ತುಳುವ ನೆಲದ ಸಂಸ್ಕೃತಿ ಸಂಪ್ರದಾಯ ಉಳಿಸಿದ್ದಾರೆ- ಕ್ಯಾ|ಬ್ರಿಜೇಶ್ ಚೌಟ
ಹುಲಿವೇಷ ಕುಣಿತವನ್ನು ವಿಶ್ವಕ್ಕೆ ಪರಿಚಯಿಸುತ್ತೇವೆ-ಅಶೋಕ್ ಕುಮಾರ್ ರೈ
ಕರಾವಳಿಯ ಸಂಸ್ಕೃತಿಯ ದ್ಯೋತಕ ಪಿಲಿಗೊಬ್ಬು-ಡಾ.ಪ್ರಭಾಕರ ಭಟ್
ಪುತ್ತೂರು: ಭಾರತ ದೇಶ ವಿವಿಧ ಸಂಸ್ಕೃತಿಗಳ ದೇಶ. ಭಾರತಕ್ಕೆ ಹೆಸರು ತಂದುಕೊಟ್ಟ ಭರತ ಚಕ್ರವರ್ತಿ ಸಿಂಹದೊಂದಿಗೆ ಆಟವಾಡಿ ಬೆಳೆದ ಹುಡುಗ. ಹುಲಿಯ ಆಟವೂ ಕೂಡ ಸಾಹಸದ ಜನಪ್ರಿಯ ಕ್ರೀಡೆಯಲ್ಲಿ ಒಂದಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಹಾಗೂ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು. ವಿಜಯ ಸಾಮ್ರಾಟ್ ಆಶ್ರಯದಲ್ಲಿ, ಸಹಜ್ ರೈ ನೇತೃತ್ವದಲ್ಲಿ ಪುತ್ತೂರಿನ ಶ್ರೀಮಹಾಲಿಂಗೇಶ್ವರ ಗದ್ದೆಯಲ್ಲಿ ನಡೆದ ಪಿಲಿಗೊಬ್ಬು ಸೀಸನ್ 3 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಹುಲಿವೇಷ ಕುಣಿತ ನಮ್ಮ ಪರಂಪರೆಯ ಭವ್ಯತೆಯನ್ನು ಕಟ್ಟಿಕೊಡುತ್ತದೆ. ಭಾರತ ದೇಶ ಇಂತಹ ಸಾವಿರಾರರು ವೈರುಧ್ಯಗಳ ಆಗರವಾದ ದೇಶ. ಇಂತಹ ಸಾಂಸ್ಕೃತಿಕ ಶ್ರೀಮಂತಿಕೆಯ ಭಾರತದಲ್ಲಿ ಹುಟ್ಟಿರುವ ನಾವೆಲ್ಲರೂ ಧನ್ಯರು ಎಂದ ಅವರು ಸಹಜ್ ರೈರವರ ಸಹಜವಾದ ಪ್ರೀತಿಗೆ ಆಗಮಿಸಿದ್ದೇನೆ. ನೀವು ಕಷ್ಟ ಅಂತ ಯಾವಾಗ ಬೇಕಾದರೂ ನನ್ನನ್ನು ಕರೆದರೂ ನಾನು ನಿಮ್ಮ ಜತೆ ಇರುತ್ತೇವ ಎಂದರು.

ತುಳುವ ನೆಲದ ಸಂಸ್ಕೃತಿ ಸಂಪ್ರದಾಯ ಉಳಿಸುವ ಕೆಲಸ ಮಾಡಿದ್ದಾರೆ:
ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಮಾತನಾಡಿ ಪುತ್ತೂರು ಮಹಾಲಿಂಗೇಶ್ವರ ಗದ್ದೆಯಲ್ಲಿ ಆಯೋಜನೆ ಮಾಡಿದ ಪಿಲಿಗೊಬ್ಬು ಕಾರ್ಯಕ್ರಮ ನೋಡುವಾಗ ಖುಷಿಯಾಗುತ್ತದೆ. ಕಂಬಳ, ಪಿಲಿಗೊಬ್ಬು, ಯಕ್ಷಗಾನ ಮರೆಯಾಗುತ್ತಿರುವ ಸಮಯದಲ್ಲಿ ಹೊಸ ಯುವಕರು ಇದನ್ನು ಮುನ್ನಡೆಸುತ್ತಿರುವುದು ಸಂತೋಷ. ತುಳು ಭಾಷೆಯ ಬಗ್ಗೆ ಜನರಿಗೆ ಅಭಿಮಾನ ಇದೆ. ತುಳುವ ನೆಲದ ಸಂಸ್ಕೃತಿ ಸಂಪ್ರದಾಯ ಉಳಿಸುವ ಕೆಲಸವನ್ನು ವಿಜಯ ಸಾಮ್ರಾಟ್ನ ಯುವಕರು ಮಾಡುತ್ತಿದ್ದಾರೆ. ಇದು ಶ್ಲಾಘನೀಯ ಎಂದ ಅವರು ಮುದೆಯೂ ನಿರಂತರವಾಗಿ ಈ ಕಾರ್ಯಕ್ರಮ ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.
