
ನಿಡ್ಪಳ್ಳಿ: ಪಾಣಾಜೆ ಗ್ರಾಮದ ಬೊಳ್ಳಿಂಬಳ ನಿವಾಸಿ ಸೀತಾರಾಮ ರೈ ಯವರ ವೈದ್ಯಕೀಯ ಚಿಕಿತ್ಸೆಗಾಗಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಸಹಾಯಧನ ಚೆಕನ್ನು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ,ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು,ಕೋಶಾಧಿಕಾರಿ ರೂಪೇಶ್ ನಾಯಕ್, ಸಹಕಾರಿ ಜಿಲ್ಲಾ ಕಾರ್ಯದರ್ಶಿ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಪಾಣಾಜೆ ಗ್ರಾಮದ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸುಕಿನ್ ರಾಜ್ ಕೊಂದಲ್ಕಾನ, ಪಾಣಾಜೆ ಸಿ,ಎ ಬ್ಯಾಂಕ್ ನಿರ್ದೇಶಕ ಹರೀಶ್ ಪೂಜಾರಿ ಕಡಮಾಜೆ, ಬಾ.ಜ.ಪ ಪುತ್ತೂರು ಮಂಡಲ ಯುವಮೋರ್ಚಾ ಸದಸ್ಯ ಪ್ರದೀಪ್ ಪಾಣಾಜೆ, ಪಾಣಾಜೆ ಬೂತ್ ಅಧ್ಯಕ್ಷ ಸಂದೀಪ್ ಕೆ ಉಪಸ್ಥಿತರಿದ್ದರು.