ಎ.ವಿ.ಜಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲೋಕಾರ್ಪಣೆ :ಲೋಗೋ ಅನಾವರಣ, ಪ್ರಥಮ ಸಾಲ ಪತ್ರ ವಿತರಣೆ, ಪ್ರಥಮ ಠೇವಣಿ ಪತ್ರ ವಿತರಣೆ

0

ಪುತ್ತೂರು:ಎ.ವಿ.ಜಿ ಅಸೋಸಿಯೇಟ್ಸ್ ಆಂಡ್ ಎ.ವಿ.ಜಿ.ಕನ್‌ಸ್ಟ್ರಕ್ಷನ್ಸ್, ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್‌ಗಳನ್ನು ಪುತ್ತೂರಿನಲ್ಲಿ ಸ್ಥಾಪಿಸಿ ಮುನ್ನಡೆಸುತ್ತಿರುವ ಆಡಳಿತ ಮಂಡಳಿಯಿಂದ ಸಹಕಾರಿ ಕ್ಷೇತ್ರಕ್ಕೊಂದು ಕೊಡುಗೆಯಾಗಿ ದ.ಕ.ಜಿಲ್ಲಾ ಮಟ್ಟದ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಂಸ್ಥೆಯು ನೆಲ್ಲಿಕಟ್ಟೆಯಲ್ಲಿ ಸೆ.29ರಂದು ಲೋಕಾರ್ಪಣೆಗೊಂಡಿತು.


ಬೆಳಿಗ್ಗೆ ಸೊಸೈಟಿಯ ಕಚೇರಿ ಕಟ್ಟಡದಲ್ಲಿ ಗಣಹೋಮ ನಡೆಯಿತು.ಬಳಿಕ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.ಬೆಂಗಳೂರುನ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ.ಗಂಗಾಧರ ಅವರು ಕಚೇರಿಯನ್ನು ಉದ್ಘಾಟಿಸಿದರು.ಮಾಜಿ ಶಾಸಕ ಸಂಜೀವ ಮಠಂದೂರು ಅವರು ಭದ್ರತಾ ಕೋಶವನ್ನು ಉದ್ಘಾಟಿಸಿದರು.ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಗಣಕಯಂತ್ರವನ್ನು ಉದ್ಘಾಟಿಸಿದರು.ದ.ಕ.ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ ಅವರು ಅಧ್ಯಕ್ಷರ ಕೊಠಡಿ ಉದ್ಘಾಟಿಸಿದರು.ಬಳಿಕ ಉದ್ಘಾಟನೆ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.


ಸಹಕಾರಿ ಕ್ಷೇತ್ರದ ಗೌರವಕ್ಕೆ ಎವಿಜಿ ಕೊಡುಗೆ: ಸಂಸ್ಥೆಯ ಚಿಹ್ನೆಯನ್ನು ಅನಾವರಣಗೊಳಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರದ ಹುಟ್ಟೂರು.ಇದು ದೇಶಕ್ಕೆ ಮಾದರಿಯಾಗಿರುವುದು ನಮಗೆ ಹೆಮ್ಮೆ.ಇದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ನಮ್ಮ ಜಿಲ್ಲೆಯ ಕೊಡುಗೆ ಅಪಾರ.ಒಂದು ಪಂಚಾಯತ್ ವ್ಯಾಪ್ತಿಯಲ್ಲೇ ಐದಾರು ಮೆಡಿಕಲ್ ಕಾಲೇಜು ಇರುವುದು ಕೂಡಾ ನಮ್ಮ ಜಿಲ್ಲೆಯಲ್ಲಿ.ಸಹಕಾರಿ ಕ್ಷೇತ್ರದ ಗೌರವ ಉಳಿಸಿರುವುದು ಕೂಡಾ ದ.ಕ.ಜಿಲ್ಲೆ.ಇದಕ್ಕೆ ಪೂರಕವಾಗಿ ಎವಿಜಿ ಸೌಹಾರ್ದ ಸಹಕಾರಿ ಸಂಘವೂ ಇದಕ್ಕೆ ಮತ್ತೊಂದು ಕೊಡುಗೆಯಾಗಿದೆ.ಯಾವುದೇ ಉದ್ಯಮ ಮಾಡಲು ಪ್ರಯತ್ನ ಬೇಕು.ಹಣದ ವ್ಯವಹಾರದಲ್ಲಿ ಜಾಗ್ರತೆ ಇರಬೇಕು.ಸಾಲ ಪಡೆದುಕೊಂಡವರು ಮರುಪಾವತಿ ಮಾಡುವ ಜವಾಬ್ದಾರಿಯೂ ಇರಬೇಕು.ಇಂತಹ ಸಂಸ್ಥೆ ಹುಟ್ಟಿದಾಗ ಇದರೊಂದಿಗೆ ಇಲ್ಲಿ ಉದ್ಯೋಗವೂ ಸೃಷ್ಟಿಯಾಗುತ್ತದೆ ಎಂದರು.ನನ್ನಲ್ಲಿ ಉದ್ಯೋಗ ಅರಸಿ ಬಂದವರಿಗೆ ನಾನು ದಾರಿ ತೋರಿಸುವ ಕೆಲಸ ಮಾಡುತ್ತೇನೆ.ಅವರಿಗೆ ಉದ್ಯೋಗ ಸಿಕ್ಕಿದರೆ ನನಗೆರಡು ಓಟು ಸಿಗಬಹುದು ಎಂಬ ನಂಬಿಕೆ.ಒಟ್ಟಿನಲ್ಲಿ ನಿಮ್ಮ ಸಂಸ್ಥೆಗೆ ನಾನು ವೈಯಕ್ತಿಕ ನೆಲೆಯಲ್ಲಿ ಶುಭ ಹಾರೈಸುತ್ತೇನೆ ಎಂದು ಹೇಳಿದ ಶಾಸಕರು, ಎವಿಜಿ ಸೊಸೈಟಿಯ ಇನ್ನಷ್ಟು ಶಾಖೆಗಳು ಉದ್ಘಾಟನೆಯಾಗುವ ಯೋಗಭಾಗ್ಯ ಬರಲಿ ಎಂದರು.


