ಸವಣೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಇದರ ಪುತ್ತೂರು ಕ್ಷೇತ್ರದಿಂದ ನಿರ್ದೇಶಕರಾಗಿ ಪುಣ್ಚಪ್ಪಾಡಿ ಗ್ರಾಮದ ಸಚಿನ್ ಕುಮಾರ್ ಜೈನ್ ಅವರು 2ನೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಚಿನ್ ಕುಮಾರ್ ಜೈನ್ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು,ಪ್ರಸ್ತುತ ಪುಣ್ಚಪ್ಪಾಡಿ ಗೌರಿಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ,ಮಂಗಳೂರಿನ ಧವಳ ಕೋ-ಅಪರೇಟಿವ್ ಸೊಸೈಟಿ ನಿಯಮಿತ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಚಿನ್ ಕುಮಾರ್ ಅವರು ಪುಣ್ಚಪ್ಪಾಡಿ ಯುವರಾಜ ಕಡಂಬ ಮತ್ತು ಮಲ್ಲಿಕಾ ಯುವರಾಜ್ ಅವರ ಪುತ್ರ.
ಅವಿರೋಧ ಆಯ್ಕೆ ಹಿನ್ನೆಲೆ ಅ.5 ರ ಚುನಾವಣೆ ಇಲ್ಲ
ಹಾಪ್ ಕಾಮ್ಸ್ ನ ಆಡಳಿತ ಮಂಡಳಿಯ 16 ನಿರ್ದೇಶಕರ ಆಯ್ಕೆಗೆ ಅ.5ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಎಲ್ಲಾ ನಿರ್ದೇಶಕರ ಆಯ್ಕೆಯು ಅವಿರೋಧವಾಗಿ ನಡೆದ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುವುದಿಲ್ಲ.
ಉಳಿದಂತೆ ಮಂಗಳೂರು ಕ್ಷೇತ್ರದಿಂದ ಪ್ರಶಾಂತ್ ಎ ಗಟ್ಟಿ ಬೋಳಿಯಾರು, ಬಂಟ್ವಾಳ ಕ್ಷೇತ್ರದಿಂದ ಯಶೋಧರ ಶೆಟ್ಟಿ ದಂಡೆ ವಾಮನಪದವು,ಸುಳ್ಯ ಕ್ಷೇತ್ರದಿಂದ ಜಯಪ್ರಕಾಶ ಕೂಜುಗೋಡು,ಬೆಳ್ತಂಗಡಿ ಕ್ಷೇತ್ರದಿಂದ ರತ್ನರಾಜ್ ಬಳೆಂಜ,ಉಡುಪಿ ಕ್ಷೇತ್ರದಿಂದ ಜಯಕುಮಾರ್ ಪರ್ಕಳ,ಕಾರ್ಕಳ ಕ್ಷೇತ್ರದಿಂದ ಹರೀಶ್ ಕಲ್ಯಾ,ಕುಂದಾಪುರ ಕ್ಷೇತ್ರದಿಂದ ಅನಂತ ಪದ್ಮನಾಭ ಕುಂದಬಾರಂದಾಡಿ,ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಸೀತಾರಾಮ ಗಾಣಿಗ ಹಾಲಾಡಿ,ಹಿಂದುಳಿದ ವರ್ಗ ಬಿ ಯಿಂದ ವಿಜಯ ರೈ ಅಜ್ಜಿಬೆಟ್ಟು ಬಂಟ್ವಾಳ,ಪರಿಶಿಷ್ಟ ಜಾತಿ ಸ್ಥಾನದಿಂದ ಚೀಂಪ ಆರೂರು ಉಡುಪಿ,ಪರಿಶಿಷ್ಟ ಪಂಗಡ ಸ್ಥಾನದಿಂದ ಸುಂದರ ನಾಯ್ಕ ಇರ್ವತ್ತೂರು ಬಂಟ್ವಾಳ,ಮಹಿಳಾ ಮೀಸಲು ಸ್ಥಾನದಿಂದ ನಿರ್ಮಲಾ ಮೀಯಾರು ಕಾರ್ಕಳ,ಮಮತಾ ಶೆಟ್ಟಿ ಗುರುವಾಯನಕೆರೆ,ಬಿ ತರಗತಿ ಸದಸ್ಯ ಸ್ಥಾನದಿಂದ ಸುಭದ್ರ ರಾವ್ ಪೆರ್ಮಂಕಿ ಮಂಗಳೂರು,ಲಕ್ಷ್ಮೀನಾರಾಯಣ ಉಡುಪ ನೈನಾಡು ಬಂಟ್ವಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.