25,44,38.000 ವ್ಯವಹಾರ, 6,65,319.00 ಲಾಭ, ಶೇ.15 ಡಿವಿಡೆಂಡ್
ಪುತ್ತೂರು: ಶ್ರೀಶಾರದಾಂಬ ವಿವಿಧೋದ್ದೇಶ ಸೇವಾ ಸಹಕಾರ ಸಂಘವು 2024-25 ಸಾಲಿನಲ್ಲಿ 25,44,38.000 ವ್ಯವಹಾರ ನಡೆಸಿ 6,65,319.00 ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಟ್ ವಿತರಿಸಲಾಗುವುದು. ಸಾಲ ವಸೂಲತಿಯಲ್ಲಿಯೂ ಸಂಘವು ಉತ್ತಮ ಸಾಧನೆ ಮಾಡಿದೆ. ಹಾಗೂ ನಿರಖು ಠೇವಣಿ ಸಂಗ್ರಹಣೆಯಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷ ವಿಜಯಕುಮಾರ್ ಕೈಪಂಗಳ ಹೇಳಿದರು.
ಸೆ.27ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿರುವ ಚುಂಚಶ್ರೀ ಹವಾನಿಯಂತ್ರಿತ ಸಭಾಭವನದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ 27,65,250 ಪಾಲು ಬಂಡವಾಳ, 3,35,70,636 ಠೇವಣಿ ಇರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು “ಬಿ” ಶ್ರೇಣಿಯನ್ನು ಪಡೆದುಕೊಂಡಿದೆ. ಪ್ರತಿಯೊಬ್ಬರೂ ಸಂಘದ ಶೇರುಗಳನ್ನು ಖರೀದಿಸಿ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ವಿನಂತಿಸಿದ ಅವರು ಸಂಘದ ಅಭಿವೃದ್ಧಿಗೆ ಎಲ್ಲಾ ಷೇರುದಾರರ ಸಹಕಾರ ಅಗತ್ಯ. ಸಂಘದ ಸಿಬ್ಬಂದಿಗಳು ಹೆಚ್ಚಿನ ಪ್ರಮಾಣದ ಸಾಲಗಳ ವಸೂಲಾತಿಯನ್ನು ಮಾಡಿ ಸಂಘದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಿರ್ದೇಶಕರಾದ ಬಾಲಕೃಷ್ಣ ಕೆ.ಎಸ್.ಆರ್.ಟಿ.ಸಿ ಮಂಗಳೂರು, ತ್ಯಾಂಪ ನಾಯ್ಕ ಕಜೆ, ಶೋಭಾ ಬಾಲಕೃಷ್ಣ, ಅರ್ಪಣಾ ಪಡಿಲು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ವಿಜಯಕುಮಾರ್ ಕೈಪಂಗಳ, ಪ್ರಭಾಕರ್ ನಾಯಕ್ ಮೈಸೂರು, ಉಪಾಧ್ಯಕ್ಷೆ ಲೀಲಾವತಿ ಶಿವಣ್ಣ ನಾಯ್ಕ, ಉಪಾಧ್ಯಕ್ಷರು ಹಾಗೂ ನಿರ್ದೇಶಕರು ದೀಪ ಬೆಳಗಿಸಿ ಉದ್ಘಾಟಿಸಿದರು. ಮೋಹನ್ ಬೆದ್ರಳ ಮಹಾಸಭೆಯ ನೋಟಿಸ್ ಓದಿ ದಾಖಲಿಸಿದರು. ನಿರ್ದೇಶಕ ಕೇಶವ ಮಂಡೆಕೊಚ್ಚಿ ವಾರ್ಷಿಕ ವರದಿ ಮಂಡಿಸಿ ಅಂಗೀಕಾರ ಪಡೆದರು. ಗೋಪಾಲಕೃಷ್ಣ ಪಡೀಲ್ ಮಂಗಳೂರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಮಂಜೂರಾತಿ ಪಡೆದರು. ಕೇಶವ ತೆಂಕಿಲ ಅಂದಾಜು ಬಜೆಟ್ ಮಂಡಿಸಿದರು.
ಮೊಬೈಲ್ ಆಪ್ ಬಿಡುಗಡೆ:
ಶ್ರೀನಿಧಿ ಠೇವಣಿ ಸಂಗ್ರಹ ಮಾಡಲು ಅನುಕೂಲವಾಗುವಂತೆ ಹಾಗೂ ಶ್ರೀನಿಧಿ ಗ್ರಾಹಕರಿಗೆ ಠೇವಣಿಯ ಬಗ್ಗೆ ಸಂದೇಶ ರವಾನಿಸಲು ಅನುಕೂಲವಾಗುವಂತೆ ಮೊಬೈಲ್ ಆಪ್‌ನ್ನು ಹಿರಿಯ ಷೇರುದಾರ ಡಾ. ಪ್ರಭಾಕರ್ ನಾಯಕ್ ಮೈಸೂರು ಬಿಡುಗಡೆಗೊಳಿಸಿದರು.

ಸನ್ಮಾನ:
ಹಿರಿಯ ಷೇರುದಾರರಾದ ಡಾ.ಪ್ರಭಾಕರ್ ನಾಯ್ಕ ಮೈಸೂರು, ರಾಮ ನಾಯ್ಕ ಸಂಟ್ಯಾರು, ಲಕ್ಷ್ಮಿ ನೆಹರುನಗರ, ಲೀಲಾವತಿ ಉಪ್ಪಳಿಗೆ, ಚಂದ್ರಾವತಿ ವಿಟ್ಲರವರನ್ನು ಸನ್ಮಾನಿಸಲಾಯಿತು. ಸಂಘದ ಗುಮಾಸ್ತೆ ಹಿತಾ ರೈ ರವರನ್ನು ಸನ್ಮಾನಿಸಿ ಬಿಳ್ಕೊಡಲಾಯಿತು.
ಶಾರದಾ ಕೇಶವ ಪ್ರಾರ್ಥಿಸಿದರು. ಸಂಘದ ನಿರ್ದೇಶಕರಾದ ಗೋಪಾಲಕೃಷ್ಣ ಪಡೀಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಶಿವಣ್ಣ ನಾಯ್ಕ ಆನೆಕಲ್ಲು ಮಂಗಳೂರು ವಂದಿಸಿದರು.