ಬ್ಯಾಂಕ್ ಆಗಿ ಪರಿವರ್ತನೆಯಾಗಿ ನಂ.1 ಸ್ಥಾನಕ್ಕೆ ಏರಲಿ:
ಎ.ವಿ.ಜಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕಚೇರಿಯನ್ನು ಉದ್ಘಾಟಿಸಿದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ.ಗಂಗಾಧರ ಅವರು ಮಾತನಾಡಿ ಸಾಲ ಕೊಡುವ ಉದ್ದೇಶ ಉತ್ತಮವಾಗಿರುವಾಗ ಸಾಲ ಪಡೆದವರು ಮರುಪಾವತಿಯ ಗುಣವನ್ನು ಮೈಗೂಡಿಸಿಕೊಳ್ಳಬೇಕು ಜೊತೆಗೆ ಕೃಷಿಕರಿಗೂ ಪೂರಕವಾಗಿರಬೇಕು.ಈ ಸಂಸ್ಥೆ ಮುಂದೆ ಬ್ಯಾಂಕ್ ಆಗಿ ಪರಿವರ್ತನೆಯಾಗಿ ನಂ.1 ಸ್ಥಾನಕ್ಕೆ ಏರಲಿ ಎಂದು ಹಾರೈಸಿದರು.


ಒಂದು ವರ್ಷದೊಳಗೆ ಕೋಟಿಗಟ್ಟಲೆ ವ್ಯವಹಾರವಾಗಲಿ:
ಸಭಾ ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ಪ್ರಥಮ ಸಾಲಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿ ಈ ಸಂಸ್ಥೆ ಮಹಿಳೆಯರಿಗೆ ಸಾಕಷ್ಟು ಉತ್ತೇಜನೀಯ ಸಂಸ್ಥೆಯಾಗಿದೆ.ಮುಂದಿನ ವರ್ಷ ಕೋಟಿಗಟ್ಟಲೆ ವ್ಯವಹಾರದೊಂದಿಗೆ ಸೊಸೈಟಿಯ ಬೆಳವಣಿಗೆಯಾಗಲಿ ಎಂದು ಶುಭಹಾರೈಸಿದರು.


