ಪುತ್ತೂರು: ಪುತ್ತೂರು ಹಾಗೂ ಬಂಟ್ವಾಳ ಎಲ್.ಐ.ಸಿ ಶಾಖೆಯಲ್ಲಿ ಉದ್ಯೋಗದಲ್ಲಿರುವ ಹೆನ್ರಿ ಡಿ ಡಿ’ಸೋಜ (57ವ.) ರವರು ಅಸೌಖ್ಯದಿಂದ ಅ.11 ರಂದು ನಿಧನ ಹೊಂದಿದ್ದಾರೆ.
ಮೃತ ಹೆನ್ರಿ ಡಿ’ಸೋಜರವರು ಮೊದಲು ಸಾಮೆತ್ತಡ್ಕ ಸುದಾನ ಸ್ಪೋರ್ಟ್ಸ್ ಕ್ಲಬ್ ಬಳಿ ನಿವಾಸಿಯಾಗಿದ್ದು ಪ್ರಸ್ತುತ ಮೊಡಂಕಾಪು ಎಂಬಲ್ಲಿ ವಾಸವಾಗಿರುತ್ತಾರೆ. ಮೃತ ಹೆನ್ರಿ ಡಿ’ಸೋಜರವರು ಮೊದಲು ಪುತ್ತೂರು ಎಲ್.ಐ.ಸಿ ಶಾಖೆ ಪ್ರಸ್ತುತ ಬಂಟ್ವಾಳ ಎಲ್.ಐ.ಸಿ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ರೇಶ್ಮಾ ಆಗ್ನೇಸ್ ಡಿ’ಸೋಜ, ಪುತ್ರಿ ಸ್ತುತಿ ಡಿ’ಸೋಜ, ಪುತ್ರ ಸಂದೇಶ್ ಡಿ’ಸೋಜರವರನ್ನು ಅಗಲಿದ್ದಾರೆ.