ಪುತ್ತೂರು:ಬೊಳ್ವಾರು ಶ್ರೀ ದುರ್ಗಾ ಪರಮೇಶ್ವರಿ(ಉಳ್ಳಾಲ್ತಿ) ಮಲರಾಯ ಸಪರಿವಾರ ದೇವಸ್ಥಾನದಲ್ಲಿ ಶ್ರೀ ನವರಾತ್ರಿ ಉತ್ಸವದ ಪ್ರಯುಕ್ತ ದುರ್ಗಾಷ್ಠಮಿಯ ಪುಣ್ಯವಸರದಂದು ಹಿರಿಯ ಭಾಗವತರಾದ ಗೋವಿಂದ ನಾಯಕ್ ಪಾಲೆಚ್ಚಾರುರವರ ನೇತೃತ್ವದ ಶ್ರೀ ದುರ್ಗಾ ಉಳ್ಳಾಲ್ತಿ ಯಕ್ಷಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಧೀಶಕ್ತಿ ಮಹಿಳಾ ಯಕ್ಷಬಳಗ, ತೆಂಕಿಲ -ಪುತ್ತೂರು ತಂಡದಿಂದ ತಾಳಮದ್ದಳೆ, “ಪಾಂಡವ ಸ್ವರ್ಗಾರೋಹಣ” (ಶ್ರೀ ಶ್ರೀಧರ್ ಡಿ .ಎಸ್ ವಿರಚಿತ) ನಡೆಯಿತು.
ಹಿಮ್ಮೇಳದಲ್ಲಿ ಗೋವಿಂದ ನಾಯಕ್ ಪಾಲೆಚ್ಚಾರು, ಮಲ್ಲಿಕಾ ಶೆಟ್ಟಿ, ಭಾಗವತರಾಗಿ ಚೆಂಡೆ-ಮದ್ದಳೆಗಳಲ್ಲಿ ಮಾ| ಅದ್ವೈತ ಕೃಷ್ಣ ಮತ್ತು ಯಕ್ಷ ಕಲಾ ಪ್ರತಿಷ್ಠಾನದ ವಿದ್ಯಾರ್ಥಿಗಳು ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ (ಧರ್ಮರಾಯ), ಜಯಲಕ್ಷ್ಮಿ ವಿ ಭಟ್ (ಭೀಮ), ಶಾಲಿನಿ ಅರುಣ್ ಶೆಟ್ಟಿ (ಅರ್ಜುನ), ಗೀತಾ ಕೊಂಕೋಡಿ (ಕಲಿಪುರುಷ), ಪ್ರೇಮಾ ನೂರಿತ್ತಾಯ (ಯಮ), ಸ್ವಪ್ನಾ ಉದಯ್ (ದೇವೇಂದ್ರ), ಸುರೇಖಾ ಅಶೋಕ್ ರೈ(ವ್ಯಾಸ) ಅರ್ಥದಾರಿಗಳಾಗಿ ಭಾಗವಹಿಸಿದರು. ಶುಭಾ ಪಿ ಆಚಾರ್ಯ, ಜ್ಯೋತಿ ರಾವ್ ಸಹಕರಿಸಿದರು. ದೇವಳದ ಪವಿತ್ರ ಪಾಣಿ, ಬಾಲಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಕ್ಷ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ, ಪ್ರಸನ್ನ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.