ಕೆವಿಜಿಯಷ್ಟೆ ಎವಿಜಿ ಪ್ರಬಲ ಆರ್ಥಿಕ ಶಕ್ತಿಯಾಗಿ ಮೂಡಿ ಬರಲಿದೆ:
ಎವಿಜಿ ಸೌಹಾರ್ದ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಕಚೇರಿಯಲ್ಲಿ ಲಾಕರ್ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ತುಳುನಾಡು ಸಹಕಾರಿ ಕಾಶಿ. ಸಹಕಾರಿ ತತ್ವದಿಂದ ಈ ದೇಶದಲ್ಲಿ ಬದಲಾವಣೆ ಆಗಿದೆ.ಇವತ್ತು ಸಹಕಾರ ಕಾಯ್ದೆ ಪ್ರಕಾರ ಸ್ವಾಯತ್ತ ಸಂಸ್ಥೆಯಾಗಿ ಮೂಡಿ ಬಂದಿದೆ.ಊರಿಗೆ ಊರೇ ಅಭಿವೃದ್ದಿ ಮಾಡುವ ಕೆಲಸ ಸಹಕಾರ ಸಂಘದ ಮೂಲಕ ಆಗಿದೆ.ಸರಕಾರ ಮಾಡದ್ದನ್ನು ಸಹಕಾರಿ ಸಂಘ ಮಾಡಿದೆ.ರಾಜ್ಯದಲ್ಲಿ 88 ಸಾವಿರ ಸಹಕಾರಿ ಸಂಘಗಳಿವೆ.ಈ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗ ಸರಿಸಾಟಿಯಾಗಿ ಕೆಲಸ ಮಾಡುತ್ತಿವೆ.ಇವತ್ತು ಹಲವಾರು ಸಂಘ ಸಂಸ್ಥೆಗಳು ಕೋಟಿಗಟ್ಟಲೆ ಲಾಭ ಗಳಿಸುತ್ತಿವೆ.ಅದಕ್ಕೆ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಮಾಣಿಕತೆ.ಅದು ನಮ್ಮ ರಕ್ತದಲ್ಲೇ ಇದೆ.ಸಹಕಾರಿ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಒಂದು ನಾಣ್ಯದ ಎರಡು ಮುಖಗಳು.ಎಲ್ಲಿ ಭದ್ರತೆ, ಜನಸ್ನೇಹಿ ವ್ಯವಸ್ಥೆ ಇದೆಯೋ ಅಲ್ಲಿಗೆ ಗ್ರಾಹಕರು ಬರುತ್ತಾರೆ ಎಂದರಲ್ಲದೆ, ಪುತ್ತೂರಿನಲ್ಲಿ ಎವಿಜಿ ಸೊಸೈಟಿಯು ಕೆವಿಜಿಯಷ್ಟೆ ಪ್ರಬಲ ಆರ್ಥಿಕ ಶಕ್ತಿಯಾಗಿ ಮೂಡಿ ಬರಲಿದೆ ಎಂದರು.


ಪುತ್ತೂರಿನ ಅಭಿವೃದ್ಧಿಯ ಮುಕುಟಕ್ಕೆ ಇನ್ನೊಂದು ಗರಿ:
ಸೊಸೈಟಿಯ ಕಚೇರಿಯಲ್ಲಿ ಗಣಕಯಂತ್ರಕ್ಕೆ ಚಾಲನೆ ನೀಡಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ ಸಹಕಾರಿ ಕ್ಷೇತ್ರ ಪವಿತ್ರ ಕ್ಷೇತ್ರ.1500 ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಸುಮಾರು 14 ಸಂಸ್ಥೆಗಳು ಶೇ.24 ಡಿವಿಡೆಂಡ್ ಕೂಡಾ ಕೊಟ್ಟಿವೆ.ಇವತ್ತು ಪುತ್ತೂರಿನ ಅಭಿವೃದ್ಧಿಯ ಮುಕುಟಕ್ಕೆ ಇನ್ನೊಂದು ಗರಿಯಾಗಿ ಎವಿಜಿ ಸೌಹಾರ್ದ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಮೂಡಿ ಬಂದಿದೆ.ಗ್ರಾಹಕ ಮತ್ತು ಸಿಬ್ಬಂದಿ ಸಹಕಾರದಿಂದ ಸಹಕಾರಿ ಸಂಸ್ಥೆ ಬೆಳೆದಿದೆ ಎಂದು ಹೇಳಿ ಶುಭಹಾರೈಸಿದರು.


