ಗೌರವಾಧ್ಯಕ್ಷ ಎನ್ ರವಿಂದ್ರ ಶೆಟ್ಟಿ ನುಳಿಯಾಲು, ಅಧ್ಯಕ್ಷ ಏಳ್ಮುಡಿ ಪಿ ಶ್ರೀಧರ್ ಹೆಗ್ಡೆ
ಪುತ್ತೂರು: ಕೆಮ್ಮಿಂಜೆ ಗ್ರಾಮ ದೈವವಾಗಿರುವ ಕೆಮ್ಮಿಂಜೆ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೂತನವಾಗಿ ಟ್ರಸ್ಟ್ ರಚನೆಯಾಗಿದ್ದು, ಶ್ರೀ ಶಿರಾಡಿ ರಾಜನ್ ದೈವಸ್ಥಾನ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷರಾಗಿ ಎನ್ ರವೀಂದ್ರ ಶೆಟ್ಟಿ ನುಳಿಯಾಲು, ಅಧ್ಯಕ್ಷರಾಗಿ ಏಳ್ಮುಡಿ ಪಿ ಶ್ರೀಧರ ಹೆಗ್ಡೆ ಅವರು ಆಯ್ಕೆಗೊಂಡಿದ್ದಾರೆ.
ಕೆಮ್ಮಿಂಜೆ ಗ್ರಾಮದ ಶಿರಾಡಿ ರಾಜನ್ ದೈವಸ್ಥಾನದ ವಠಾರದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಸಂಚಾಲಕರಾಗಿ ದಯಾನಂದ ಎಮ್, ಗೌರವ ಸಲಹೆಗಾರರಾಗಿ ಡಾ. ದಿನೇಶ್ ಭಟ್ ಮತ್ತು ಡಾ. ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ದೇವಾಡಿಗ, ಉಪಾಧ್ಯಕ್ಷರಾಗಿ ನಿವೃತ್ತ ಎ.ಎಸ್.ಐ ಲೋಕನಾಥ್, ವಿಶ್ವನಾಥ್ ಅವರು ಆಯ್ಕೆಗೊಂಡಿದ್ದಾರೆ. ಉಳಿದಂತೆ 15 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಗ್ರಾಮ ದೈವವಾದ ಶಿರಾಡಿ ರಾಜನ್ ದೈವಸ್ಥಾನವು ಕೆಮ್ಮಿಂಜೆ ಶ್ರೀ ಷಣ್ಮುಖ ಮಹಾವಿಷ್ಣು ದೇವಸ್ಥಾನಕ್ಕೆ ಸಂಬಂದಿಸಿದ್ದು ಎಂದು ಟ್ರಸ್ಟ್‌ನ ಅಧ್ಯಕ್ಷ ಏಳ್ಮುಡಿ ಪಿ.ಶ್ರೀಧರ್ ಹೆಗ್ಡೆ ಅವರು ತಿಳಿಸಿದ್ದಾರೆ.