ಹುಲಿವೇಷ ಕುಣಿತವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡುತ್ತೇವೆ:
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಹುಲಿವೇಷ ಜನಪ್ರಿಯಗೊಳ್ಳುತ್ತಿರುವ ಕ್ರೀಡೆ, ಕಂಬಳ ಯಕ್ಷಗಾನ, ನಾಟಕ ಕೋಳಿಅಂಕ ನಮ್ಮ ತುಳುನಾಡಿನ ಕಲೆ. ಸಹಜ್ ರೈ ಮತ್ತು ತಂಡ ಎಲ್ಲಾ ಪಕ್ಷ, ಜಾತಿ, ಧರ್ಮದವರನ್ನು ಸೇರಿಸಿಕೊಂಡು ಒಳ್ಳೆಯ ಕಾರ್ಯಕ್ರಮ ಮಾಡುತ್ತಿದ್ದಾರೆ. ಇವರ ತಂಡಕ್ಕೆ ದನ್ಯವಾದಗಳು. ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿಯವರು ಪಿಗೊಬ್ಬು ಕಾರ್ಯಕ್ರಮ ಆರಂಭ ಮಾಡಿದರು. ಹುಲಿವೇಷದಲ್ಲಿ ಪೈಪೋಟಿ ಬೇಡ ಎಂದು ನಾನೇ ಹೇಳಿದ್ದೇನೆ. ಇದೀಗ ಸಹಜ್ ರೈರವರು ಮೂರು ವರ್ಷದಿಂದ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರಿಗೆ ಸಹಕಾರ ನೀಡುತ್ತಿದ್ದೇವೆ. ಕಂಬಳವನ್ನು ಬೆಂಗಳೂರಿನಲ್ಲಿ ಮಾಡುವುದರ ಮೂಲಕ ಇಡೀ ವಿಶ್ವಕ್ಕೆ ಕಂಬಳವನ್ನು ತೋರಿಸಿದ್ದೇವೆ. ಅದೇ ರೀತಿ ಹುಲಿವೇಷ ಕುಣಿತವನ್ನು ಮೈಸೂರು ಅರಮನೆ ಮೈದಾನದಲ್ಲಿ ಮಾಡಿ ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡುತ್ತೇವೆ ಎಂದರು.
ಕರಾವಳಿಯ ಸಂಸ್ಕೃತಿಯ ದ್ಯೋತಕ ಪಿಲಿಗೊಬ್ಬು:
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ರೈ ಮಾತನಾಡಿ ಕರಾವಳಿಯ ಸಂಸ್ಕೃತಿಯ ದ್ಯೋತಕವಾದ ಪಿಲಿಗೊಬ್ಬು ಕಾರ್ಯಕ್ರಮವನ್ನು ಸಹಜವಾಗಿ ಸಹಜ್ ರೈ ಮಾಡುತ್ತಿದ್ದಾರೆ. ಧರ್ಮ, ಸಂಸ್ಕೃತಿಯ ಮೇಲೆ ಪ್ರಹಾರವಾಗುತ್ತಿರುವ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಗೆ ಶಕ್ತಿ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಪರಿಸರ ಮತ್ತು ಕಾಡಿನ ಪ್ರಾಣಿಯ ಮೇಲಿನ ಸಂಬಂಧವನ್ನು ಬೆಳೆಸಬೇಕು. ಪರಿಸರ ಉಳಿದರ ಪ್ರಾಣಿಗಳೂ ಉಳಿಯುತ್ತದೆ. ಈ ಮೂಲಕ ಪರಿಸರ ಉಳಿಸುವ ಚಿಂತನೆಯೂ ಇದರಲ್ಲಿ ಅಡಗಿದೆ ಎಂದು ಹೇಳಿದ ಅವರು ಸಹಜ್ ರೈರವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಬಿ.