ಕಡಬ: ಕೊಯಿಲ ಗ್ರಾಮದ ಏಣಿತ್ತಡ್ಕ(1) ಅಂಗನವಾಡಿ ಕೇಂದ್ರದಲ್ಲಿ ಗಾಂಧಿಜಯಂತಿ ಆಚರಣೆ ಹಾಗೂ ಪುಟಾಣಿಗಳಿಗೆ ಎಲ್ ಕೆ ಜಿ ಪುಸ್ತಕ ವಿತರಣೆ ನಡೆಯಿತು.
ಸಬಳೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶೇಖರ ಗೌಡ ಕೊಲ್ಯ ಪುಸ್ತಕ ವಿತರಿಸಿದರು. ಈ ಸಂದರ್ಭದಲ್ಲಿ ಪೋಷಕರಾದ ಧನಂಜಯ ಎರ್ಮಡ್ಕ, ದಿನೇಶ ಎರ್ಮಡ್ಕ, ಜಯಶ್ರಿ ಕೊಲ್ಯ, ಶ್ರುತಿ ಬುಡಲೂರು, ಜಯಶ್ರೀ ಬುಡಲೂರು, ಯದ್ವಿತ್ ಕೆ.ಪಿ ಉಪಸ್ಥಿತರಿದ್ದರು. ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು. ಅಂಗನವಾಡಿ ಕಾರ್ಯಕರ್ತೆ ಮೀನಾಕ್ಷಿ ಸಬಳೂರು ಸ್ವಾಗತಿಸಿ,ವಂದಿಸಿದರು. ಸಹಾಯಕಿ ಮೀನಾಕ್ಷಿ ಸಹಕರಿಸಿದರು.