ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಕಾಲೇಜಿನ “Youth Red cross unit” ವತಿಯಿಂದ “KMC Blood Bank Athavara Mangalore” ಘಟಕಕ್ಕೆ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಂದ ರಕ್ತದಾನ ಕಾರ್ಯಕ್ರಮ ನಡೆಸಿ ಸುಮಾರು 95 ಯುನಿಟ್ ಗಳಷ್ಟು ರಕ್ತವನ್ನು ಸಂಗ್ರಹಿಸಿ ನೀಡಲಾಯಿತು. ಈ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವುದರ ಮೂಲಕ ಆಡಳಿತ ಮಂಡಳಿಯ ಸದಸ್ಯ ಈಶ್ವರ ಚಂದ್ರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಅತ್ತಾವರದ ಕೆಎಂಸಿಯ ವೈದ್ಯಾಧಿಕಾರಿಯಾದ ಐಶ್ವರ್ಯ ಸ್ವಾಮಿನಾಥನ್ ಮಾತನಾಡುತ್ತಾ “ರಕ್ತದಾನದ ಮಹತ್ವ ಹಾಗೂ ಒಂದು ಯುನಿಟ್ ರಕ್ತವು ತುರ್ತು ಸಂದರ್ಭ ದಲ್ಲಿ ಒಂದು ವ್ಯಕ್ತಿಯ ಪ್ರಾಣವನ್ನು ಉಳಿಸುವುದರಲ್ಲಿ ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ ಎಲ್ಲರೂ ರಕ್ತದಾನವನ್ನು ಮಾಡಿ” ಎಂದು ಪ್ರೇರಣೆ ನೀಡಿದರು.
ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ರವಿ ಮುಂಗ್ಲಿ ಮನೆ ಮಾತನಾಡುತ್ತ “ರಕ್ತದಾನ ಎಲ್ಲಾ ದಾನಗಳಿಂದಲೂ ಶ್ರೇಷ್ಠವಾದ ದಾನ ಎಂದು ಹೇಳುತ್ತ ರಕ್ತದಾನದ ಮಹತ್ವವನ್ನು ತಿಳಿಸಿದರು ಹಾಗೂ ಯುವಕರಾದ ನೀವು ರಕ್ತದಾನ ಮಾಡಬೇಕೆಂದು ತಿಳಿಸಿ ಪ್ರೇರೇಪಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರಿಂದ 95 ಯುನಿಟ್ಗಳಷ್ಟು ರಕ್ತವನ್ನು ಸಂಗ್ರಹಿಸಿ ನೀಡಲಾಯಿತು . ಕಾರ್ಯಕ್ರಮದ ಸ್ವಾಗತವನ್ನು ಕಾಲೇಜಿನ ಪ್ರಾಂಶುಪಾಲರಾದ ಮುರಳಿಧರ ನೆರವೇರಿಸಿದರು. ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರಾದ ಪ್ರಶಾಂತ್ ಕೆ ಧನ್ಯವಾದಗಳು ಸಮರ್ಪಿಸಿದರು ಆಟೋಮೊಬೈಲ್ ವಿಭಾಗದ ಹಿರಿಯ ಉಪನ್ಯಾಸಕರಾದ ಗುರುರಾಜ್ ಪಿ ಕಾರ್ಯಕ್ರಮ ನಿರೂಪಿಸಿದರು.