ಈ ಸಂಸ್ಥೆಗೆ ಉಜ್ವಲ ಭವಿಷ್ಯ ಇದೆ:
ಸೊಸೈಟಿಯ ವಿಶೇಷತೆಗಳ ಮಾಹಿತಿ ಪತ್ರ ಬಿಡುಗಡೆ ಮಾಡಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ,ಸಂಸ್ಥೆ ಪ್ರಾರಂಭ ಆಗುವಾಗ ಅನೇಕ ವಿಚಾರ ಚರ್ಚೆ ಆಗುತ್ತದೆ.ಆದರೆ ಎವಿಜಿ ಅವರು ಪ್ರಾಮಾಣಿಕತೆಗೆ ಒತ್ತು ನೀಡುವವರು.ಹಲವು ಸಂದರ್ಭ ಸಂಸ್ಥೆಯ ವ್ಯವಹಾರ ನೋಡಿ ಗ್ರಾಹಕರು ಡೆಪೊಸಿಟ್‌ಗೆ ಮುಂದಾಗುತ್ತಾರೆ. ಆದರೆ ಇಲ್ಲಿನ ಆಡಳಿತ ಮಂಡಳಿಯಲ್ಲಿ ಎಲ್ಲರೂ ಒಬ್ಬರನ್ನೊಬ್ಬರು ಮೀರಿಸುವ ದಿಗ್ಗಜ್ಜರಾಗಿದ್ದಾರೆ.ಇಂತಹ ಸಂದರ್ಭದಲ್ಲಿ ಎವಿಜಿ ಕ್ರೆಡಿಟ್ ಸೌಹಾರ್ದ ಸೊಸೈಟಿಯಲ್ಲಿ ಎಷ್ಟು ಡೆಪೋಸಿಟ್ ಇಟ್ಟರೂ ಯಾವ ಭಯವಿಲ್ಲ.ಒಳ್ಳೆಯ ಆಡಳಿತ ಇದ್ದಾಗ ಎಲ್ಲರೂ ಮುಂದೆ ಬರುತ್ತಾರೆ.ಹಾಗಾಗಿ ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯುವಲ್ಲಿ ಯಾವ ಸಂಶಯವೂ ಇಲ್ಲ.ಈ ಸಂಸ್ಥೆಗೆ ಉಜ್ವಲ ಭವಿಷ್ಯ ಇದೆ ಎಂದು ಹೇಳಿ ಶುಭಹಾರೈಸಿದರು.


ಗ್ರಾಹಕರಿಗೆ ಒಳ್ಳೆಯ ಸೇವೆ ಸಂಸ್ಥೆಯ ಅಭಿವೃದ್ಧಿಗೆ ಪೂರಕ:
ಪ್ರಥಮ ಠೇವಣಿ ಪತ್ರ ಬಿಡುಗಡೆ ಮಾಡಿದ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಮಾತನಾಡಿ ಕುರುಂಜಿ ವೆಂಕಟ್ರಮಣ ಗೌಡ ಅವರು ಕೂಡಾ ಮೊದಲು ವಿದ್ಯಾಸಂಸ್ಥೆ ಆರಂಭಿಸಿದರು.ಇವತ್ತು ಎವಿಜಿ ಕೂಡಾ ಮೊದಲು ವಿದ್ಯಾಸಂಸ್ಥೆ ಬಳಿಕ ಆರ್ಥಿಕ ಸಂಸ್ಥೆ.ಕುಲದೇವರಾದ ವೆಂಕಟ್ರಮಣ ದೇವರ ಅನುಗ್ರಹದಿಂದ ಎಲ್ಲವೂ ಉತ್ತಮವಾಗಿ ನಡೆಯುತ್ತದೆ.ಎವಿಜಿ ಸೊಸೈಟಿ ಆರಂಭದ ಮಾತು ಕೇಳಿದಾಗ ಹಲವು ಸಂದರ್ಭ ಅನೇಕ ಜನರು ಪ್ರಶ್ನೆ ಮಾಡಿದ್ದೂ ಇದೆ.ಅದೇ ಮಾತು ಪುತ್ತೂರಿನಲ್ಲಿ ವೆಂಕಟ್ರಮಣ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಆರಂಭದ ಸಂದರ್ಭ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ಆರಂಭ ಆಗುವಾಗ ಕೂಡಾ ಕೇಳಿ ಬಂತು.ಆದರೆ ಸಂಘ ಸ್ಪರ್ಧೆಗಾಗಿ ಆರಂಭಗೊಂಡಿಲ್ಲ. ವಿಟ್ಲದಲ್ಲಿ ಒಂದೇ ಕಟ್ಟಡದಲ್ಲಿ ನಾಲ್ಕೈದು ಸಹಕಾರಿ ಸಂಸ್ಥೆಗಳಿವೆ.ಎಲ್ಲದರಲ್ಲೂ ಉತ್ತಮ ವ್ಯವಹಾರ ನಡೆಯುತ್ತಿದೆ.ಯಾವುದೇ ಸಂಸ್ಥೆ ಬೆಳೆಯುವಾಗ ಅದಕ್ಕೆ ಪ್ರೋತ್ಸಾಹ ನೀಡಬೇಕು. ಸಹಕಾರಿ ರಂಗದಲ್ಲಿ ಉತ್ತಮ ಸೇವೆ ನೀಡಿದಾಗ ಸಂಸ್ಥೆ ಅಭಿವೃದ್ಧಿ ಹೊಂದುತ್ತದೆ ಎಂದರು.


