ಹುಲಿವೇಷದಲ್ಲಿಯೇ ಟ್ಯಾಂಕ್ ಲೋಕಾರ್ಪಣೆಗೊಳಿಸಿದ ದಿ.ಪಿಲಿರಾಧಣ್ಣರ ಮಗ ಅಭಿಷೇಕ್
ಪುತ್ತೂರು: ಹುಲಿ ಕುಣಿತದಲ್ಲಿ ತನ್ನದೆ ಆದ ಬ್ರ್ಯಾಂಡ್ ಕ್ರಿಯೆಟ್ ಮಾಡಿದ ದಿ.ಪಿಲಿರಾಧಣ್ಣ ಇವರ ಸ್ಮರಣಾರ್ಥವಾಗಿ ಪಡೀಲ್ ರಿಕ್ಷಾ ನಿಲ್ಧಾಣದ ಹತ್ತಿರ ನೂತನ ಶುದ್ದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು ಇದರ ಉದ್ಘಾಟನಾ ಕಾರ್ಯಕ್ರಮ ಅ.2ರಂದು ನಡೆಯಿತು. ಟೀಮ್ ಪಿಲಿ ರಾಧಣ್ಣ ಇದರ 49ನೇ ವರ್ಷದ ಶಾರದಾ ಹುಲಿಯ ಮೆರವಣಿಗೆ ಪಡೀಲ್‌ಗೆ ಆಗಮಿಸಿದ ಸಂದರ್ಭದಲ್ಲಿ ಪಿಲಿರಾಧಣ್ಣ(ರಾಧಕೃಷ್ಣ ಶೆಟ್ಟಿ)ಯವರ ಮಗ ಅಭಿಷೇಕ್ ಇವರು ಹುಲಿವೇಷದಲ್ಲಿಯೇ ಶುದ್ದ ಕುಡಿಯುವ ನೀರಿನ ಟ್ಯಾಂಕ್‌ನ್ನ ಲೋಕಾರ್ಪಣೆಗೊಳಿಸಿದರು.

ಪಿಲಿರಾಧಣ್ಣ ಇವರ ಆತ್ಮೀಯ ಸ್ನೇಹಿತರಾಗಿರುವ ಸಮೀರ್ ಪಡೀಲ್ ಇವರು ಪಿಲಿರಾಧಣ್ಣ ಸ್ಮರಣಾರ್ಥವಾಗಿ ಈ ನೂತನ ಶುದ್ದ ಕುಡಿಯುವ ನೀರಿನ ಟ್ಯಾಂಕ್‌ನ್ನ ನಿರ್ಮಿಸಿ, ಜನರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಸಮೀರ್ ಅವರು ಪ್ರತಿವರ್ಷ ನವರಾತ್ರಿ ಸಂದರ್ಭ, ಪಡೀಲ್‌ನಲ್ಲಿ ವಿಶೇಷ ಹುಲಿಕುಣಿತ ಪ್ರದರ್ಶನ ಆಯೋಜಿಸಿ ಪಿಲಿರಾಧಣ್ಣ ತಂಡಕ್ಕೆ ಪ್ರೋತ್ಸಾಹವನ್ನ ನೀಡುತ್ತಿದ್ದಾರೆ. ಇದೀಗ ಅಣ್ಣನ ಸ್ಧಾನದಲ್ಲಿದ್ದ ಪಿಲಿರಾಧಣ್ಣನನ್ನ ಕಳೆದುಕೊಂಡ ನೋವಿನ ನಡುವೆ ಇವರ ನೆನಪನ್ನ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ನೂತನ ಶುದ್ದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ, ಜಾತಿ ಧರ್ಮ ಭೇದ ಮರೆತು ಗೆಳೆಯರು ಅಂದರೆ ಹೀಗಿರಬೇಕು ಎಂದು ಇತರರಿಗೆ ತೋರಿಸಿಕೊಟ್ಟಿದ್ದಾರೆ.

ನೂತನ ಶುದ್ದ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ ಸಂದರ್ಭದಲ್ಲಿ ಸಮೀರ್ ಪಡೀಲ್, ಅವರ ಪತ್ನಿ ಹಾಗೂ ಮಕ್ಕಳು, ಸುಂದರ ಪೂಜಾರಿ ಬಡಾವು, ಸುಧಾಕರ್ ನಾÊಕ್ ಕಂಪ, ಚಂದ್ರಶೇಖರ್ ಪಾಟಾಳಿ, ಪ್ರವೀಣ್ ನಾೖಕ್ ಕೆಮ್ಮಾಯಿ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಆನೆಮಜಲು, ಪ್ರಸನ್ನ ಕುಮಾರ್ ಕಲ್ಲೇಗ, ವಾಸು ನಾಯ್ಕ್, ಮೋಹನ್ ಶೆಟ್ಟಿ ಪಡೀಲ್, ನಾರಾಯಣ ನಾಯ್ಕ್ ಪಡೀಲ್, ಶಮುನ್ ಪರ್ಲಡ್ಕ, ವನೀಶ್ ಬನ್ನೂರು, ನವೀನ್ ನಾೖಕ್ ಬೆದ್ರಾಳ, ಶಿವ ಪಡೀಲ್, ದಿಲೀಪ್ ಕೆಮ್ಮಾಯಿ, ಚೆನ್ನಪ್ಪ ಗೌಡ ಗೆಣಸಿನಕುಮೇರು, ಸೇಸಪ್ಪ ಪೂಜಾರಿ ಬನ್ನೂರು, ಮೋನಪ್ಪ ಪೂಜಾರಿ ಪಡೀಲ್, ರಾಮ್ ಜಿಡೆಕಲ್ಲಿ, ಪ್ರಜ್ವಲ್ ರೈ ಬನ್ನೂರು, ಹಿಬ್ರಾಹಿಂ ಜೆ.ಕೆ, ಬಾಲಕೃಷ್ಣ ನಾಯ್ಕ ಪಡೀಲ್, ಅಭಿಜಿತ್ ಬನ್ನೂರು, ಜಗ್ಗು ರೋಟರಿಪುರ ಹಾಗೂ ಅನೇಕರು ಉಪಸ್ಧಿತರಿದ್ದರು.
ನೂತನ ಶುದ್ದ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆಯ ಬಳಿಕ, ಅನ್ನಸಂತರ್ಪಣೆ ನಡೆಯಿತು, ಪಿಲಿರಾಧಣ್ಣನ ಗರಡಿಯಲ್ಲಿ ಪಳಗಿದ ಸುಮಾರು 66 ಹುಲಿಗಳ ಅಬ್ಬರದ ಪ್ರದರ್ಶನ ನಡೆಯಿತು.