ಜಯರಾಮ ರೈ ಬಳೆಜ್ಜ, ಶಶಿಕುಮಾರ್ ರೈ ಬಾಲ್ಯೊಟ್ಟು, ದೇವಿಪ್ರಸಾದ್ ಶೆಟ್ಟಿ ಬೆಳಪು, ಪುತ್ತಿಲ ಪರಿವಾರ ಟ್ರಸ್ಟ್ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಧರಿತ್ರಿ ಅಸೋಸಿಯೇಟ್ಸ್ ಮಾಲಕ ಮುರಳೀಕೃಷ್ಣ ಹಸಂತಡ್ಕ, ಪುಣಚ ಶ್ರೀಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಎಸ್ಎಲ್ವಿ ಬುಕ್ ಇಂಡಿಯಾದ ದಿವಾಕರ ದಾಸ್, ಸೂರ್ಯ ಎಂಟರ್ಪ್ರೈಸಸ್ನ ಕಿರಣ್ ಆಳ್ವ, ಬೆಂಗಳೂರು ಕೃಪಾನಿಧಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಆಕಾಶ್ ನಾಗ್ಪಾಲ್, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪುತ್ತೂರು ಎಸ್.ಆರ್. ಬಿಲ್ಡರ್ಸ್ನ ಶಿವಪ್ರಸಾದ್ ಇಜ್ಜಾವು, ಮುಂಬೈ ಉದ್ಯಮಿ ಮೇಗಿನ ಮಾಲಾಡಿಗುತ್ತು ಶಶಿಧರ ಶೆಟ್ಟಿ, ಬಿಸಿರೋಡ್ ರಂಗೋಲಿ ಹೋಟೆಲ್ ಮಾಲಕ ಸದಾನಂದ ಶೆಟ್ಟಿ, ಬಂಟ್ವಾಳ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಶೆಟ್ಟ ರಂಗೋಲಿ, ಬೆಂಗಳೂರು ತಹಶೀಲ್ದಾರ್ ಅಜಿತ್ ರೈ ಸೊರಕೆ, ಕುಂಕುಮ್ ಅಸೋಸಿಯೇಟ್ಸ್ ಮಾಲಕ ಸಂತೋಷ್ ರೈ ನಳೀಲು, ಅಶ್ವಿನಿ ಹೋಟೆಲ್ ಮಾಲಕ ಕರುಣಾಕರ ರೈ, ಯಮುನಾ ಬೋರ್ವೆಲ್ಸ್ನ ಮಾಲಕಿ ದಿವ್ಯಾಕೃಷ್ಣ ಶೆಟ್ಟಿ, ಮಾನಕ ಜ್ಯುವೆಲ್ಲರ್ಸ್ನ ಮಾಲಕ ಸಿದ್ಧನಾಥ್ ಎಸ್.ಕೆ., ಉದ್ಯಮಿ, ಶರವೂರು ದೇವಸ್ಥಾನದ ಜೀರ್ಣೊದಾರ ಸಮಿತಿ ಅಧ್ಯಕ್ಷ ಹೇಮಂತ್ ರೈ ಮನವಳಿಕೆ ಗುತ್ತು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಬೆಂಗಳೂರಿನ ಉದ್ಯಮಿಗಳಾದ ಸಿ.ಎ.ಮಧುರಾಜ್ ರೈ, ರಂಜಿತ್ ರೈ ಬೈಲುಗುತ್ತು, ದತ್ತಾತ್ರೇಯ ಕನ್ಸ್ಟ್ರಕ್ಷನ್ ಮಾಲಕ ಹರಿಪ್ರಸಾದ್ ರೈ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಇಳಂತಾಜೆ, ಕುಂಬ್ರ ಪಂಚಮಿ ಎಕ್ಸ್ಪೋರ್ಟ್ನ ಆಡಳಿತ ಪಾಲುದಾರ ಮಿತ್ರಂಪಾಡಿ ಪುರಂದರ ರೈ, ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಚೇತನ್ ಪ್ರಕಾಶ್ ಕಜೆ, ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಅಜಯ್ ಎಂ.ಬಿ., ಪುತ್ತೂರು ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸಚಿನ್ ಶಂಕರ್ ಹಾರಕರೆ, ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ಉದ್ಯಮಿಗಳಾದ ಸನ್ಮತ್ ಮೇಲಾಂಟ, ಎಂ.ಆರ್.