ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಭಾಗ್ಯೋದಯ ಇಂಡಸ್ಟ್ರೀಸ್‌ನ ಮಾಲಕ ರವಿ ಜೋಗಿ ಎಂ ರವರ ಕೊಡುಗೆಯಲ್ಲಿ ಪುರುಷರಕಟ್ಟೆಯ ಜಂಕ್ಷನ್‌ನಲ್ಲಿರುವ ಬಿಎಂಎಸ್ ಆಟೋ ರಿಕ್ಷಾ ನಿಲ್ದಾಣದ ಬಳಿ ಅಳವಡಿಸಲಾದ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕವು ಸೆ.26 ಲೋಕಾರ್ಪಣೆಗೊಂಡಿತು.
ಸಂಘದ ಅಧ್ಯಕ್ಷ ನವೀನ್ ಡಿ, ಉಪಾಧ್ಯಕ್ಷೆ ಪವಿತ್ರಾ ಕೆ. ಪಿ. ನಿರ್ದೇಶಕ ವಿಶ್ವನಾಥ ಎಂ. ಸಂಘದ ಸಿಬ್ಬಂದಿಗಳು, ನರಿಮೊಗರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ಸದಸ್ಯ ನವೀನ್ ಕುಮಾರ್ ರೈ ಶಿಬರ, ಭಾಗ್ಯೋದಯ ಇಂಡಸ್ಟ್ರೀಸ್ ಮುಕ್ವೆ ಇದರ ಮಾಲಕ ರವಿ ಜೋಗಿ ಎಂ, ಬಿ.ಎಂ.ಎಸ್ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಶುದ್ಧ ನೀರಿನ ಘಟಕವನ್ನು ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಟ್ಯಾಂಕ್ ಸ್ಟ್ಯಾಂಡ್‌ನ್ನು ಭಾಗ್ಯೋದಯ ಇಂಡಸ್ಟ್ರೀಸ್‌ನ ಮಾಲಕ ರವಿ ಜೋಗಿ ಎಂ ರವರು ಕೊಡುಗೆಯಾಗಿ ನೀಡಿರುತ್ತಾರೆ.