ಜ್ಞಾನ ವಿಕಾಸ ಕಾರ್ಯಕ್ರಮಗಳಿಂದ ಮಹಿಳೆಯರಲ್ಲಿ ಬದಲಾವಣೆ ಆಗಿದೆ: ಮಾಲತಿ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕಿನ ಕೆಮ್ಮಿಂಜೆ ವಲಯದ ಶಾಂತಿಗೋಡು ಕಾರ್ಯಕ್ಷೇತ್ರದ ನಂದಿನಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಆನಡ್ಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಸದಸ್ಯೆ ಚಂದ್ರವತಿಯವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಆನಡ್ಕ ಶಾಲಾ ಶಿಕ್ಷಕಿ ಮಾಲತಿಯವರು ನೆರವೇರಿಸಿ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರಲ್ಲಿ ಆದ ಬದಲಾವಣೆ ಸ್ವಾವಲಂಬಿಯಾಗಿ ಜೀವನ ನಡೆಸಲು ಯೋಜನೆಯ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಂದ ರೀತಿ ಇನ್ನು ಮುಂದೆಯೂ ಹೀಗೆಯೇ ಇರಲಿ ಎಂದು ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಕೀಲರು, ಪ್ರಗತಿಪರ ಕೃಷಿಕರು ಆದ ಶ್ಯಾಮ್ ಭಟ್ ಇವರು ಸಮಾಜದಲ್ಲಿ ಮಹಿಳೆಯರ ಬೆಳವಣಿಗೆ ಯಾವ ಮಟ್ಟದಲ್ಲಿ ಬೆಳೆದಿದೆ , ವಿವಿಧ ಪರಂಪರೆಯಿಂದ ಬಂದ ಮಹಿಳೆಯರು ಕುಟುಂಬಕ್ಕೆ ಒಗ್ಗಿಕೊಂಡು ತಮ್ಮ ಕುಟುಂಬದ ನಿರ್ವಹಣೆ ಹೇಗೆ ಮಾಡುತ್ತಾಳೆ. ಸ್ಥಳೀಯರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಏಕೆ ಬೆಳೆಸಿಕೊಳ್ಳಬೇಕು, ಮಹಿಳೆಯರಲ್ಲಿ ತಾಳ್ಮೆ ಹೇಗಿರಬೇಕು ಹಳೆಯ ಕಾಲದ ಪದ್ಧತಿಗಳನ್ನು ಕಸೂತಿಗಳನ್ನು ಯುವ ಪೀಳಿಗೆಗೆ ತಿಳಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಪುಷ್ಪಲತಾ, ಎಸ್ಡಿಎಂಸಿ ಅಧ್ಯಕ್ಷ ಹರೀಶ್, ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್, ಸಿಎಸ್ಸಿ ನೋಡಲ್ ಅಧಿಕಾರಿ ಜೀವನ್, ವಿಎಲ್ಇ ರಮ್ಯಾ,ಒಕ್ಕೂಟದ ಪದಾಧಿಕಾರಿಗಳು ಜ್ಞಾನವಿಕಾಸ ಕೇಂದ್ರದ ಸದಸ್ಯರು, ಸ್ವಸಹಾಯ ಸಂಘಗಳ ಸದಸ್ಯರು,ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.ಕೇಂದ್ರದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನೆರವೇರಿಸಿ ಬಹುಮಾನ ವಿತರಣೆ ಮಾಡಲಾಯಿತು ಹಾಗೂ ಕೇಂದ್ರದ ಸದಸ್ಯರು ವಿವಿಧ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಸೇವಾ ಪ್ರತಿನಿಧಿ ಮೋಕ್ಷಿತ ಸ್ವಾಗತಿಸಿದರು.ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.