ಎಲ್ಲಾ ಸಮುದಾಯದವರ ಆಶೀರ್ವಾದ ಸಂಸ್ಥೆಗೆ ಇರಲಿ:
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎವಿಜಿ ಸೌಹಾರ್ದ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡ ಅವರು ಮಾತನಾಡಿ,ಅಽಕಾರದ ಆಸೆಗಾಗಿ ನಾನು ಹಳ್ಳಿಯಿಂದ ಪೇಟೆಗೆ ಬಂದವನಲ್ಲ.ಯಾಕೆಂದರೆ ರಜಾಗುಣ ಅಂತ್ಯಕಾಲದಲ್ಲಿ ಬರಬಾರದು.ಸಾತ್ವಿಕನಾಗಿ ಬದುಕಬೇಕೆಂದು ಹೇಳಿ ನನ್ನಲ್ಲಿರುವ ಎಲ್ಲವನ್ನೂ ಕೊಡಬೇಕಾದವರಿಗೆ ಕೊಟ್ಟು ನಾನು ಪುತ್ತೂರಿಗೆ ಬಂದಿದ್ದೇನೆ.ನಾನು ರಾಜಕೀಯದಲ್ಲಿ ಇಲ್ಲ.ಇವತ್ತು ಎವಿ ನಾರಾಯಣ ಅವರು ನನ್ನಲ್ಲಿ ಪಿತೃ ಸ್ವರೂಪವನ್ನು ಕಂಡು ನನಗೆ ಇಲ್ಲೊಂದು ಅವಕಾಶ ಮಾಡಿಕೊಟ್ಟಿದ್ದಾರೆ.ನಾನು ಅವರಿಗೆ ಆಭಾರಿ.ಅಧಿಕಾರ,ಕೀರ್ತಿ,ಅಂತಸ್ತು ಬಯಸಿದವನಲ್ಲ.ಸಮಾಜವೇ ನನ್ನ ದೇವರು ಎಂದು ಬಂದವ.ಹಾಗಾಗಿ ಇವತ್ತು ದೇವರ ಇಚ್ಚೆಯಂತೆ ಕಾರ್ಯಕ್ರಮಕ್ಕೆ ಮಳೆಯೂ ಬಿಟ್ಟಿದೆ.ಈ ಸಂಸ್ಥೆಯಲ್ಲಿರುವ 14 ಮಂದಿ ನಿರ್ದೇಶಕರೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರು.ಆದರೆ ನಾನು ಮಾತ್ರ ಶೂನ್ಯ.ಆದರೂ ನನಗೆ ಎಷ್ಟು ಸಾಧ್ಯವೋ ಅಷ್ಟು ನ್ಯಾಯ ಕೊಡಲು ಸಾಧ್ಯ.ಎಲ್ಲಾ ಸಮುದಾಯದವರ ಆಶೀರ್ವಾದದಿಂದ ಈ ಸಂಸ್ಥೆ ಮುನ್ನಡೆಯಬೇಕು ಎಂದರು.


ಸಮಾಜ ಸೇವೆಯ ತುಡಿತದ ಕಾರ್ಯರೂಪ:
ಎವಿಜಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಪ್ರವರ್ತಕ ಎ.ವಿ.ನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಎವಿಜಿ ಎಂಬುದು ನನ್ನ ತಂದೆ ತಾಯಿಯ ಹೆಸರು.24 ವರ್ಷದ ಹಿಂದೆ ಎವಿಜಿ ಸಂಸ್ಥೆ ಆರಂಭಿಸಿದ್ದೆ.ಅದು ಮುಂದುವರಿಯುತ್ತಾ ಸಮಾಜ ಸೇವೆಯ ಕಡೆ ವಾಲಿತು.ಈ ನಡುವೆ ಬಾಲಾಜಿ ಪೈಂಟ್ಸ್ ಆರಂಭಿಸಿದೆವು.ಇದರ ಜೊತೆಗೆ ಕೃಷಿಗೆ ಸಂಬಂಽಸಿ ನರ್ಸರಿ ಆರಂಭಿಸಿ ಕೊನೆಗೆ ಸಮಾಜ ಸೇವೆಯ ತುಡಿತ ಹೆಚ್ಚಾಗಿ ಹಿರಿಯರ ಆಸೆಯಂತೆ ವಿದ್ಯಾ ಕ್ಷೇತ್ರ ಮಾಡಿದೆವು.ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇವತ್ತು ತಂದೆ ತಾಯಿಯ ಆಸೆಯಂತೆ ನಡೆಯುತ್ತಿದೆ.ಈ ಎಲ್ಲಾ ಕ್ಷೇತ್ರದಲ್ಲಿ ನನಗೆ ಕೈ ಜೋಡಿಸಿದವರು ನನ್ನ ಮಾವ ಮತ್ತು ಅತ್ತೆ ಹಾಗು ಮಿತ್ರರು.ಸೊಸೈಟಿಯ ಕುರಿತು 9 ತಿಂಗಳ ಹಿಂದೆ ಸಭೆಯಲ್ಲಿ ಯೋಜನೆ ರೂಪಿಸಿ ಇದರ ಫಲವಾಗಿ ಎವಿಜಿ ಸೊಸೈಟಿ ಆರಂಭಗೊಂಡಿದೆ.1 ಸಾವಿರ ರೂಪಾಯಿ ಮುಖ ಬೆಲೆಯ ಪಾಲುಬಂಡವಾಳವನ್ನು ಸಂಗ್ರಹಿಸಿ ಸಹಕಾರಿ ಪರವಾನಿಗೆ ಪಡೆದಿದ್ದೇವೆ ಎಂದರು.


ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ಗೆ ಮೇಜು ಕೊಡುಗೆ:
ಎವಿಜಿ ಸೌಹಾರ್ದ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಬೆಳವಣಿಗೆಯಲ್ಲಿ ಹಲವು ರೀತಿಯಲ್ಲಿ ಸಹಕಾರ ನೀಡಿದ ಕಚೇರಿ ಕಟ್ಟಡದ ಪಕ್ಕದಲ್ಲೇ ಇರುವ ಸಂಸ್ಥೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ಗೆ ರೂ.5 ಸಾವಿರ ಮೌಲ್ಯದ ಮೇಜು ಕೊಡುಗೆಯಾಗಿ ನೀಡಲಾಯಿತು.ಸಂಘದ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡ ಅವರು ಈ ಕೊಡುಗೆಯನ್ನು ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಡಿ.ವಿ.ಮನೋಹರ್, ಕಾರ್ಯದರ್ಶಿ ದಿವ್ಯಪ್ರಸಾದ್, ಪ್ರಬಂಧಕ ಸುನಿಲ್ ಕುಮಾರ್, ಕೇಂದ್ರ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಅವರಿಗೆ ಹಸ್ತಾಂತರಿಸಿದರು. ಸೊಸೈಟಿ ನಿರ್ದೇಶಕ ಸೀತಾರಾಮ ಕೇವಳ ಅವರು ಕೊಡುಗೆಯ ಕಾರ್ಯಕ್ರಮ ನಿರ್ವಹಿಸಿದರು.


ಪ್ರಥಮ ಸಾಲ, ಠೇವಣಿ ಪತ್ರ ವಿತರಣೆ:
ಬಲ್ನಾಡಿನ ವೀರಪ್ಪ ಗೌಡ ಅವರಿಗೆ ಪ್ರಥಮ ಸಾಲ ಪತ್ರ,ಶಾರದಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ ಅವರಿಗೆ ಪ್ರಥಮ ಠೇವಣಿ ಪತ್ರವನ್ನು ನೀಡಿ ಗೌರವಿಸಲಾಯಿತು.


