ಪುತ್ತೂರು: ಅಕ್ಷಯ ಕಾಲೇಜಿನ ಬೈಟ್-ಬ್ಲಿಟ್ಸ್ ಐಟಿ ಕ್ಲಬ್ ಮತ್ತು ಇಕ್ಯೂಏಸಿ ಸಹಯೋಗದಲ್ಲಿ ʼನೆಕ್ಸ್ಟ್- ಜೆನ್ ಟೆಕ್ʼ ಶೀರ್ಷಿಕೆಯಡಿ ಕಾರ್ಯಾಗಾರವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು. ಈ ಕಾರ್ಯಾಗಾರದಲ್ಲಿ ಪ್ರಾಂಪ್ಟ್ ಎಂಜಿನಿಯರಿಂಗ್, ಜೆಮಿನಿ ಎಐ ಮತ್ತು ನೋ ಕೋಡ್ ವೆಬ್ ಡೆವಲಪ್ಮೆಂಟ್ ವಿಷಯಗಳನ್ನು ಒಳಗೊಂಡಿತ್ತು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ರಕ್ಷಣಾ ಟಿ ಆರ್, ಉಪಪ್ರಾಂಶುಪಾಲರು ವಹಿಸಿ ಇಂತಹ ತಂತ್ರಜ್ಞಾನಾಧಾರಿತ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಹೊಸ ಕಲಿಕೆಗೆ ದಾರಿ ಮಾಡಿಕೊಡುತ್ತವೆ. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಸಚಿನ್ ಉಪ್ಪರ್ನ, ಮೆಂಬರ್ ಆಫ್ ಜಿಡಿಜಿ ಆನ್ ಕ್ಯಾಂಪಸ್ ಆರ್ಗನೈಜರ್, ವಿವೇಕಾನಂದ ಕಾಲೇಜ್ ಆಫ್ ಆರ್ಟ್ಸ್ ಸೈನ್ಸ್ ಅಂಡ್ ಕಾಮರ್ಸ್ (ಸ್ವಾಯತ್ತ), ಪುತ್ತೂರು, ಇವರು ಜೆಮಿನಿ ಎಐ ಮತ್ತು ನೋ-ಕೋಡ್ ವೆಬ್ ಡೆವಲಪ್ಮೆಂಟ್ ಕುರಿತು ಪ್ರಾಯೋಗಿಕ ಮಾಹಿತಿಯನ್ನು ನೀಡಿದರು. ಅವರು ಈ ತಂತ್ರಜ್ಞಾನಗಳ ಬಳಕೆ ಮತ್ತು ಪ್ರಯೋಜನಗಳ ಕುರಿತು ಉದಾಹರಣೆಗಳೊಂದಿಗೆ ವಿವರಿಸಿದರು.
ಸುಶಾಂತ್ ರೈ, ಮೆಂಬರ್ ಆಫ್ ಜಿಡಿಜಿ ಆನ್ ಕ್ಯಾಂಪಸ್ ಆರ್ಗನೈಜರ್, ವಿವೇಕಾನಂದ ಕಾಲೇಜ್ ಆಫ್ ಆರ್ಟ್ಸ್ ಸೈನ್ಸ್ ಅಂಡ್ ಕಾಮರ್ಸ್ (ಸ್ವಾಯತ್ತ), ಪುತ್ತೂರು, ಅವರು ಪ್ರಾಂಪ್ಟ್ ಎಂಜಿನಿಯರಿಂಗ್ ವಿಷಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಅವರು ಸುಧಾರಿತ ಪ್ರಾಂಪ್ಟ್ ತಂತ್ರಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವುದು ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ, ವಿಭಾಗ ಮುಖ್ಯಸ್ಥೆ ಶ್ರೀಮತಿ ದೀಕ್ಷಾ ರೈ, ಐಟಿ ಕ್ಲಬ್ ಸಂಯೋಜಕಿ ಕು. ಸೌಜನ್ಯ ಎಚ್, ಕಾರ್ತಿಕ್ ಪಿ ರೈ, ವಿಧ್ಯಾರ್ಥಿ ಸಂಯೋಜಕ ಐಟಿ ಕ್ಲಬ್ ಉಪಸ್ಥಿತರಿದ್ದರು.
ಕು. ಶ್ರಾದ್ಧ ದ್ವಿತೀಯ ಬಿಸಿಎ, ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಗಣಕ ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.