ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಕುರಾಲ್ ಪರ್ಬ ಮತ್ತು ಪುದ್ವಾರ್ ಒಣಸ್’

0

ರಾಮಕುಂಜ: ನೇತ್ರಾವತಿ ತುಳುಕೂಟ ರಾಮಕುಂಜ ಹಾಗೂ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಇದರ ಆಶ್ರಯದಲ್ಲಿ ‘ಕುರಲ್ ಪರ್ಬ ಹಾಗೂ ಪುದ್ವಾರ್ ವಣಸ್’ ಕಾರ್ಯಕ್ರಮ ಅ.16ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ತುಳುನಾಡಿನಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ, ಗದ್ದೆಯಿಂದ ಭತ್ತದ ತೆನೆಯನ್ನು ತರಕಾರಿಗಳೊಂದಿಗೆ ತಂದು, ತುಳಸಿ ಕಟ್ಟೆಯ ಹತ್ತಿರ ಇಟ್ಟು ಪೂಜೆ ಮಾಡಿ, ತೆನೆಯನ್ನು ಕಟ್ಟುವ ಕ್ರಮವನ್ನು ಮಾಡಿ ಕುರಲ್ ಪರ್ಬವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ತುಳುನಾಡಿನ ಅದರಲ್ಲೂ ವಿಶೇಷವಾಗಿ ನಮ್ಮ ದೇಶದ ಹಬ್ಬಗಳಲ್ಲಿ ಒಂದಾದ ಪುದ್ವಾರ್ ಹಾಗೂ ಕುರಲ್ ಪರ್ಬ ಸಮೃದ್ಧಿಯನ್ನು, ಏಕತೆಯನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ. ವಿದ್ಯಾರ್ಥಿಗಳೆಲ್ಲರೂ ಇದರ ಮಹತ್ವವನ್ನು ಅರಿತುಕೊಳ್ಳಬೇಕೆಂದು ತಿಳಿಸಿದರು. ಸಹಶಿಕ್ಷಕ ಹರೀಶ್ ಆಚಾರ್ಯರವರು ಪುದ್ವಾರ್ ಆಚರಣೆ ಹಾಗೂ ಅದರ ಮಹತ್ವವನ್ನು ತಿಳಿಸಿದರು.


ಸಂಪ್ರದಾಯದಂತೆ ಮಧ್ಯಾಹ್ನ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಬಾಳೆಎಲೆಯಲ್ಲಿ ವಿವಿಧ ತಿನಿಸುಗಳೊಂದಿಗೆ ಹೊಸ ಅಕ್ಕಿ ಊಟವನ್ನುಂಡು ಸವಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಆನಂದ್ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ಎ.ಉಪಸ್ಥಿತರಿದ್ದರು. ಶಿಕ್ಷಕರಾದ ಸರಿತಾ, ಸಂಚಿತಾ, ವಸಂತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here