ಸಂಘದ ಉಪಾಧ್ಯಕ್ಷ ಉಮೇಶ್ ಗೌಡ ಮಳುವೇಲು,ನಿರ್ದೇಶಕರಾದ ಸೀತಾರಾಮ ಕೇವಳ,ಗುಡ್ಡಪ್ಪ ಬಲ್ಯ,ಗಂಗಯ್ಯ ಗೌಡ,ವೇದಾವತಿ,ಜಯಪ್ರಕಾಶ್ ಕಳುವಾಜೆ,ಮೋಹನ್ ಜಿ.ಅತಿಥಿಗಳನ್ನು ಗೌರವಿಸಿದರು.ಸಂಘದ ನಿರ್ದೇಶಕರಾದ ಗುಡ್ಡಪ್ಪ ಗೌಡ ಬಲ್ಯ,ಟಿ.ಗಂಗಯ್ಯ ಗೌಡ,ಜಯಪ್ರಕಾಶ್ ಕಳುವಾಜೆ,ಎಚ್.ಸುಂದರ ಗೌಡ,ಗಂಗಾಧರ ಎ.ವಿ.,ಪದ್ಮಪ್ಪ ಗೌಡ ಕೆ.,ಕೆ.ಮಾಧವ ಗೌಡ, ಮೋಹನ ಜಿ.,ವೇದಾವತಿ ಶೀನಪ್ಪ ಗೌಡ ಬೈತ್ತಡ್ಕ,ಉಷಾಲಕ್ಷ್ಮೀ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭ ಸಂಘದ ನಿರ್ದೇಶಕರನ್ನು ಸಂಘದ ಅಧ್ಯಕ್ಷರು ಗೌರವಿಸಿದರು.ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಶಿಕ್ಷಕಿ ಶ್ವೇತಾ ಪ್ರಾರ್ಥಿಸಿದರು.ಎ.ವಿ.ಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಆಡಳಿತ ಮಂಡಳಿಯ ನಿರ್ದೇಶಕಿ ಪ್ರಭಾವತಿ ಮತ್ತು ಭಾರತೀಯ ಜೀವ ವಿಮಾ ಸಂಘದ ಮುಖ್ಯ ಸಲಹೆಗಾರ ವಸಂತ ಎಸ್.ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.ಎವಿಜಿ ಸೌಹಾರ್ದ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಉಮೇಶ್ ಮಳುವೇಲು ವಂದಿಸಿದರು.ಸಭೆಯ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು.ಮಧ್ಯಾಹ್ನ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಕಚೇರಿ ಉದ್ಘಾಟನೆ ಸಂದರ್ಭ ಉಪಸ್ಥಿತರಿದ್ದರು.

ಅಖಿಲ ಕರ್ನಾಟಕ ಒಕ್ಕಲಿಗ ಸಮಾಜದ ರಾಜ್ಯ ಕಾರ್ಯದರ್ಶಿ ರಂಗೇ ಗೌಡ, ಗೋವಿಂದ ಗೌಡ, ಮೈಸೂರು ಒಕ್ಕಲಿಗ ಸಮಾಜದ ಅಧ್ಯಕ್ಷ ತೇಜಸ್ ಗೌಡ, ಜಿ.ಪಂ.ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ,ಗಿರೀಶ್ ರೈ, ನಿವೃತ್ತ ಮುಖ್ಯಗುರು ಪ್ರೇಮಲತಾ ರೈ,ಒಕ್ಕಲಿಗ ಗೌಡ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು,ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು,ಸಾರ್ವಜನಿಕ ಶ್ರೀ ಗಣೇಶೋತ್ಸವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ ಇದರ ಕಾರ್ಯಾಧ್ಯಕ್ಷ ರಾಧಾಕೃಷ್ಣ ಗೌಡ ನಂದಿಲ,ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಪ್ರಾಂಶುಪಾಲ ಅಮರನಾಥ ಪಟ್ಟೆ,ಸಂಸ್ಥೆಯ ನಿರ್ದೇಶಕಿ ಪುಷ್ಪಾವತಿ ಕಳುವಾಜೆ,ವಕೀಲರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ್ ಗೌಡ ಕೋಡಿಂಬಾಳ, ವಕೀಲ ಶೀನಪ್ಪ ಗೌಡ ಬೈತ್ತಡ್ಕ,ನಿವೃತ್ತ -ರೆಸ್ಟರ್ ಸುರೇಶ್ ಗೌಡ ಕಲ್ಲಾರೆ, ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಟ್ರಸ್ಟ್‌ನ ಕೇಂದ್ರ ಸಮಿತಿಯ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಉಪಾಧ್ಯಕ್ಷ ಶ್ರೀಧರ್ ಗೌಡ ಕಣಜಾಲು,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ, ರಾಮಕೃಷ್ಣ ಕರ್ಮಲ, ನಿವೃತ್ತ ಪ್ರಾಂಶುಪಾಲ ದಾಮೋದರ ನಂದಿಲ, ಪ್ರೇರಣಾ ಟ್ರಸ್ಟ್‌ನ ನಿರ್ದೇಶಕ ನಾಗೇಶ್ ಕೆಡೆಂಜಿ, ನಗರಸಭೆ ಸದಸ್ಯೆ ಗೌರಿ ಬನ್ನೂರು, ತಿಮ್ಮಪ್ಪ ಗೌಡ, ಮೋನಪ್ಪ ಗೌಡ ತಾರಿಪಡ್ಪು, ಗಿರಿಧರ ಅಂಬೆಕಲ್ಲು, ಜಯರಾಮ ಮಡಪ್ಪಾಡಿ, ಹರಿಣಾಕ್ಷಿ ಕೇವಳ, ಪೂರ್ಣಾತ್ಮ ಈಶ್ವರಮಂಗಲ, ನಾರಾಯಣ ಗೌಡ, ನಿತ್ಯ ಚಪಾತಿಯ ರಾಧಾಕೃಷ್ಣ ಇಟ್ಟಿಗುಂಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಎ.ವಿ.ಜಿ.ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಿಶೇಷತೆ
ಪುತ್ತೂರಿನ ರೈಲ್ವೇ ನಿಲ್ದಾಣ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಗಳಿಂದ ಕೇವಲ 300 ಮೀ.ಮತ್ತು ಸರಕಾರಿ ಬಸ್ ನಿಲ್ದಾಣದಿಂದ ಕೇವಲ 200 ಮೀ. ದೂರದಲ್ಲಿ ಖಾಸಗಿ ಬಸ್ ನಿಲ್ದಾಣದ ಎದುರು ತಲೆಯೆತ್ತಿರುವ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ದೇಶ ಕಾಯುವ ಯೋಧರ ಠೇವಣಿಗಳ ಮೇಲೆ ಶೇ.0.5೦, ಮಹಿಳೆಯರಿಗೆ ಶೇ.೦.25, ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ಶೇ.೦.50 ಅಧಿಕ ಬಡ್ಡಿಯನ್ನು ನೀಡಲಿದೆ.99 ತಿಂಗಳುಗಳಲ್ಲಿ ದ್ವಿಗುಣಗೊಳ್ಳುವ ಎವಿಜಿ ಕ್ಯಾಶ್ ಸರ್ಟಿಫಿಕೆಟ್‌ನ ಜೊತೆಗೆ ಆರ್.ಡಿ. ಮತ್ತು ನಿರಖು ಠೇವಣಿಗಳ ಮೇಲೆ ಆಕರ್ಷಕ ಬಡ್ಡಿಯನ್ನು ನೀಡಲಿದೆ.ಇತರ ವಿವಿಧ ಸಾಲ ಸೌಲಭ್ಯಗಳೂ ಲಭ್ಯವಿರಲಿವೆ.ಇದರ ಜೊತೆಗೆ ಲೋಕಾರ್ಪಣೆಯ ಅಂಗವಾಗಿ ವಿಶೇಷ ಬಡ್ಡಿ ಯೋಜನೆಯಾಗಿ 2025ರ ವರ್ಷಾಂತ್ಯದೊಳಗೆ ಇರಿಸಲಾಗುವ ಎಲ್ಲಾ ಠೇವಣಿಗಳಿಗೆ ಶೇ.೦.25 ಅಧಿಕ ಬಡ್ಡಿಯನ್ನು ನೀಡಲಾಗುತ್ತದೆ
ಕಳುವಾಜೆ ವೆಂಕಟ್ರಮಣ ಗೌಡ,ಅಧ್ಯಕ್ಷರು
ಎವಿಜಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ


