ಪುತ್ತೂರು: ಇನ್ನರ್ ವೀಲ್ ಕ್ಲಬ್ ಪುತ್ತೂರು “ಸುಂದರ ನಗರ-ನಮ್ಮ ಹೊಣೆ” ಘೋಷ ವಾಕ್ಯದ ಅನುಸಾರ ಪುತ್ತೂರಿನ ದರ್ಬೆ ವೃತ್ತದಿಂದ ಐಬಿ ವರೆಗಿನ ರಸ್ತೆ ವಿಭಜಕದಲ್ಲಿ ಸುಂದರ ಹೂ ತೋಟ ನಿರ್ಮಿಸಿ ನಗರ ಸಭೆಗೆ ನೀಡುವ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 16ರಂದು ಬೆಳಗ್ಗೆ 10.30ಕ್ಕೆ ದರ್ಬೆ ವೃತ್ತದ ಸಮೀಪ ಹೂ ತೋಟದ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ನಗರ ಸಭೆಯ ಅಧ್ಯಕ್ಷರಾದ ಲೀಲಾವತಿ ಅಣ್ಣು ನಾಯ್ಕ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಇನ್ನರ್ ವೀಲ್ ಜಿಲ್ಲೆ 318 ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ಭಾಗವಹಿಸಲಿದ್ದಾರೆ.
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ರೋ। ಡಾ| ಪ್ರಕಾಶ್, ಪುತ್ತೂರು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರಸಭೆ ಮುನ್ಸಿಪಲ್ ಕೌನ್ಸಿಲರ್ ವಿದ್ಯಾಗೌರಿ, ಶಶಿಕಲಾ ಸಿ.ಎಸ್, ಪೌರಾಯುಕ್ತರಾದ ವಿದ್ಯಾ ಕಾಳೆ ಉಪಸ್ಥಿತರಿರಲಿದ್ದಾರೆ ಎಂದು ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ರೂಪಲೇಖಾ, ಕಾರ್ಯದರ್ಶಿ ಸಂಧ್ಯಾ ಸಾಯ ತಿಳಿಸಿದ್ದಾರೆ.