ಪುತ್ತೂರು: ಬದ್ರಿಯಾ ಮಸ್ಜಿದ್ ಹಾಗೂ ನೂರುಲ್ ಹುದಾ ಮದ್ರಸ ಬಳ್ಳಮಜಲು ಕುರಿಯ ಇದರ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷ ಅಸ್ಸಯ್ಯಿದ್ ಯಹ್ಯಾ ತಂಙಳ್ ಸಾಲ್ಮರ ಅಧ್ಯಕ್ಷತೆಯಲ್ಲಿ ನಡೆಯಿತು. 2024-25ನೇ ಸಾಲಿನ ಲೆಕ್ಕ ಪತ್ರಗಳನ್ನು ಕಾರ್ಯದರ್ಶಿ ಖಲಂದರ್ ದಿಲ್ದಾರ್ ಮಂಡಿಸಿದರು.
2025-26ನೇ ಸಾಲಿನ ಆಡಳಿತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಯಹ್ಯಾ ತಂಙಳ್ ಸಾಲ್ಮರ, ಅಧ್ಯಕ್ಷರಾಗಿ ಅಬ್ದುಲ್ ಕುಂಞಿ ಪಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಹಾಜಿ ಇರುವಂಬಳ್ಳ, ಕೋಶಾಧಿಕಾರಿಯಾಗಿ ಅಯ್ಯೂಬ್ ಗಡಾಜೆ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಅಬ್ಬಾಸ್ ಕುಂಬ್ರ, ಜತೆ ಕಾರ್ಯದರ್ಶಿಯಾಗಿ ಬಶೀರ್ ಬೂಡಿಯಾರ್ ಆಯ್ಕೆಯಾದರು. ಸಮಿತಿ ಸದಸ್ಯರುಗಳಾಗಿ ರಫೀಕ್ ಕುರಿಯ, ಹನೀಫ್ ವಳತಡ್ಕ, ಅಬ್ದುಲ್ ಜಬ್ಬಾರ್ ಕುರಿಯ, ಹನೀಫ್ ಪಡ್ಪು, ಅಶ್ರಫ್ ಸ್ಟೀಲ್, ಉಮ್ಮರ್ ಪರಂಕಿಲ್, ಸಮೀರ್ ಕುರಿಯ, ಖಲಂದರ್ ಮುಸ್ತಫಾ ದಿಲ್ದಾರ್, ಸವಾದ್ ಕುರಿಯ ಆಯ್ಕೆಯಾದರು.