ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ರಕ್ತೇಶ್ವರಿ -ಪಂಜುರ್ಲಿ ಪರಿವಾರ ದೈವಗಳ ಸಾನಿಧ್ಯದಲ್ಲಿ ನ.6 ಮತ್ತು 7ರಂದು ನಡೆಯುವ ಶಿಲಾ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿ ವಠಾರದಲ್ಲಿ ನಡೆಯಿತು.
ಆರಂಭದಲ್ಲಿ ಗರಡಿಯ ಆಡಳಿತ ಮೊಕ್ತೇಸರ ಹಾಗೂ ಶ್ರೀ ರಕ್ತೇಶ್ವರಿ-ಪಂಜುರ್ಲಿ ದೈವ ಸಾನಿದ್ಯದ ಗೌರವಾಧ್ಯಕ್ಷರಾದ ಸಂಜೀವ ಪೂಜಾರಿ ಕೂರೇಲು ಪ್ರಾರ್ಥನೆ ಸಲ್ಲಿಸಿದರು. ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ರಕ್ತೇಶ್ವರಿ ಪಂಜುರ್ಲಿ ದೈವಗಳ ಸಾನಿಧ್ಯದ ಗೌರವಾಧ್ಯಕ್ಷ ಪ್ರೇಮರಾಜ್ ರೈ ಪರ್ಪುಂಜ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮೋಹನ್‌ದಾಸ್ ರೈ ಕುಂಬ್ರ, ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕಾರ್ಯಾಧ್ಯಕ್ಷ ಅನಿಲ್ ರೈ ಬಾರಿಕೆ ,ಕೋಶಾಧಿಕಾರಿ ಪ್ರಮೀಳಾ ಎಸ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಅತಿಥಿ ಪರ್ಪುಂಜ, ಗೌರವ ಸಲಹೆಗಾರರಾದ ಮಿತ್ರದಾಸ್ ರೈ ಡೆಕ್ಕಳ ಉಪಾಧ್ಯಕ್ಷರಾದ ಶೀನಪ್ಪ ನಾಯ್ಕ ಗುರಿಕುಮೇರು, ಕಾರ್ಯದರ್ಶಿ ಶ್ರೀಮತಿ ಸುರೇಶ್, ಜೊತೆ ಕಾರ್ಯದರ್ಶಿ ರೇಖಾ ಎಸ್. ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬೇಬಿ ರೈ, ಸ್ನೇಹಯುವಕ ಮಂಡಲದ ಅಧ್ಯಕ್ಷ ಅಶ್ವಿನ್ ಪಿದಪಟ್ಲ, ಹೊನ್ನಪ್ಪ ಗೌಡ ಕೋಡಿಬೈಲು, ಕಾಂತಪ್ಪ ಪೂಜಾರಿ, ಶಂಕರ ಪಡ್ಪು, ರಾಧಾಕೃಷ್ಣ ಗೌಡ, ಸುರೇಶ್ ನಾಯಕ್, ರಾಕೇಶ್ ರೈ ಪರ್ಪುಂಜ,ರಾಜೇಶ್ ಪೂಜಾರಿ ಪಿದಪಟ್ಲ, ರಾಜೇಶ್ ಗೌಡ ಶೇಡಿಗುಂಡಿ, ಪುರುಷೋತ್ತಮ ಶಿವಕೃಪ, ಜಗದೀಶ್ ಗೌಡ ಶೇಡಿಗುಂಡಿ, ಪ್ರಜ್ವಲ್ ಗೌಡ ಶಿಬರಿಗುರಿ, ಸುರೇಶ್ ಪೂಜಾರಿ, ನಿತಿನ್ ಗೌಡ, ಜಿತೇಶ್ ಪೂಜಾರಿ, ಪ್ರೀತೇಶ್ ಗೌಡ, ಗಂಗಾಧರ ಪೂಜಾರಿ, ಚಂದ್ರಶೇಖರ ನಾಯ್ಕ, ಭವಿಷ್ ರೈ, ಧನುಷ್ ರೈ, ಉಮೇಶ್ ಗೌಡ, ಗಿರೀಶ್ ಗೌಡ, ಶರತ್ ಪೂಜಾರಿ, ಸುಜಿತ್ ಹೊಸಮನೆ, ರೇಖಾ ರೈ, ಭವ್ಯ ರಾಜೇಶ್, ವಿನುತಾ ಹರೀಶ್, ಹೇಮಲತಾ, ಸುಮಾ ಮಗಿರೆ, ನವಿನಾ ಮಗಿರೆ, ರಕ್ಷ ಕೆ ಆರ್, ಲೀಲಾವತಿ , ಸಾವಿತ್ರಿ ರೈ , ಮೀನಾಕ್ಷಿ,ಸುಶೀಲ ದೇರಣ್ಣ ಪೂಜಾರಿ, ರೋಹಿಣಿ ಕಾಂತಪ್ಪ ಪೂಜಾರಿ, ಯಶೋಧ ಮಾಡಾವು, ಪೂರ್ಣಿಮ ಗೌಡ ಉಪಸ್ಥಿತರಿದ್ದರು. ಬ್ರಹ್ಮ ಕಲಶೋತ್ಸವ ಸಮಿತಿಯ ಸಂಚಾಲಕ ರತನ್ ರೈ ಕುಂಬ್ರ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ರಾಮಜಾಲು ಶ್ರೀ ರಕ್ತೇಶ್ವರಿ ಪಂಜುರ್ಲಿ ಸಪರಿವಾರ ದೈವಗಳ ಸಾನಿಧ್ಯದಲ್ಲಿ ಶ್ರೀ ದೈವಗಳ ಶಿಲಾ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ ನ.೬ ಮತ್ತು ೭ ರಂದು ವಿಜೃಂಭಣೆಯಿಂದ ಜರಗಲಿದೆ.