





ಪುತ್ತೂರು: ದಾರುಲ್ ಹಸನಿಯಾ ಅಕಾಡೆಮಿ ಎಜು ಗಾರ್ಡನ್, ಸಾಲ್ಮರ ಇದರ ಮ್ಯಾನೇಜರ್ ಅಬ್ದುಲ್ ಕರೀಂ ದಾರಿಮಿ ಕುಂಬ್ರ ಅವರು ಸಂಸ್ಥೆಯ ಪ್ರಚಾರಾರ್ಥ ಯು.ಎ.ಇ.ಗೆ ತೆರಳುತ್ತಿರುವ ಹಿನ್ನಲೆಯಲ್ಲಿ, ಸಂಸ್ಥೆಯ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರತಿಭಾ ಕಾರ್ಯಕ್ರಮದ ಸಂದರ್ಭದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.












