ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭರವರಿಗೆ ಬೀಳ್ಕೊಡುಗೆ

0

ಪುತ್ತೂರು:ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತರಾದ ಕೆ.ಶುಭ ಕುತ್ಯಾಡಿ ಅವರಿಗೆ ಬೀಳ್ಕೊಡುಗೆ ಸಮಾರಂಭವು ಸೆ.30ರಂದು ಸಂಘದ ಸಭಾಂಗಣದಲ್ಲಿ ನೆರವೇರಿತು.


ನಿವೃತ್ತರನ್ನು ಸನ್ಮಾನಿಸಿ, ಗೌರವಿಸಿದ ಸಂಘದ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ ಮಾತನಾಡಿ, ನಮ್ಮ ಸಂಘದಲ್ಲಿ ಸುದೀರ್ಘ 37 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುವ ಶುಭರರವರು ವಿವಿಧ ಹುದ್ದೆಗಳನ್ನು ನಿರ್ವಹಿಸಿದವರು. ಕಳೆದ ಒಂದು ವರ್ಷದಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ದಕ್ಷ ಹಾಗೂ ಪ್ರಾಮಾಣಿಕವಾಗಿ ಗ್ರಾಹಕರಿಗೆ ನಗುಮೊಗದಿಂದ ಸೇವೆ ಸಲ್ಲಿಸಿದವರು. ಸಂಘದಲ್ಲಿ 37 ವರ್ಷಗಳ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.


ನಿರ್ದೇಶಕ ಪ್ರಕಾಶ್ಚಂದ್ರ ಆಳ್ವ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಹೆಸರುಗಳಿಸಿರುವ ಶುಭ ರವರು ಸಂಘದಿಂದ ಸಾಲಗಾರರಿಗೆ ನಿಗದಿತ ಸಮಯದಲ್ಲಿ ಸಾಲ ಮರು ಪಾವತಿಸುವ ಬಗ್ಗೆ ಮನವರಿಕೆ ಮಾಡಿ ಸಾಲ ವಸೂಲಾತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನೂತನ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳು ನಿವೃತ್ತರ ಮಾರ್ಗದರ್ಶನದಲ್ಲಿ ಮುನ್ನಡೆಯುವಂತೆ ತಿಳಿಸಿದರು.


ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲ ಮಾತನಾಡಿ, ಹಿರಿಯ ಅನುಭವಿಗಳು ನಿವೃತ್ತರಾಗುತ್ತಿರುವುದು ಸಂಘಕ್ಕೆ ತುಂಬಲಾರದ ನಷ್ಟ. ಅತೀ ಸಣ್ಣ ವಯಸ್ಸಿನಲ್ಲಿ ಸಂಘಕ್ಕೆ ನೇಮಕಗೊಂಡು ಸುದೀರ್ಘವಾಗಿ ಸೇವೆ ಸಲ್ಲಿಸುವ ಮೂಲಕ ಸಂಘಕ್ಕೆ ಉತ್ತಮ ಹೆಸರು ಬರುವಲ್ಲಿ ಇವರ ಸೇವೆ ಪೂರಕವಾಗಿದೆ. ಸಂಘದ ಅಭಿವೃದ್ಧಿಗೆ ನಿಮ್ಮ ಮಾರ್ಗದರ್ಶನ ನೀಡುವಂತೆ ವಿನಂತಿಸಿದರು.
ನಿರ್ದೇಶಕ ಪ್ರವೀಣಚಂದ್ರ ಆಳ್ವ ಮಾತನಾಡಿ, ಸಹಕಾರ ಸಂಘದಲ್ಲಿ ಪ್ರಥಮ ಮಹಿಳಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಶುಭ ಅವರು ಸಾಲಗಾರರು ಯಾವುದೇ ಒತ್ತಡವಿಲ್ಲದೇ ಸಾಲ ಮರುಪಾವತಿಸುವಲ್ಲಿ ಅವರ ಸೇವೆ ಪ್ರಮುಖವಾದುದು. ಇನ್ನು ಮುಂದೆಯೂ ಸಂಘಕ್ಕೆ ನಿಮ್ಮ ಸೇವೆ ಆವಶ್ಯಕವಾಗಿದ್ದು ಕನಿಷ್ಠ ಮೂರು ದಿನ ಸಂಘದಲ್ಲಿ ಸೇವೆ ನೀಡಿ ಸಹಕರಿಸುವಂತೆ ವಿನಂತಿಸಿದರು.


ನಿರ್ದೇಶಕ ಸುರೇಶ್, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ, ನಿವೃತ್ತ ಶಾಖಾ ವ್ಯವಸ್ಥಾಪಕ ವೆಂಕಟಕೃಷ್ಣ ಪಾಲೆಚ್ಚಾರು, ಡಿಸಿಸಿ ಬ್ಯಾಂಕ್‌ನ ವಲಯ ಪ್ರತಿನಿಧಿ ವಸಂತ ಎಸ್., ನಿಯೋಜಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿರ್ತನ್ ಮಾತನಾಡಿ, ನಿವೃತ್ತರಿಗೆ ಶುಭಹಾರೈಸಿದರು.
ನಿರ್ದೇಶಕರಾದ ನವೀನ್ ಕರ್ಕೇರ, ಸುಜಾತ ರಂಜನ್ ರೈ, ಪ್ರಮೀಳಾ ಚಂದ್ರಶೇಖರ ಗೌಡ, ನಾರಾಯಣ ಬಂಗಾರಡ್ಕ, ಸಂಘದ ಸಿಬ್ಬಂದಿಗಳಾದ ಪುಷ್ಪಾ ಎಂ., ಬಿಂದಿಯಾ, ವಿನೋದ್, ದಿನಗೂಲಿ ನೌಕರರಾದ ಪ್ರಶಾಂತ್, ರಮ್ಯ ಹಾಗೂ ನವೋದಯ ಪ್ರೇರಕಿ ಜಯಂತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here