ಭಾರತ ಒಂದು ದೇಶವಾಗಿ ಜಗತ್ತಿಗೆ ನಿಲ್ಲಲು ಮಾರ್ಕೆಟಿಂಗ್ ಮತ್ತು ಇನ್ನೋವೇಶನ್ ಅಗತ್ಯ- ಸ್ವಾಮಿ ವಿಗ್ಯಾನಾನಂದ್ ಜಿ

0

ಪುತ್ತೂರು: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಬೆಂಗಳೂರು ಶಾಖೆಯ ಅನಾವರಣ ಕಾರ್ಯಕ್ರಮವನ್ನು “ಹಿಂದೂ ಎಕನಾಮಿಕ್ ಫೋರಂ” ಇದರ ಜಾಗತಿಕ ಅಧ್ಯಕ್ಷ ಸ್ವಾಮಿ ವಿಗ್ಯಾನಾನಂದ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಭಾರತೀಯ ಕಂಪನಿಗಳು ಮಾರ್ಕೆಟಿಂಗ್ ಮತ್ತು ಇನ್ನೋವೇಶನ್ ಮೇಲೆ ಹೆಚ್ಚು ಹೊತ್ತು ಕೊಡಬೇಕು, ಹಾಗಾದಾಗ ನಮ್ಮ ವ್ಯವಹಾರಿಕ ಕಂಪನಿಗಳು ಇತರ ಏರೋಪ್ಯ ಮತ್ತು ಅಮೆರಿಕದಂತಹ ರಾಷ್ಟ್ರಗಳ ಜೊತೆಗೆ ಸಮಾನವಾಗಿ ನಿಲ್ಲಬಹುದು ಎಂದರು. ಮುಳಿಯ ಸಂಸ್ಥೆ ಏರ್ಪಡಿಸಿದ ಈ ಉದ್ಘಾಟನಾ ಕಾರ್ಯಕ್ರಮ ವಿಭಿನ್ನವಾಗಿದೆ,
81 ವರ್ಷಗಳ ಪರಂಪರೆ ಹಿನ್ನೆಲೆಯಲ್ಲಿ ಸಹಸ್ರ ಗ್ರಾಹಕ ಚಂದ್ರ ದರ್ಶನ ಎಂಬ ಪರಿಕಲ್ಪನೆ, ಸಾವಿರ ಗ್ರಾಹಕರನ್ನು ಒಂದೇ ದಿನ ಕರೆದು ಅವರಿಗೆ ಆಭರಣ ಮಾರಾಟ ಮಾಡಿ ವರ್ಲ್ಡ್ ರೆಕಾರ್ಡ್ ಮಾಡುವ ಕಲ್ಪನೆ ನಿಜವಾಗಿಯೂ ವಿಶೇಷ ಎಂದರು.

ಒಂದು ಬಟಾಟೆಯ ತುಂಡುಗಳು ಫಿಂಗರ್ ಚಿಪ್ಸಾಗಿ ಜಗತ್ತಿಗೆ ಹೆಸರುವಾಸಿ ಆಗುವಂತೆ ಮಾರ್ಕೆಟಿಂಗ್ ಮಾಡಿ ಮಾಡಿ ಜನ ಸಮೂಹದ ಮೆಚ್ಚುಗೆ ಪಡೆಯುತ್ತದೆ. ಅದರಂತೆಯೇ ನಮ್ಮೂರಿನ ಬಗೆ ಬಗೆಯ ರೊಟ್ಟಿಗಳು , ಇಡ್ಲಿ ಮತ್ತು ಮಸಾಲೆ ದೋಸೆ ಮುಂತಾದ ಆಹಾರಗಳು ಯಾಕೆ ಜಗತ್ತಿಗೆ ತಲುಪಿಸಬಾರದು!? ನಮ್ಮ ಆಹಾರ ಆರೋಗ್ಯಕ್ಕೂ ಯೋಗ್ಯ ಆದರೂ ನಾವು ಅದನ್ನು ಜಗತ್ತಿನ ಬ್ರಾಂಡ್ ಆಗಿ ತೆಗೆದುಕೊಂಡು ಇನ್ನೂ ಹೋಗಲಾಗುತ್ತಿಲ್ಲ.ಭಾರತದ ವ್ಯಾಪಾರಿ ಸಮೂಹ ಇದನ್ನು ಮಾಡಬೇಕು. ವ್ಯಾಪಾರ ತಪ್ಪಲ್ಲ. “ಸರಿಯಾದ ವ್ಯಾಪಾರವನ್ನು ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ರೀತಿಯಲ್ಲಿ ಜಗತ್ತಿಗೆ ತೆರೆಯುವುದು ಭಾರತದ ಈಗಿನ ಬಹುದೊಡ್ಡ ಅಗತ್ಯ” ಎಂದರು.

ಮುಳಿಯ ಚೇರ್ಮನ್ ಕೇಶವಪ್ರಸಾದ್ ಅವರು ಮಾತನಾಡಿ, “ಸ್ವಾಮಿಗಳ ಮಾತುಗಳನ್ನು ನಾವು ಹಿಂದಿನಿಂದಲೂ ಪಾಲಿಸುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಹೊಸತನವನ್ನು ತರಲು ಪ್ರಯತ್ನ ಪಡುತ್ತೇವೆ” ನಿಮ್ಮ ಆಶೀರ್ವಾದ ನಮ್ಮ ಸಂಸ್ಥೆಗೆ ಸದಾ ಇರಲಿ ಎಂದರು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ, ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here