ಒಳಮೊಗ್ರು ಗ್ರಾಪಂನಿಂದ ಕುಂಬ್ರ ಜಂಕ್ಷನ್‌ನಲ್ಲಿ ಬಾಟಲ್ ಬೂತ್ ಅಳವಡಿಕೆ

0

ಪುತ್ತೂರು: ನೀರು, ಜ್ಯೂಸ್ ಇತ್ಯಾದಿಗಳ ಬಾಟಿಲಿಗಳನ್ನು ಸಿಕ್ಕ-ಸಿಕ್ಕಲ್ಲಿ ಎಸೆಯುವ ಬದಲು ಅದನ್ನು ಸಂಗ್ರಹಿಸುವ ‘ಬಾಟಲ್ ಬೂತ್’ ಅನ್ನು ಒಳಮೊಗ್ರು ಗ್ರಾಮ ಪಂಚಾಯತ್ ವತಿಯಿಂದ ಕುಂಬ್ರ ಜಂಕ್ಷನ್‌ನಲ್ಲಿ ಅ.2ರಂದು ಅಳವಡಿಸಲಾಯಿತು.

ತಾಲೂಕು ಪಂಚಾಯತ್‌ನಿಂದ ಕೊಡುಗೆಯಾಗಿ ನೀಡಲ್ಪಟ್ಟ ಈ ಬಾಟಲ್ ಬೂತ್ ಅನ್ನು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿ, ಸಾರ್ವಜನಿಕರು ಉಪಯೋಗಿಸಿದ ನೀರಿನ ಬಾಟಲಿ, ಜ್ಯೂಸ್ ಬಾಟಲಿಗಳಾಗಿರಬಹುದು ಇದನ್ನು ಎಲ್ಲೆಂದರಲ್ಲಿ ಎಸೆಯದೆ ಈ ಬಾಟಲ್ ಬೂತ್‌ನೊಳಗೆ ಹಾಕುವ ಮೂಲಕ ಪ್ಲಾಸ್ಟಿಕ್ ಮುಕ್ತ ಪರಿಸರವನ್ನಾಗಿ ಮಾಡುವಂತೆ ಕೇಳಿಕೊಂಡರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಂತಿ, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಮಹೇಶ್ ರೈ ಕೇರಿ, ಶೀನಪ್ಪ ನಾಯ್ಕ ಮುಡಾಲ, ಚಿತ್ರಾ ಬಿ.ಸಿ, ಶಾರದಾ ಆಚಾರ್ಯ, ಸುಂದರಿ, ರೇಖಾ ಯತೀಶ್, ಅಂಗನವಾಡಿ ಶಿಕ್ಷಕಿ ಆಶಾಲತಾ ರೈ, ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ ಹಾಗೂ ಸದಸ್ಯರುಗಳು, ಸ್ವಚ್ಛತಾ ಸೇನಾನಿಗಳು, ಗ್ರಾಪಂ ಸಿಬ್ಬಂದಿ ಜಾನಕಿ, ಲೋಕನಾಥ್, ಸಾಮಾಜಿಕ ಕಾರ್ಯಕರ್ತ ರಾಜೇಶ್ ರೈ ಪರ್ಪುಂಜ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ಕೆ.ರವರು ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here