ಪುತ್ತೂರು: ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ 2025- 2028 ನೇ ಸಾಲಿನ ಆಡಳಿತ ಸಮಿತಿ ಸದಸ್ಯರ ಪ್ರಥಮ ಸಭೆ ಸಂಘದ ಅಧ್ಯಕ್ಷರಾದ ಪಿ. ಬಿ. ಸುಧಾಕರ್ ರೈ ಯವರ ಅಧ್ಯಕ್ಷತೆಯಲ್ಲಿ ಅರಂಬೂರಿನ ಹೋಟೆಲ್ ರಸಪಾಕ ಗ್ರಾಂಡ್ ನಲ್ಲಿ ನಡೆಯಿತು.
2025- 2028 ನೇ ಸಾಲಿನ ಪದಾಧಿಕಾರಿಗಳನ್ನು ಸರ್ವನುಮತದಿಂದ ಆರಿಸಲಾಯಿತು.ಗೌರವಾಧ್ಯಕ್ಷರಾಗಿ ನೆಟ್ ಕಾಂ ಇದರ ಪಿ. ಬಿ. ಸುಧಾಕರ್ ರೈ, ಅಧ್ಯಕ್ಷರಾಗಿ ಜನತಾ ಗ್ರೂಪ್ಸ್ ನ ಅಬ್ದುಲ್ ಹಮೀದ್ ,ಪ್ರದಾನ ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಭಗವತಿ,ಖಜಾಂಚಿ ಕರ್ನಾಟಕ ಪ್ಲೈವುಡ್ಸ್ ಇದರ ಹೇಮಂತ್ ಕುಮಾರ್ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಸಿಎ ಗಣೇಶ್ ಭಟ್ ಪ್ರಭಾಕರನ್ ನಾಯರ್, ಮಂಜುನಾಥ್ ರೈ, ಅದಂ ಕಮ್ಮಾಡಿ, ಡಿ. ಎಸ್. ಗಿರೀಶ್ ಆಯ್ಕೆಯಾದರು.ಜತೆ ಕಾರ್ಯದರ್ಶಿಯಾಗಿ
ಜಗನ್ನಾಥ ರೈ ಪಿ,ಅಬ್ದುಲ್ ರೆಹಮಾನ್ ಆಯ್ಕೆಯಾದರು.
ನಿರ್ದೇಶಕರು ಗಳಾಗಿ ಎಂ. ಸುಂದರೇಶ್ ಭಟ್, ಎಂ ಸುಂದರ ರಾವ್, ಶ್ಯಾಮ್ ಪ್ರಸಾದ್ ಎ. ಡಿ, ಅಬ್ದುಲ್ಲ ಕಟ್ಟೆಕ್ಕಾರ್ಸ್, ಸಾಂಗ್ ಸಿಂಗ್, ಅಬ್ದುಲ್ ಮಜೀದ್, ಇಬ್ರಾಹಿಂ ಕದಿ ಕಡ್ಕ, ಕಸ್ತೂರಿ ಶಂಕರ್, ಪ್ರಭಾಕರ ಬಿ. ಪಿ. , ವಿನಯ ಕುಮಾರ್ ಕಂದಡ್ಕ ಆಯ್ಕೆಯಾದರು.
ಅಧ್ಯಕ್ಷತೆ ವಹಿಸಿದ್ದ ಪಿ. ಬಿ. ಸುಧಾಕರ್ ರೈ ಯವರು ಮಾತನಾಡಿ, ಸುಧೀರ್ಘ 14 ವರ್ಷದ ಅವಧಿಗೆ ವರ್ತಕರ ಸಂಘದ ಉಪಾಧ್ಯಕ್ಷನಾಗಿ ಪ್ರಧಾನ ಕಾರ್ಯದರ್ಶಿಯಾಗಿ,ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಧನ್ಯವಾದಗಳು, ನನ್ನ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಸಂಘಕ್ಕೆ ನಿವೇಶನ ಮಾಡಿ ರೂ 60 ಲಕ್ಷ ವೆಚ್ಚ ದಲ್ಲಿ ಸುಸಜ್ಜಿತ ಕಟ್ಟಡ, ಭೋಜನ ಹಾಲ್ ನಿರ್ಮಾಣ ಸಾಧ್ಯವಾಗಿದೆ, ಸಂಘಕ್ಕೆ 400 ಅಜೀವ ಸದಸ್ಯರನ್ನು ಸೇರ್ಪಡೆ ಗೊಳಿಸಿರುತ್ತೇನೆ, ಬಹುತೇಕ ಎಲ್ಲಾ ಸಾರ್ವಜನಿಕ, ಇಲಾಖೆಯ ಸಭೆಗಳಲ್ಲೂ ಭಾಗವಹಿಸಿ ವರ್ತಕರ ಪರ ಧ್ವನಿ ಎತ್ತಿರುತ್ತೇನೆ, ಮುಂದೆಯೂ ಎಲ್ಲರೂ ಸದಸ್ಯರಾಗಿ ಸಂಘ ವನ್ನು ಬಲಪಡಿಸಬೇಕಾಗಿದೆ ಎಂದರು. ಕೊನೆಯಲ್ಲಿ ವಂದಿಸಿದರು