸದಸ್ಯರು ಮತ್ತು ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಮೊಟ್ಟೆತಡ್ಕ ಇದರ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