ಜಯಕುಮಾರ್, ರತನ್ ನಾಕ್ ಕರ್ನೂರುಗುತ್ತು, ಶಿವರಾಮ ಆಳ್ವ, ಉಮೇಶ್ ಪಾಂಡೆ, ವಿಜಯ ಕುಮಾರ್ ಸೊರಕೆ, ಸಾಮೆತ್ತಡ್ಕ ಸಿಝ್ಲರ್ನ ಪ್ರಸನ್ನ ಕುಮಾರ್ ಶೆಟ್ಟಿ, ಕುಂಬ್ರ ಆದಿತ್ಯ ವೈನ್ಸ್ನ ಉದಯ ರೈ, ದುಬೈ ಉದ್ಯಮಿ ಸಂದೀಪ್ ರೈ ನಂಜೆ, ಬನ್ನೂರು ದೇವಿಪ್ರಕಾಶ್ ಭಂಡಾರಿ, ಸಂಪ್ಯ ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು, ಕುಬೇರ ಬಾರ್ ರೆಸ್ಟೋರೆಂಟ್ ಮಾಲಕ ನವೀನ್ ರೈ ಎಣ್ಮೂರುಗುತ್ತು, ಮಂಗಳೂರು ಬ್ರೈಟ್ ವೇ ಇಂಡಿಯಾ ಆಡಳಿತ ನಿರ್ದೇಶಕ ಹರ್ಷಕುಮಾರ್ ರೈ ಮಾಡಾವು, ಕುಂಬ್ರ ಮಾತೃಶ್ರೀ ಅರ್ಥ್ಮೂವರ್ಸ್ ಮಾಲಕ ಮೋಹನ್ದಾಸ್ ರೈ ಕುಂಬ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪಿಲಿಗೊಬ್ಬು ಸಮಿತಿ ಆಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕಾರ್ಯಾದ್ಯಕ್ಷ ಸುಜಿತ್ ರೈ ಪಾಲ್ತಾಡ್, ಸಂಚಾಲಕ ನಾಗರಾಜ್ ನಡುವಡ್ಕ, ಉಪಾಧ್ಯಕ್ಷರಾದ ಶಂಕರ್ ಭಟ್ ಈಶಾನ್ಯ, ರತನ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಕಾರ್ಯದರ್ಶಿಗಳಾದ ಶರತ್ ಕುಮಾರ್ ಮಾಡಾವು, ದಿನೇಶ್ ವಾಸುಕಿ, ಸುರೇಶ್ ಪಿಲಿಪಟ್ಲ, ಪವನ್ ಶೆಟ್ಟಿ ಕಂಬಳತ್ತಡ್ಡ, ಜತೆ ಕಾರ್ಯದರ್ಶಿಗಳಾದ ಧನುಷ್ ಹೊಸಮನೆ, ಆನಂದ ತೆಂಕಿಲ, ಸಹಸಂಚಾಲಕ ರಾಜೇಶ್ ರೈ ಪರ್ಪುಂಜ, ಸಂಘಟನಾ ಕಾರ್ಯದರ್ಶಿಗಳಾದ ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಅರುಣ್ ರೈ, ಕೋಶಾಧಿಕಾರಿಗಳಾದ ರಾಜೇಶ್ ಕೆ. ಗೌಡ, ಅಶೋಕ್ ಅಡೂರು ಹಾಗೂ ಪದಾಧಿಕಾರಿಗಳು, ಸದಸ್ಯರು, ವಿಜಯ ಸಾಮ್ರಾಟ್ನ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.

ಸಿಟಿ ರವಿ, ಹಸ್ತ ಪಿ. ಶೆಟ್ಟಿರವರಿಗೆ ಸನ್ಮಾನ
ಸಿಟಿ ರವಿ ಹಾಗೂ ಅತೀ ಕಿರಿಯ ಪ್ರಾಯದಲ್ಲಿ ಸಾಧನೆ ಮಾಡಿ ಕುಂದಾಪುರದಲ್ಲಿ ಎಸಿಎಫ್ ಆಗಿರುವ ಹಸ್ತ ಪಿ. ಶೆಟ್ಟಿರವರನ್ನು ಸನ್ಮಾನಿಸಲಾಯಿತು. ವಿಜಯ ಸಾಮ್ರಾಟ್ ಸ್ಥಾಪಕಾಧ್ಯಕ್ಷ ಸಹಜ್ ರೈರವರು ಶಾಲು, ಹಾರ, ಪೇಟ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಿಟಿ ರವಿ ನಾಯಕನಾಗಿ ಬೆಳೆದು ಬಂದ ಹಾಗೂ ಅವರ ಸಾಧನೆಯ ಬಗ್ಗೆ ವೀಡಿಯೋ ಪ್ರದರ್ಶಿಸಲಾಯಿತು.