ಪುತ್ತೂರು: ಪಾಣಾಜೆಯಲ್ಲಿ ನಡೆದ ಶಾರದೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ವ್ಯಕ್ತಿಯೋರ್ವರು ಜನರ ನಡುವೆ ದ್ವೇಷ ಹುಟ್ಟುವ ರೀತಿಯಲ್ಲಿ ಮಾತನಾಡಿದರೆಂದು ಶಾಸಕ ಅಶೋಕ್ ರೈ ಅವರು ವೇದಿಕೆಯಲ್ಲೇ ಉತ್ತರ ನೀಡಿದ ಘಟನೆ ನಡೆದಿದೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕೇರಳದಲ್ಲಿ ನೇದ ಘಟನೆಯೊಂದರ ಬಗ್ಗೆ ಸಭೆಯಲ್ಲಿ ಮಾತನಾಡುತ್ತಿದ್ದರು. ಇದು ಶಾಸಕರ ಅಸಮಾಧಾನಕ್ಕೆ ಕಾರಣವಾಯಿತು. ಈ ಬಗ್ಗೆ ಮಾತನಾಡಿದ ಶಾಸಕರು ದೇವರ ಕಾರ್ಯಕ್ರಮ ನಡೆಯುವ ದೇವಸ್ಥಾನ ಮತ್ತು ಶಾಲೆಯಲ್ಲಿ ಎಂದೂ ರಾಜಕೀಯ ಭಾಷಣ ಮಾಡಬಾರದು ಇದಕ್ಕೆ ನನ್ನ ಬದ್ದ ವಿರೋಧವಿದೆ. ದ್ವೇಷ ಭಾಷಣ ಮಾಡಿದ ಮಾತ್ರಕ್ಕೆ ಯಾವುದೇ ಧರ್ಮ ಉದ್ದಾರ ಆಗಲು ಸಾಧ್ಯವಿಲ್ಲ. ನಮ್ಮಮಕ್ಕಳಿಗೆ ಹಿಂದೂ ಧರ್ಮದ ಸಂಸ್ಕಾರ,ಸಂಸ್ಜೃತಿಯನ್ನು ಕಲಿಸುವ ಕೆಲಸ ನಮ್ಮಿಂದಾಗಬೇಕು. ಹಿಂದುತ್ವದ ಬಗ್ಗೆ ವೇದಿಕೆಯಲ್ಲಿ ವಿಷಕಾರಿ ಸ್ಥಳೀಯವಾಗಿ ವಿಷ ಬೀಜ ಬಿತ್ತಿ ಭಾಷಣ ಮಾಡಿದವ ಮನೆಯಲ್ಲಿ ಸೇಫ್ ಆಗಿರ್ತಾನೆ. ಭಾಷಣ ಕೇಳಿ ಇಲ್ಲಿ ಹೊಎರದಾಡಿಕೊಂಡರೆ ರಸ್ತೆಯಲ್ಲಿ ಹೊಡೆದಾಡಿ ಜೈಲು ಸೇರುವುದು ಯಾರದೋ ಬಡವರಮಕ್ಕಳು ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಹಿಂದುತ್ವ ಏನು ಎಂಬುದು ಈಗಿನ ಜನರಿಗೆ ಗೊತ್ತಿದೆ ಅದನ್ನು ದ್ವೇಷ ಕಾರಿ ಹೇಳಬೇಕಾಗಿಲ್ಲ ಎಂದು ಹೇಳಿದರು.
ದೇವಸ್ಥಾನದ ದಾಖಲೆ ಸರಿ ಮಾಡಿದ್ದಾರ?
ವೇದಿಕೆ ಸಿಕ್ಕಾಗಲೆಲ್ಲ ದ್ವೇಷ ಕಾರುವವರು ಇಲ್ಲಿ ಅಧಿಜಾರದಲ್ಲಿದ್ದಾಗ ಹಿಂದುತ್ವಕ್ಕೆ ಏನು ಕೊಡುಗೆ ನೀಡಿದ್ದಾರೆ? ಸರಕಾರಿ ಜಾಗದಲ್ಲಿರುವ ದೇವಸ್ಥಾನ,ದೈವಸ್ಥಾನ,ಕಟ್ಟೆಯ ಜಾಗವನ್ನು ದೇವಸ್ಥಾನದ ಹೆಸರಿಗೆಮಾಡಿದ್ದಾರ? ಅದು ಇವರಿಂದ ಸಾಧ್ಯವಾಗಿದೆಯಾ? ಭಾಷಣ ಮಾಡುವುದು ಶಾಲು ಹಾಕಿಸುವುದು, ಬೊಂಡ ಕುಡಿಯುವುದು ಅಷ್ಟೆ ಇವರದ್ದು ಎಂದು ಆಕ್ರೋಶಭರಿತರಾಗಿ ನುಡಿದರು.
ನಾನು ಶಾಸಕತ್ವದ ಅವಧಿಯಲ್ಲೇ ಸರಕಾರಿ ಜಾಗದಲ್ಲಿರುವ ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳ ಸಕ್ರಮ ಮಾಡಿಯೇ ಮಾಡುತ್ತೇನೆ. ನಮ್ಮದುನಕಲಿ ಹಿಂದುತ್ವವಲ್ಲ, ಭಾಷಣದ ಹಿಂದುತ್ವ ಅಲ್ಲ ನಾವು ಹೇಳಿದನ್ನು ಮಾಡಿ ತೋರಿಸುತ್ತೇವೆಎಂದುಶಾಸಕರು ಹೇಳಿದರು.
ಚಪ್ಪಾಳೆ ಮೂಲಕ ಬೆಂಬಲ
ಶಾಸಕರ ಭಾಷಣಕ್ಕೆ ಸಭಿಕರು ಚಪ್ಪಾಳೆ ಕರತಾಡನದ ಮೂಲಕ ಬೆಂಬಲ ವ್ಯಕ್ತವಾಯಿತು.