ಸೊನ್ನೆಯಿಲ್ಲದಿದ್ದರೆ ಯಾವ
ಸಂಖ್ಯೆಗೂ ವ್ಯಾಲ್ಯೂವಿಲ್ಲನಾನು ಏನಿಲ್ಲ ಸೊನ್ನೆ ಎಂದು ಅಧ್ಯಕ್ಷರು ಹೇಳಿದ್ದರು.ಆದರೆ ಸೊನ್ನೆ ಭಾರತದ ಕೊಡುಗೆ.ಸೊನ್ನೆ ಇಲ್ಲದಿದ್ದರೆ ಯಾವುದೇ ಸಂಖ್ಯೆಗೆ ವ್ಯಾಲ್ಯೂ ಇಲ್ಲ.ಸೊನ್ನೆ ಚಕ್ರದ ಸಂಕೇತ.ಬ್ಯಾಲೆನ್ಸ್ ಸಂಕೇತ. ಮೇಧಾವಿಗಳನ್ನು ಒಟ್ಟು ಸೇರಿಸಿ ಸಂಘವನ್ನು ಹುಟ್ಟು ಹಾಕಿದ ಕಳುವಾಜೆ ವೆಂಕಟ್ರಮಣ ಗೌಡ ಅವರು ಸೊನ್ನೆಯಲ್ಲ ಸನ್ನೆ ಎಂದು ಕಾರ್ಯಕ್ರಮ ನಿರೂಪಕ ವಸಂತ ಎಸ್ ವೀರಮಂಗಲ ಅವರು ಸಭೆಗೆ ತಿಳಿಸಿದರು.ಈ ವೇಳೆ ಸಭೆಯಲ್ಲಿ ಕರತಾಡನ ಮುಗಿಲು ಮುಟ್ಟಿತು.

LEAVE A REPLY

Please enter your comment!
Please enter your name here