ಇನ್ನರ್ ವೀಲ್ ಕ್ಲಬ್ ವತಿಯಿಂದ ತೆಂಕಿಲ ನರೇಂದ್ರ ಪದವಿಪೂರ್ವ ಕಾಲೇಜಿಗೆ ತರಕಾರಿ, ಹಣ್ಣಿನ ಗಿಡ ವಿತರಣೆ

0

ಪುತ್ತೂರು: ಇನ್ನರ್ ವೀಲ್ ಕ್ಲಬ್ ವತಿಯಿಂದ ನರೇಂದ್ರ ಪದವಿಪೂರ್ವ ಕಾಲೇಜು ತೆಂಕಿಲ ಪುತ್ತೂರು ಹಾಗೂ ಪರ್ಲಡ್ಕ ಅಂಗನವಾಡಿಗೆ ತರಕಾರಿ ಹಾಗೂ ಹಣ್ಣಿನ ಗಿಡಗಳನ್ನು ನೀಡಿದರು.

ನರೇಂದ್ರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೀಡುವ ಕಾರ್ಯಕ್ರಮ ಇನ್ನರ್ ವೀಲ್ ಕ್ಲಬ್ ವತಿಯಿಂದ ನಡೆಯಿತು.

ನರೇಂದ್ರ ಕಾಲೇಜ್ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಇದರ ಅಧ್ಯಕ್ಷ ಉಮೇಶ್ ನಾಯಕ್, ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ಪ್ರಸಾದ್ ಶಾನುಭೋಗ್ ಅವರಿಗೆ ಗಿಡಗಳನ್ನು ಹಸ್ತಾಂತರಿಸಲಾಯಿತು.

ಅಂಗನವಾಡಿ ಮಕ್ಕಳಿಗೆ ಊಟಕ್ಕೆ ತರಕಾರಿ ಬೆಳೆಯುವ ಯೋಜನೆಗೆ ಬೆಂಬಲವಾಗಿ ಪರ್ಲಡ್ಕ ಅಂಗನವಾಡಿಗೆ ತರಕಾರಿ ಗಿಡಗಳು, ಹಣ್ಣಿನ ಗಿಡಗಳು,ವಿವಿಧ ತರಕಾರಿ ಬೀಜಗಳು ಹಾಗೂ ಸಸಿಗಳನ್ನು ಕೌನ್ಸಿಲರ್ ವಿದ್ಯಾ ಗೌರಿ ಅವರ ಮೂಲಕ ಹಸ್ತಾಂತರಿಸಲಾಯಿತು.

ಇನ್ನರ್ ವೀಲ್ ಅಧ್ಯಕ್ಷೆ ರೂಪಲೇಖ, ಕಾರ್ಯದರ್ಶಿ ಸಂಧ್ಯಾ ಸಾಯ ಹಾಗೂ ಇನ್ನರ್ ವೀಲ್ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here