ಬಡಗನ್ನೂರು : ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಇದರ ವತಿಯಿಂದ ಧಾರವಾಡದಲ್ಲಿ ನಡೆದ ಪ್ರೌಢಶಾಲಾ ವಿಭಾಗದ 17ರ ವಯೋಮಿತಿಯ ರಾಜ್ಯಮಟ್ಟದ ಭಾರ ಎತ್ತುವ (ವೇಯ್ಟ್ ಲಿಫ್ಟಿಂಗ್) ಸ್ಪರ್ಧೆಯಲ್ಲಿ 78 ಕೆಜಿಯ ಭಾರ ಎತ್ತುವುದರ ಮೂಲಕ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ವೈಷ್ಣವಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ದೖೆಹಿಕ ಶಿಕ್ಷಣ ಶಿಕ್ಷಕ ಸುಖೇಶ್ ರೖೆ ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿ- ನಿವೃತ ಅಂಚೆ ಇಲಾಖೆ ನೌಕರ-ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಕೃಷ್ಣಪ್ಪ ಗೌಡ ಡೆಂಬಾಳೆ ತರಬೇತಿ ನೀಡಿರುತ್ತಾರೆ. ರಾಷ್ಟ್ರಮಟ್ಟದ ಸ್ಪರ್ಧೆಯು ಕಾನ್ಪುರದಲ್ಲಿ ನಡೆಯಲ್ಲಿದೆ.
ಇವರು ನೆರೆಯ ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ಐತ್ತನಡ್ಕ ವಸಂತ ರೈ ಮತ್ತು ಸುರೇಖ ದಂಪತಿಗಳ ಪುತ್ರಿ.