ಜೆಸಿಐ ಪುತ್ತೂರು ಘಟಕಕ್ಕೆ ವಲಯಾಧ್ಯಕ್ಷರ ಅಧಿಕೃತ ಭೇಟಿ

0

ಪುತ್ತೂರು: ಪ್ರತಿಷ್ಠಿತ ಅಂತರಾಷ್ಟ್ರೀಯ ತರಬೇತಿ ಸಂಸ್ಥೆ JCI ಇಂಡಿಯಾದ ವಲಯ 15ರ ಅತೀ ದೊಡ್ಡ ಘಟಕ ಹಾಗೂ 53 ವರ್ಷಗಳ ಇತಿಹಾಸವಿರುವ JCI ಪುತ್ತೂರು ಘಟಕಕ್ಕೆ ಅ.9ರ ಗುರುವಾರದಂದು ವಲಯ 15ರ ವಲಯಾಧ್ಯಕ್ಷರಾದ ಅಭಿಲಾಶ್ ಬಿ ಎ ರವರು ಅಧಿಕೃತವಾಗಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಘಟಕದ ಪರವಾಗಿ ಅಧ್ಯಕ್ಷರಾದ ಭಾಗ್ಯೇಶ್ ರೈ ರವರು ವಲಯಾಧ್ಯಕ್ಷರನ್ನು ಸನ್ಮಾನಿಸಿದರು.

2 ಸರಕಾರಿ ಕಾಲೇಜಿಗೆ ಆಲ್ಮೆರಾ ಕೊಡುಗೆ
ವಲಯಾಧ್ಯಕ್ಷರ ಅಧಿಕೃತ ಭೇಟಿಯ ಸಂದರ್ಭದಲ್ಲಿ KPS ಕೆಯ್ಯೂರು ಮತ್ತು ಪ್ರಥಮ ದರ್ಜೆ ಕಾಲೇಜು ಜಿಡೇಕಲ್ಲು ಪುತ್ತೂರು ಇಲ್ಲಿಗೆ 2 ಆಲ್ಮೆರಾಗಳನ್ನು ಕೊಡುಗೆಯಾಗಿ ನೀಡಲಾಯಿತು. ಅಧ್ಯಕ್ಷರ ಈ ಸೇವಾ ಕಾರ್ಯವನ್ನು ವಲಯಾಧ್ಯಕ್ಷರು ಶ್ಲಾಘಿಸಿದರು. ಈ ವರ್ಷ ಪುತ್ತೂರು ಘಟಕದ ವತಿಯಿಂದ ನಡೆಸಲಾದ ಅತ್ಯುತ್ತಮ ಕೆಲಸ ಕಾರ್ಯಗಳನ್ನು ನೆನಪಿಸಿಕೊಂಡ ವಲಯಾಧ್ಯಕ್ಷರು, ವಲಯದಲ್ಲೇ ಅತ್ಯಂತ ಅತ್ಯುತ್ತಮ ಘಟಕವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಪುತ್ತೂರು ಘಟಕದ ಅಧ್ಯಕ್ಷ ಭಾಗ್ಯೇಶ್ ರೈ ರವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಜೆಸಿಐ ಕುಟುಂಬ ಸಮ್ಮಿಲನ ನಡೆಯಿತು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೂರ್ವಾಧ್ಯಕ್ಷರುಗಳಾದ ಮುರಳಿ ಶ್ಯಾಮ್, ವಿಶ್ವ ಪ್ರಸಾದ್ ಸೇಡಿಯಾಪು, ಜಗನ್ನಾಥ ರೈ, ಶರತ್ ಕುಮಾರ್ ರೈ, ವಸಂತ ಜಾಲಾಡಿ, ಪುರುಷೋತ್ತಮ ಶೆಟ್ಟಿ, ಗೌತಮ್ ರೈ, ಶಶಿರಾಜ್ ರೈ, ರವಿ ಮುಂಗ್ಲಿಮನೆ, ವಿಜಯ್ ಕುಮಾರ್ ಮೊಳೆಯಾರ್, ಸುಹಾಸ್ ಮರಿಕೆ, ಉಮೇಶ್ ಶೆಟ್ಟಿ ಬಿ, ಸೂರಪ್ಪ ಎ, ದಾಮೋದರ ಪಾಟಾಳಿ, ಸ್ವಾತಿ ಜೆ ರೈರವರನ್ನು ಅಧ್ಯಕ್ಷ ಭಾಗ್ಯೇಶ್ ರೈ ರವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.


ಅಗಲಿದ ಪೂರ್ವಾಧ್ಯಕ್ಷರಿಗೆ ಶ್ರದ್ಧಾಂಜಲಿ
ಜೆಸಿಐ ಪುತ್ತೂರು ಘಟಕದ 1996ರ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ರತ್ನಾಕರ ಬಿ ವಿ ರವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಈ ಸಂದರ್ಭದಲ್ಲಿ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ವಲಯ 15ರ ಉಪಾಧ್ಯಕ್ಷರಾದ ಸುಹಾಸ್ ಮರಿಕೆ, ಪುತ್ತೂರು ಘಟಕದ ಕಾರ್ಯದರ್ಶಿ ಮನೋಹರ್ ಪಾಟಾಳಿ ಮಹಿಳಾ ಜೆಸಿ ಸಂಯೋಜಕಿ ಆಶಾ ಮೋಹನ್ ಮುತ್ಲಾಜೆ, ಜೆಜೆಸಿ ಸ್ವಸ್ತಿ ಶೆಟ್ಟಿ ಉಪಸ್ಥಿತರಿದ್ದರು. ಪುತ್ತೂರು ಘಟಕ ಅಧ್ಯಕ್ಷರಾದ ಭಾಗ್ಯೇಶ್ ರೈರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷರಾದ ಜಿತೇಶ್ ರೈ ರವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಪೂರ್ವಾಧ್ಯಕ್ಷೆ ಸ್ವಾತಿ ಜೆ ರೈ ರವರು ವಲಯಾಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು.

LEAVE A REPLY

Please enter your comment!
Please enter your name here