ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಪ್ರದೇಶದ ಮಾರ್ನಹಳ್ಳಿ ಎಂಬಲ್ಲಿ ವಾಹನವೊಂದು ಅಪಘಾತಕ್ಕೀಡಾಗಿ ಹೆದ್ದಾರಿ ಸಂಚಾರ ಎರಡು ಗಂಟೆಗಳ ಕಾಲ ಅಸ್ತವ್ಯಸ್ತವಾದ ಘಟನೆ ಶನಿವಾರ ನಡೆದಿದೆ.
ಮಧ್ಯಾಹ್ನದ ವೇಳೆ ಉಂಟಾದ ಈ ಅಡಚನೆಯಿಂದಾಗಿ ಸತತ ಎರಡು ಗಂಟೆಗಳ ಕಾಲ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು. ಪೊಲೀಸರು ಸಕಾಲಿಕ ಕ್ರಮ ಕೈಗೊಂಡು ವಾಹನ ಸಂಚಾರಕ್ಕೆ ಅಡೆತಡೆಗಳನ್ನು ನಿವಾರಿಸಲಾಯಿತು.
ದಿನವಿಡೀ ಸುರಿದ ಮಳೆ
ಶನಿವಾರದಂದು ಮುಂಜಾನೆಯಿಂದಲೇ ದಟ್ಟ ಕಾರ್ಮೋಡ ಕವಿದು ನಿರಂತರ ಮಳೆ ಸುರಿಯಿತು. ಇದರಿಂದಾಗಿ ನವರಾತ್ರಿಯ ಸಂಭ್ರಮದ ಕೆಲವೊಂದು ಕಾರ್ಯಕ್ರಮಗಳಿಗೆ ಅಡಚನೆಯುಂಟಾಯಿತು.