ಪುತ್ತೂರು:ನಾಳೆ (ಸೆ.30) ರಂದು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿ ಎಂಬಂತೆ ಶಾಸಕರ ಕಚೇರಿ ಸಭಾಂಗಣದಲ್ಲಿ ಪುಡಾ ಅದಾಲತ್ ನಡೆಯಲಿದೆ.
ಈ ಬಗ್ಗೆ ಶಾಸಕರು ಪುಡಾ ಸದಸ್ಯರು ಹಾಗೂ ಕಾರ್ಯದರ್ಶಿ ಜೊತೆ ಶಾಸಕರು ಸಮಾಲೋಚನೆ ನಡೆಸಿದರು. ರಾಜ್ಯದ ಲ್ಲಿ ಪ್ರಪ್ರಥಮ ಬಾರಿಗೆ ಈ ಅದಾಲತ್ ನಡೆಯುತ್ತಿದೆ.9/11 ಸಂಬಂಧಿಸಿದ ಸಮಸ್ಯೆ ಹಾಗೂ ಕಡತ ವಿಲೇವಾರಿ ಸ್ಥಳದಲ್ಲೇ ಇತ್ಯರ್ಥವಾಗಲಿದೆ.
ಸಭೆಯಲ್ಲಿ ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಸದಸ್ಯರಾದ ಅನ್ವರ್ ಖಾಸಿಂ ,ಲ್ಯಾನ್ಸಿ ಮಸ್ಕರೇನಸ್, ನಿಹಾಲ್ ಪಿ ಶೆಟ್ಟಿ ಹಾಗೂ ಕಾರ್ಯದರ್ಶಿ ಗುರುಪ್ರಸಾದ್ ಉಪಸ್ಥಿತರಿದ್ದರು.