ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇದರ ವತಿಯಿಂದ ಅ.20ರಂದು ಪುತ್ತೂರು-ಕೊಂಬೆಟ್ಟುವಿನ ತಾಲೂಕು ಕ್ರೀಡಾಂಗಣದಲ್ಲಿ ದೀಪಾವಳಿಯ ಪ್ರಯುಕ್ತ ನಡೆಯಲಿರುವ ವಸ್ತ್ರ ವಿತರಣಾ ಮತ್ತು ಟ್ರಸ್ಟ್ ನ ಫಲಾನುಭವಿಗಳ ವಾರ್ಷಿಕ ಸಮಾವೇಶ “ಅಶೋಕ ಜನ-ಮನ 2025” ಇದರ ಪ್ರಚಾರ ಸಭೆಯು ಕೇಪುಗ್ರಾಮ, ಅಳಕೆ ಮಜಲು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಿತು.

ಕೇಪುಗ್ರಾಮದಲ್ಲಿ ನಡೆದ ಸಭೆಯಲ್ಲಿ ಟ್ರಸ್ಟಿನ ಪದಾಧಿಕಾರಿಗಳಾದ ಜಯಪ್ರಕಾಶ್ ಬದಿನಾರು, ರಾಮನ ಪಿಲ್ಲಿಂಜ, ಚಂದ್ರಶೇಖರ, ಪ್ರವೀಣ ಸಣ್ಣಗುತು, ಎಲ್ಯಣ್ಣ ಪೂಜಾರಿ ಮತ್ತು ಬಾಲಕೃಷ್ಣ ಬೆಂಗ್ರೋಡಿ, ಅಬ್ದುಲ್ ಕರೀಮ್, ಸುಧಾಕರ್ ಪೂಜಾರಿ ಕೇಶವ ನಾಯ್ಕ್, ಪ್ರೇಮಲತಾ ಕಟ್ಟೆ, ಪ್ರದೀಪ್ ನೀರ್ಕಜೆ, ಬಾಬು ನಾಯ್ಕ ತೀರ್ಥಬನ, ಸುಂದರ ಸಾರಡ್ಕ, ಕೋಟಿ ಪೂಜಾರಿ, ಬಾಲಕೃಷ್ಣ ಕೇಪು, ವಿಶ್ವನಾಥ ಕೇಪು ಮತ್ತು ನೀರ್ಕಜೆ ಮಹಿಳಾ ಮಂಡಲದ ಸದಸ್ಯರು ಮತ್ತು ನಾಗರಿಕರು ಉಪಸ್ಥಿತರಿದ್ದರು.
ಅಳಕೆ ಮಜಲು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಯಪ್ರಕಾಶ್ ಬದಿನಾರ್, ರಾಜರಾಮ್ ಶೆಟ್ಟಿ ಕೋಲ್ಪೆ, ಭಜನಾ ಮಂದಿರದ ಅಧ್ಯಕ್ಷರಾದ ಕೃಷ್ಣ ಕಿಶೋರ್ ಭಟ್ ಸಹಿತ ಹಲವು ಪ್ರಮುಖರು, ನಾಗರಿಕರು ಉಪಸ್ಥಿತರಿದ್ದರು.