ಪುತ್ತೂರು: ಅಶೋಕ ಜನಮನ-2025 ವಸ್ತ್ರವಿತರಣೆ ಕಾರ್ಯಕ್ರಮದ ಪ್ರಚಾರ ಸಭೆಯು ಕೆದಿಲ ಗ್ರಾಮದ ಪ್ರಸನ್ನ ಭಟ್ ರವರ ಮನೆ ವಠಾರದಲ್ಲಿ ನಡೆಯಿತು.
ಅಶೋಕ ಜನಮನ ಕಾರ್ಯಕ್ರಮದ ಮಾಹಿತಿಯನ್ನು ಪುತ್ತೂರು ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್ ರವರು ನೀಡಿದರು ಮತ್ತು ಗ್ರಾಮಸ್ಥರಿಗೆ ಆಮಂತ್ರಣ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಟ್ರಸ್ಟ್ ನ ಮಾಧ್ಯಮ ಮುಖ್ಯಸ್ಥರಾದ ಕೃಷ್ಣಪ್ರಸಾದ್ ಬೊಳ್ಳಾವು, ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರೀಶ್ ಕುಮಾರ್ ವಾಲ್ತಜೆ, ಉಪಾಧ್ಯಕ್ಷರಾದ ಬಿಫಾತುಮ್ಮ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಿನಯಕುಮಾರ್, ದೇಂತಡ್ಕ ವನದುರ್ಗ ದೇವಸ್ಥಾನದ ಸದಸ್ಯರಾದ ವಸಂತ ಕುದ್ಮಾನ್, ಪ್ರವೀಣ್ ಕುಮಾರ್ ಕಲ್ಲಾಜೆ ಗುತ್ತು, ಪ್ರಸನ್ನ ಭಟ್ ವಲಂಗಾಜೆ, ಹಮೀದ್ ಕುಕ್ಕಾಜೆ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.