ಪೆರ್ನೆ: ರಾಜ್‌ ಫ್ಯೂಯೆಲ್ಸ್‌ ಶುಭಾರಂಭ

0

ಉಪ್ಪಿನಂಗಡಿ : ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಮೈರಕಟ್ಟೆ ಎಂಬಲ್ಲಿ ರಾ ಹೆ 75 ರ ಪಾರ್ಶ್ವದಲ್ಲಿ ನಿರ್ಮಾಣಗೊಂಡಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಮಳಿಗೆಯಾದ ರಾಜ್ ಫ್ಯೂಯೆಲ್ಸ್‌ ಅ. 1ರಂದು ಶುಭಾರಂಭಗೊಂಡಿತು. ತನ್ಮೂಲಕ ಡಿ ಕೃಷ್ಣರಾಜ್ ಸಾರಥ್ಯದ ರಾಜ್ ಗ್ರೂಪ್ ಸಮೂಹ ಸಂಸ್ಥೆಯಲ್ಲಿ ಮತ್ತೊಂದು ಉದ್ಯಮ ಸೇರ್ಪಡೆಗೊಂಡಂತಾಯಿತು.


ಸಂಸ್ಥೆಯ ಡೀಸಿಲ್ ವಿತರಣಾ ಘಟಕವನ್ನು ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ರವರು, ದೇಶದ ಅಭಿವೃದ್ಧಿಯಲ್ಲಿ ಉದ್ಯಮ ಕ್ಷೇತ್ರದ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ರಾಜ್ ಗ್ರೂಪ್ಸ್ ಸಮೂಹ ಸಂಸ್ಥೆಗಳ ಮಾಲಕ ಯುವ ಉದ್ಯಮಿ ಡಿ ಕೃಷ್ಣರಾಜ್ ರವರ ಪ್ರಯತ್ನ ಯಶಸ್ಸು ಸಾಧಿಸಲಿ ಎಂದರು.

ಸಂಸ್ಥೆಯ ಪೆಟ್ರೋಲ್ ವಿತರಣಾ ಘಟಕವನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಉತ್ತಮ ಸೇವಾಮನೋಭಾವದೊಂದಿಗೆ ಉದ್ಯಮವನ್ನು ನಡೆಸುತ್ತಾ ಯಶಸ್ಸಿನ ಪಥದಲ್ಲಿ ಸಾಗುತ್ತಿರುವ ರಾಜ್ ಗ್ರೂಪ್ಸ್ ಸಂಸ್ಥೆಯ ಈ ರಾಜ್ ಫ್ಯೂಯೆಲ್ಸ್‌ ಕೂಡಾ ಜನಾಕರ್ಷಣೆಯ ಕೇಂದ್ರವಾಗಿ ಮೂಡಿಬರಲಿ ಎಂದರು.


ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರದ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಹೆಚ್‌ಪಿಸಿಎಲ್ ಇದರ ಡಿಜಿಎಂ ನವೀನ್ ಕುಮಾರ್, ಮಾರಾಟ ವಿಭಾಗದ ಅಽಕಾರಿ ಇಶಿತಾ ಗರ್ಗ್ ,ಶ್ರೀವತ್ಸವ್ , ಪ್ರಮುಖರಾದ ರವೀಂದ್ರ ಶೆಟ್ಟಿ ನುಳಿಯಾಲ್, ಉಮಾನಾಥ ಶೆಟ್ಟಿ, ಮುರಳೀಧರ್ ರೈ, ನಝೀರ್ ಮಠ, ಶ್ಯಾಮ್ ಸುದರ್ಶನ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ವಜ್ರ ಕುಮಾರ್ ಜೈನ್ , ಮುರಳೀಕೃಷ್ಣ ಹಸಂತಡ್ಕ, ಈಶ್ವರ ಭಟ್ ಪಂಜಿಗುಡ್ಡೆ, ಕೆ ರಾಧಾಕೃಷ್ಣ ನಾಕ್, ಸುದರ್ಶನ್ ಎಂ , ವಿಕ್ರಂ ಕೊಡಿಂಬಾಡಿ, ಮಹೇಂದ್ರ ವರ್ಮ, ಡಾ. ಕೆ ಜಿ ಭಟ್, ಡಾ. ಎಂ ಎನ್ ಭಟ್, ಪ್ರದೀಪ್ ಶೆಟ್ಟಿ , ಪುರುಷೋತ್ತಮ ಶೆಟ್ಟಿ , ರಾಧಕೃಷ್ಣ ಕೂವೆಚ್ಚಾರ್, ರಮೇಶ್ ಕಜೆ, ಕಾಂಚನಾ ಶಾಂತಾರಾಮ ಭಟ್, ಎಂ ಜಿ ಭಟ್ ಮಧುವನ, ಅರವಿಂದ ಭಂಡಾರಿ, ಧನ್ಯ ಕುಮಾರ್ ರೈ, ಮಿತ್ರದಾಸ್ ರೈ, ಚಂದ್ರಹಾಸ ಶೆಟ್ಟಿ, ಯು ರಾಮ , ವಿದ್ಯಾಧರ ಜೈನ್ , ಕೃಷ್ಣ ರಾವ್ ಅರ್ತಿಲ, ಯು ಜಿ ರಾಧಾ, ರೂಪೇಶ್ ರೈ ಅಲಿಮಾರ, ತಾಳ್ತಜೆ ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.


ಕೀರ್ತಿ ಕಾರ್ಯಕ್ರಮ ನಿರೂಪಿಸಿದರು. ರಾಜ್ ಗ್ರೂಪ್ಸ್ ಮುಖ್ಯಸ್ಥ ಡಿ ಕೃಷ್ಣರಾಜ್, ವೈಶಾಲಿ ಕೃಷ್ಣರಾಜ್, ವೈಷ್ಣವಿ ಮತ್ತು ವೈಶಿಷ್ಠ್ಯ ರವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

LEAVE A REPLY

Please enter your comment!
Please enter your name here